Oplus_131072 
ಜಿಲ್ಲೆ

ಕಲ್ಪನೆ ಚಿತ್ರಕೃತಿಯಿಂದ ಸಮಾಜ ಜೀವಂತ

ಕಲಬುರಗಿ: ಕಲಾವಿದರ ಕುಂಚದಿಂದ ಮೂಡಿರುವ ಚಿತ್ರಕಲೆಗಳು ಸಮಾಜದ ವಿಭಿನ್ನ ಸಂಗತಿಗಳನ್ನು ವಿವರಿಸುವುದರ ಜತೆಗೆ ಭಿನ್ನ-ವಿಭಿನ್ನ ಭಾವಲೋಕಕ್ಕೆ ಕರೆದೊಯ್ಯುತ್ತವೆ. ಕಲಾ ಪೋಷಕರ ಪ್ರೋತ್ಸಾಹದಿಂದ ದೃಶ್ಯಕಲಾ ಕ್ಷೇತ್ರ ಸಾಕಷ್ಟು ಬೆಳೆದಿದೆ. ಕಲಾವಿದರ ಕಲ್ಪನೆಯ ಚಿತ್ರಕೃತಿಗಳು ಸಮಾಜವನ್ನು ಸದಾ ಜೀವಂತವಾಗಿರಿಸುತ್ತವೆ ಎಂದು ಹಿರಿಯ ಚಿತ್ರ ಕಲಾವಿದ ಬಸವರಾಜ ಉಪ್ಪಿನ್ ಅಭಿಪ್ರಾಯಪಟ್ಟರು.

ಕಲಬುರಗಿಯ ದೃಶ್ಯ ಬೆಳಕು ಸಾಂಸ್ಕೃತಿಕ ಸಂಸ್ಥೆ ಹಾಗೂ ವಿ.ಬಿ. ಬಿರಾದಾರ್ ಕಲಾ ಪ್ರತಿಷ್ಠಾನದ ಸಹಯೋಗದಡಿ ಮಾನಕರ್ ಬಡಾವಣೆಯ ಬಿಸಿಲು ಆರ್ಟ್ ಗ್ಯಾಲರಿಯಲ್ಲಿ ಲಿಯೋನಾರ್ಡೊ ಡಾ.ವಿಂಚಿ ಜನ್ಮದಿನ ನಿಮಿತ್ತ ಮಂಗಳವಾರ ಏರ್ಪಡಿಸಿದ್ದ ವಿಶ್ವ ದೃಶ್ಯಕಲಾ ದಿನ ಹಾಗೂ ಹಿರಿಯ ಕಲಾವಿದ ವಿ.ಬಿ. ಬಿರಾದಾರ್ ಅವರ ನಿಸರ್ಗ ಚಿತ್ರಗಳ ಪ್ರದರ್ಶನ ಮತ್ತು ಬಸವರಾಜ ಜಾನೆ ಕಲಾ ಪ್ರಾತ್ಯಕ್ಷಿಕೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕಲ್ಯಾಣ ಕರ್ನಾಟಕದ ಸೃಜನಶೀಲ ಕಲಾವಿದರು ಅತ್ಯುತ್ತಮ ಚಿತ್ರ ಬಿಡಿಸುವ ಮೂಲಕ ರಾಷ್ಟ ಮಟ್ಟದ ಕಲಾವಿದರಾಗಿ ಹೆಸರು ಗಳಿಸಿರುವುದು ಹೆಮ್ಮೆಯ ಸಂಗತಿ. ಮೊದಲು ಚಿತ್ರಕಲಾ ಅಧ್ಯಯನ ಮಾಡಲು ಯುವಕರಿಗೆ ಅವಕಾಶಗಳಿರಲಿಲ್ಲ. ಆದರೆ ಪ್ರಸ್ತುತ ದೃಶ್ಯಕಲಾ ಬೇಡಿಕೆಯಿರುವ ಕ್ಷೇತ್ರ. ದೃಶ್ಯಕಲಾ ಅಧ್ಯಯನ ಮತ್ತು ಕೌಶಲ ಕಲಿಕೆಗೆ ಸಂಸ್ಥೆಗಳಿವೆ. ಹಿರಿಯ ಕಲಾವಿದರ ಪ್ರೋತ್ಸಾಹ ಸಿಗುತ್ತಿದೆ. ಯುವಕರು ಕಲೆಯನ್ನು ತಪಸ್ಸಿನಂತೆ ಪ್ರಾಯೋಗಿಕತೆಗೆ ಒತ್ತು ನೀಡಿ ಕಲೆ ಕರಗತ ಮಾಡಿಕೊಂಡರೆ ವಿಶ್ವಮಟ್ಟದಲ್ಲಿ ಮಿಂಚಬಹುದು ಎಂಬುದಕ್ಕೆ ಖ್ಯಾತ ಲಿಯೋನಾರ್ಡೊ ಡಾ.ವಿಂಚಿಯ ಚಿತ್ರಕಲೆ ಸ್ಫೂರ್ತಿ ಮತ್ತು ಪ್ರೇರಣೆ ಎಂದರು.

