ಜಿಲ್ಲೆ

ಕಲ್ಪಿತ ಸಂಸತ್ ನಾಯಕತ್ವ ಗುಣ ಬೆಳೆಸಲು ಸಹಕಾರಿ

ಮಡಿಕೇರಿ: ನೆಲ್ಲಿಹುದಿಕೇರಿ ಕರ್ನಾಟಕ ಪಬ್ಲಿಕ್ ಶಾಲೆಯ ಪದವಿಪೂರ್ವ ಕಾಲೇಜು ವಿಭಾಗದಲ್ಲಿ ಕಲ್ಪಿತ ಯುವ ಸಂಸತ್ ಕಾರ್ಯಕ್ರಮ ಗುರುವಾರ ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ಕಾಲೇಜಿನ ಪ್ರಭಾರ ಪ್ರಾಂಶುಪಾಲ ಪಿ.ವಿ.ಲೋಕೇಶ್ ಉದ್ಘಾಟಿಸಿ ಮಾತನಾಡಿ, ಇಂತಹ ಕಲ್ಪಿತ ಯುವ ಸಂಸತ್‌ನಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ಸಂಸತ್ತಿನ ಕಾರ್ಯಕಲಾಪಗಳ ಬಗ್ಗೆ ಅರಿವು ಮೂಡಿಸುತ್ತದೆ. ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಬೆಳೆಸಲು ಸಹಕಾರಿಯಾಗಿದೆ ಎಂದು ಪಿ.ವಿ.ಲೋಕೇಶ್ ಹೇಳಿದರು.

ಕಲ್ಪಿತ ಯುವ ಸಂಸತ್ತಿನ ಸಭಾಧ್ಯಕ್ಷರಾಗಿ ಪಿ.ಎಚ್.ಅಸ್ಮೀನಾ, ಆಡಳಿತ ಪಕ್ಷದ ನಾಯಕನಾಗಿ ಶಾಲಾ ನಾಯಕ ಎಂ.ಡಿ.ಹರ್ಷಾದ್, ಸಾಂಸ್ಕೃತಿಕ ಮಂತ್ರಿಗಳಾಗಿ ರೇಷ್ಮಾ ಮತ್ತು ಮುಜಮ್ಮಿಲ್, ಕ್ರೀಡಾ ಮಂತ್ರಿಗಳಾಗಿ ಆಶಿಕಾ ಮತ್ತು ಮುಬಶ್ಶಿರ್, ಸ್ವಚ್ಛತಾ ಮಂತ್ರಿಯಾಗಿ ನಿಜಾಮುದ್ದೀನ್, ಪ್ರವಾಸೋದ್ಯಮ ಮಂತ್ರಿಯಾಗಿ ಲಾವಣ್ಯ, ವಾರ್ತಾ ಮಂತ್ರಿಯಾಗಿ ಅನುಷಾ, ಮತ್ತು ಸದಸ್ಯರಾಗಿ ತನ್ಸೀರಾ ಭಾಗವಹಿಸಿದ್ದರು.

ವಿರೋಧ ಪಕ್ಷದ ನಾಯಕಿಯಾಗಿ ಪೂಜಾ ಸದಸ್ಯರಾಗಿ, ರೀನಾ, ಧನ್ಯ, ತಬ್ಸೀರಾ, ನಿವಿತ, ಶ್ರೀತು, ನಿಶ್ಯ, ಶಹೀರ್, ಶಾಹಿರ್, ತಬ್ರಾಸ್ ಹಾಗೂ ಅಸ್ಮಿಲ್ ಭಾಗವಹಿಸಿದ್ದರು.

ಶಾಲೆಯ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಾದ ಕ್ರೀಡೆ, ಕಲೆ, ಸಾಹಿತ್ಯ, ಪ್ರವಾಸ, ಶಿಸ್ತು, ಸಮವಸ್ತ್ರ ಮುಂತಾದ ವಿಷಯಗಳ ಕುರಿತು ವಿದ್ಯಾರ್ಥಿಗಳು ವಾದ-ಪ್ರತಿವಾದ ಮಾಡಿ ಎಲ್ಲರ ಗಮನ ಸೆಳೆದರು. ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಉಪನ್ಯಾಸಕಿ ಕೆ.ಎ.ಭಾಗ್ಯಜ್ಯೋತಿ ಮಾರ್ಗದರ್ಶನದಲ್ಲಿ ಕಲ್ಪಿತ ಯುವ ಸಂಸತ್ ಕಾರ್ಯಕ್ರಮ ನಡೆಯಿತು.

ಈ ಸಂದರ್ಭ ಉಪಾನ್ಯಾಸಕರಾದ ಜಸ್ಟಿನ್ ಕೊರೆಯಾ, ಕೆ.ಎಸ್.ಕೃಷ್ಣ, ಬಿ.ಎಸ್.ವಿಶ್ವನಾಥ್, ಧನಂಜಯ್ ಹಾಗೂ ತುಳಸಿ ಇದ್ದರು.