ಬಸವಕಲ್ಯಾಣದಲ್ಲಿ ನಿರ್ಮಾಣ ಹಂತದಲ್ಲಿರುವ ನೂತನ ಅನುಭವ ಮಂಟಪ. 
ಜಿಲ್ಲೆ

ಕಲ್ಯಾಣ ಅಂದಕ್ಕೆ ಬೇಕಿದೆ ಚಂದದ ಯೋಜನೆ

ಹರೀಶ ಕುಲಕರ್ಣಿ

ಬಸವಕಲ್ಯಾಣ: ಬಸವಣ್ಣನವರ ಕಾಯಕ ಭೂಮಿ ಬಸವಕಲ್ಯಾಣದಲ್ಲಿ ಅಭಿವೃದ್ಧಿ ಮಂಡಳಿ ಅಸ್ತಿತ್ವಕ್ಕೆ ಬಂದ 18 ವರ್ಷಗಳಲ್ಲಿ ಶರಣ ಸ್ಮಾರಕಗಳ ಜೀರ್ಣೋದ್ಧಾರ ಕಾರ್ಯಕ್ಕೆ ಚಾಲನೆ ಸಿಕ್ಕಿದ್ದು, ನೂತನ ಅನುಭವ ಮಂಟಪ ಕಾಮಗಾರಿ ಪ್ರಗತಿಯಲ್ಲಿದೆ. ಆದರೆ ನಗರವನ್ನು ಅಂತಾರಾಷ್ಟಿçÃಯ ಪ್ರವಾಸಿ ತಾಣವಾಗಿಸುವ ಆಶಯಕ್ಕೆ ಪೂರಕ ಮೂಲಸೌಕರ್ಯ ಅಭಿವೃದ್ಧಿಪಡಿಸುವ ಕೆಲಸ ಕೈಗೊಳ್ಳಲು ವಿಸ್ಕೃತ ಯೋಜನೆ, ಅಗತ್ಯ ಅನುದಾನ ಜತೆಗೆ ಮುಖ್ಯವಾಗಿ ರಾಜಕೀಯ ಇಚ್ಛಾಶಕ್ತಿ ಬೇಕಿದೆ.

ವಿಶ್ವದಲ್ಲೇ ಪ್ರಥಮ ಬಾರಿಗೆ ಸಮಸಮಾಜ ನಿರ್ಮಾಣಕ್ಕಾಗಿ ನಡೆದ ಚಳವಳಿಗೆ ಸಾಕ್ಷಿಯಾಗಿರುವ ಐತಿಹಾಸಿಕ ನಗರದಲ್ಲಿ ಜನಸಂಖ್ಯೆ ಬೆಳೆಯುತ್ತಿದ್ದಂತೆ ಸಿಟಿ ವ್ಯಾಪ್ತಿಯೂ ವಿಸ್ತಾರಗೊಂಡಿದೆ. ಹೊಸ-ಹೊಸ ಲೇಔಟ್, ಬಡಾವಣೆಗಳು ತಲೆ ಎತ್ತುತ್ತಿವೆ. ನಗರಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯೂ ಕ್ರಮೇಣ ಹೆಚ್ಚುತ್ತಿದೆ. ಇದೆಲ್ಲ ಗಮನಿಸಿದರೆ ಬರುವ ದಿನಗಳಲ್ಲಿ ಸವಾಲಾಗಿ ಕಾಡಲಿರುವ ಮೂಲಸೌಕರ್ಯ ಕೊರತೆ ನೀಗಿಸುವ ನಿಟ್ಟಿನಲ್ಲಿ ಸಮಗ್ರ ಯೋಜನೆ ರೂಪಿಸಿ ಕಾರ್ಯರೂಪಕ್ಕೆ ತರಬೇಕಾದ ತುರ್ತು ಅಗತ್ಯವಿದೆ.

