ಜಿಲ್ಲೆ

ಕಲೋತ್ಸವದಲ್ಲಿ ವಿದ್ಯಾರ್ಥಿನಿಯರ ಸಂಭ್ರಮ

ಚಿತ್ರದುರ್ಗ: ನಗರದ ತರಾಸು ರಂಗಮಂದಿರದಲ್ಲಿ ಲಾಸಿಕಾ ಫೌಂಡೇಶನ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಭಾನುವಾರ ಕಲೋತ್ಸವ 2024 ಶಾಸ್ತ್ರೀಯ ನೃತ್ಯಗಳ ಕಾರ್ಯಕ್ರಮ ನಡೆಯಿತು.

ಫೌಂಡೇಶನ್‌ನ ವಿದ್ಯಾರ್ಥಿನಿಯರು ವೈವಿಧ್ಯಮಯ ನಾಟ್ಯ ಪ್ರದರ್ಶಿಸಿದರು. ಇದೇ ವೇಳೆ ಚೆನ್ನಬೈರಾ ದೇವಿ ನೃತ್ಯರೂಪಕ ಕಲಾರಸಿಕರ ಗಮನ ಸೆಳೆಯಿತು.