ಕರ್ನಾಟಕ ಲಲಿತಕಲಾ ಅಕಾಡೆಮಿ ಸದಸ್ಯ ಬಸವರಾಜ ಜಾನೆ ಮಾತನಾಡಿದರು. ಪುಸ್ತಕ ಪ್ರಾಧಿಕಾರದ ಸದಸ್ಯ ಬಿ.ಎಚ್. ನಿರಗುಡಿ ಮಾತನಾಡಿ, ಸಾಹಿತ್ಯ ಮತ್ತು ಕಲಾ ಕ್ಷೇತ್ರದ ನಡುವೆ ಅವಿನಾಭಾವ ಸಂಬAಧವಿದೆ. ಸಮಾಜದ ವಿಭಿನ್ನ ಸಂಸ್ಕೃತಿ ಮತ್ತು ಸಮಕಾಲೀನ ಸಂದೇಶಗಳನ್ನು ಹೇಳುತ್ತವೆ. ಸಾಹಿತ್ಯ ಮತ್ತು ಕಲಾ ಕ್ಷೇತ್ರ ಎಲ್ಲರಿಗೂ ಒಗ್ಗುವುದಿಲ್ಲ. ಎರಡು ಕ್ಷೇತ್ರಗಳಲ್ಲಿ ಆಸಕ್ತಿ ಬೆಳೆಸಿಕೊಂಡರೆ ಅತ್ಯುತ್ತಮ ಅವಕಾಶ ಸಿಗಲಿವೆ. ಕಲಬುರಗಿಯಲ್ಲಿ ಸೃಜನಶೀಲ ಕಲಾವಿದರಿದ್ದು, ಸೂಕ್ತ ಕಲಾ ಗ್ಯಾಲರಿಯೊಂದು ಆರಂಭವಾದರೆ ಪ್ರೋತ್ಸಾಹ ಮತ್ತು ಉತ್ತೇಜನ ಸಿಗಲಿದೆ ಎಂದು ಆಶಿಸಿದರು.
ಅಧ್ಯಕ್ಷತೆ ವಹಿಸಿದ್ದ ನಾಡೋಜ ಡಾ.ಜೆ.ಎಸ್. ಖಂಡೇರಾವ್ ಮಾತನಾಡಿ, ೧೪ನೇ ಶತಮಾನದ ಪ್ರತಿಭಾವಂತ ಕಲಾವಿದ ಲಿಯೋನಾರ್ಡೊ ಡಾ.ವಿಂಚಿ ಜನ್ಮದಿನ ಅಂಗವಾಗಿ ವಿಶ್ವ ದೃಶ್ಯಕಲಾ ದಿನ ಆಚರಿಸಲಾಗುತ್ತಿದೆ. ಚಿತ್ರಕಲಾ ಕ್ಷೇತ್ರ ಅಭಿವೃದ್ಧಿಗೆ ಲಿಯೋನಾರ್ಡೊ ಡಾ.ವಿಂಚಿ ಸ್ಪೂರ್ತಿಯೇ ಕಾರಣ. ಚಿತ್ರಕಲೆ, ದೃಶ್ಯ ಕಲೆ, ಪೇಂಟಿAಗ್ ಕ್ಷೇತ್ರದ ಆಸಕ್ತ ಕಲಾವಿದರು ಸಮಯ ಪ್ರಜ್ಞೆ ಮತ್ತು ಸೃಜನಶೀಲ ಮನಸ್ಸಿನಿಂದ ಪ್ರಾಯೋಗಿಕತೆಗೆ ಒಗ್ಗಿಕೊಂಡರೆ ಅತ್ಯುತ್ತಮ ಸಾಧಕನಾಗಲು ಸಾಧ್ಯ ಎಂದು ಸಲಹೆ ನೀಡಿದರು.
ಪ್ರಮುಖರಾದ ಕೆ.ಎಸ್. ಬಸವಪ್ರಭು, ಸಂಗಯ್ಯ ಹಳ್ಳದಮಠ, ಮೋಹನ ಸೀತನೂರ, ಡಾ.ಮಾನಯ್ಯ ಬಡಿಗೇರ, ಬಾಬುರಾವ ಎಚ್., ಅಂಬಾರಾಯ ಚಿನ್ಮಳ್ಳಿ, ಮಂಜುಳಾ ಜಾನೆ, ಶಾಂತಲಾ ನಿಷ್ಠಿ, ಮೀನಾಕ್ಷಿ ಗುತ್ತೇದಾರ್, ಲಕ್ಷಿö್ಮÃಕಾಂತ ಮನೂಕರ್, ಸಿದ್ದು ಮರಗೋಳ, ಜಗದೀಶ ಕಾಂಬಳೆ, ಡಾ.ಕೆ.ಎಂ. ಕುಮಾರಸ್ವಾಮಿ, ಗೋಪಾಲ ಕೆ.ಪಿ. ಇತರರಿದ್ದರು.
ಪ್ರತಿಷ್ಠಾನದ ಅಧ್ಯಕ್ಷ ವಿ.ಬಿ. ಬಿರಾದಾರ್ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ದೃಶ್ಯಬೆಳಕು ಸಂಸ್ಥೆ ಅಧ್ಯಕ್ಷ ಡಾ.ಪಿ. ಪರಶುರಾಮ ನಿರೂಪಣೆ ಮಾಡಿದರು. ಮಲ್ಲಿಕಾರ್ಜುನ ಕೊರಳ್ಳಿ ವಂದಿಸಿದರು.