ಒಂದು ಲಕ್ಷದ ಅಸುಪಾಸಿನಲ್ಲಿರುವ ನಗರದ ಜನಸಂಖ್ಯೆಗೆ ಅನುಗುಣ ಮೂಲಸೌಲಭ್ಯಗಳಿಲ್ಲ. ಒಳಚರಂಡಿ (ಯುಜಿಡಿ) ವ್ಯವಸ್ಥೆ ಇಲ್ಲ. ಒಳಚರಂಡಿ ಏಕೆ? ಮಳೆ ನೀರು ಹರಿದು ಹೋಗಲು ಸಹ ವ್ಯವಸ್ಥಿತ ಚರಂಡಿಗಳಿಲ್ಲ. ಜೋರಾದ ಮಳೆಯಾದರೆ ಕೆಲವೆಡೆ ರಸ್ತೆಗೆ ನೀರು ಹರಿದು ದುರ್ವಾಸನೆ ಹರಡುತ್ತದೆ.
ಜನಸಂಖ್ಯೆ ಹೆಚ್ಚಾದಂತೆ ಸಂಚಾರ ದಟ್ಟಣೆಯೂ ಅಧಿಕವಾಗಿದೆ. ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ವರ್ತುಲ ರಸ್ತೆ (ರಿಂಗ್ ರೋಡ್) ನಿರ್ಮಾಣದ ಅಗತ್ಯವಿದ್ದರೂ ಪರಿಣಾಮಕಾರಿ ಪ್ರಯತ್ನಗಳು ನಡೆದಿಲ್ಲ. ಇದಕ್ಕಾಗಿ ಹಿಂದೆ ಯೋಜನೆ ರೂಪಿಸಿ ಸರ್ವೇ ಮಾಡಿದ್ದರೂ ಸರ್ಕಾರಕ್ಕೆ ವರದಿ ಸಲ್ಲಿಕೆ ಆಗಿಲ್ಲ. ಹೀಗಾಗಿ ರಿಂಗ್ ರೋಡ್ ಎರಡು ದಶಕದಿಂದ ನನೆಗುದಿಗೆ ಬಿದ್ದಿದೆ.

ರಿಂಗ್ ರೋಡ್, ಒಳಚರಂಡಿ ಜತೆಗೆ ಸಂಸ್ಕರಣಾ ಘಟಕ ಹಾಗೂ ನಗರದ ಎಲ್ಲ ಪ್ರಮುಖ ರಸ್ತೆ ಬದಿ ಸಮರ್ಪಕ ಚರಂಡಿ, ÀÄಟ್‌ಪಾತ್, ಸಾರ್ವಜನಿಕ ಶೌಚಗೃಹ ನಿರ್ಮಾಣವಾಗಬೇಕಿದೆ. ಕುಡಿಯುವ ನೀರು ಮತ್ತು ವಿದ್ಯುದ್ದೀಕರಣ ವ್ಯವಸ್ಥೆಯಲ್ಲಿ ಸುಧಾರಣೆ ಆಗಬೇಕು. ರಸ್ತೆ, ಚರಂಡಿ, ನೀರು, ವಿದ್ಯುತ್ ಸರಬರಾಜು ವ್ಯವಸ್ಥೆ ಇಲ್ಲವೆಂದಲ್ಲ, ಪ್ರವಾಸಿ ತಾಣವಾಗಿ ಅಭಿವೃದ್ಧಿ ಹೊಂದುತ್ತಿರುವ ನಗರದಲ್ಲಿ ಪೂರಕವಾಗಿ ಕೆಲಸಗಳಾಗಬೇಕಿದೆ.

ಕಲ್ಯಾಣದ ಗತವೈಭವ ಮರು ಸ್ಥಾಪಿಸಬೇಕು. ವಿಶ್ವದ ಜನ ಕಲ್ಯಾಣದತ್ತ ನೋಡುವಂತಾಗಬೇಕು ಎಂಬುದೇ ಬಸವಕಲ್ಯಾಣ ಅಭಿವೃದ್ಧಿ ಮಂಡಳಿ (ಬಿಕೆಡಿಬಿ) ಸ್ಥಾಪನೆ ಹಿಂದಿನ ಉz್ದÉÃಶ. ನಾಡಿನ ಬಸವ ಭಕ್ತರ ಆಶಯವೂ ಹೌದು. ಮಂಡಳಿಯಡಿ ಪ್ರಥಮ ಹಂತದ ಕೆಲಸ ಮುಗಿದಿದೆ. ವಿಶ್ವದ ಪ್ರಥಮ ಅನುಭವ ಮಂಟಪ ಇದ್ದ ಸ್ಥಳದಲ್ಲಿ 600 ಕೋಟಿ ರೂ. ವೆಚ್ಚದಲ್ಲಿ ನೂತನ ಅನುಭವ ಮಂಟಪ ನಿರ್ಮಾಣವಾಗುತ್ತಿದ್ದು, 2025ರ ಅಂತ್ಯಕ್ಕೆ ಪೂರ್ಣಗೊಳುವ ನಿರೀಕ್ಷೆ ಇದೆ. ಅಲ್ಲಿವರೆಗೆ ಅಗತ್ಯ ಸೌಲಭ್ಯ ಜತೆಗೆ ನಗರದ ಅಂದ ಹೆಚ್ಚಿಸಲು ಸಮಗ್ರ ಯೋಜನೆ ರೂಪಿಸುವುದು ಜರೂರಿಯಾಗಿದೆ.