ನುಗ್ಗೆಹಳ್ಳಿ: ನುಗ್ಗೆಹಳ್ಳಿ ಕಲ್ಕೆರೆ ಕೃಷಿ ಪತ್ತಿನ ಸಹಕಾರ ಸಂಘದಿಂದ 6.88 ಕೋಟಿ ರೂ.ಗಳ ಸಾಲವನ್ನು ಶೂನ್ಯ ಬಡ್ಡಿ ದರದಲ್ಲಿ ರೈತರಿಗೆ ವಿತರಿಸಲಾಗಿದೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ತಿಳಿಸಿದರು.
ಕಲ್ಕೆರೆ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ಸಾಲದ ಚೆಕ್ ವಿತರಣೆ ಹಾಗೂ ಸಕ್ಕರೆ ಕಾರ್ಖಾನೆ ಷೇರುದಾರರಿಗೆ ಉಚಿತ ಸಕ್ಕರೆ ವಿತರಣೆ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.
ಜಾತ್ಯತೀತವಾಗಿ, ಪಕ್ಷಾತೀತವಾಗಿ ರೈತರಿಗೆ 6.88 ಕೋಟಿ ರೂ. ಸಾಲ ವಿತರಿಸಲಾಗಿದೆ. ಸರ್ಕಾರದ ಸಾಲ ಮನ್ನಾ ಯೋಜನೆಯಿಂದ 5.40 ಕೋಟಿ. ರೂ. ಸಾಲ ಮನ್ನಾ ಆಗಿದ್ದರಿಂದ ಸಂಕಷ್ಟದಲ್ಲಿದ್ದ ಈ ಭಾಗದ ಎಲ್ಲ ರೈತರಿಗೆ ಹೆಚ್ಚು ಅನುಕೂಲವಾಗಿದೆ ಎಂದರು.
ಹೇಮಾವತಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ವೆಂಕಟೇಶ್, ನಿರ್ದೇಶಕಿ ಭಾರತೀ, ಎನ್.ಡಿ.ಶಿವಪ್ಪ, ಸಂಘದ ಅಧ್ಯಕ್ಷ ಕೆ.ಆರ್. ಸುಬ್ಬೆಗೌಡ, ಕಾರ್ಯದರ್ಶಿ ರಮೇಶ್, ಮೇಲ್ವಿಚಾರಕ ಎಸ್.ಆರ್.ಮಧು, ಕಾರ್ಯ ನಿರ್ವಹಣಾ ಅಧಿಕಾರಿ ಕೆ.ಶರ್ಮ,ಸಿ.ಎನ್.ಮಧುಕರ್, ಮುಖಂಡರಾದ ನಾಗೇಗೌಡ, ಶಿವಣ್ಣ, ಆನಂದ್, ರಮೇಶ್, ಗಂಗಾಧರ್, ಬೈರೇಗೌಡ, ಸುರೇಶ್, ಕೃಷ್ಣಯ್ಯ ಇತರರು ಇದ್ದರು.