ಜಿಲ್ಲೆ

ಕಲೆಯ ಮೂಲಕ ಸಾಧನೆ ಸಾಧ್ಯ

ಎ.ಎಸ್.ಮಣಿಕಂಠ

ಚಾಮರಾಜನಗರ: ಜಿಲ್ಲೆಯು ಜಾನಪದ ತವರೂರಾಗಿದ್ದು, ಕಲೆಯ ಮೂಲಕ ಸಾಧನೆ ಸಾಧ್ಯವಾಗಿದೆ ಎಂದು ತಿ.ನರಸೀಪುರ ನಳಂದ ಬೌದ್ಧ ವಿಹಾರದ ಭೋಧಿರತ್ನ ಬಂತೇಜಿ ಹೇಳಿದರು.

ನಗರದ ವರನಟ ಡಾ.ರಾಜ್‌ಕುಮಾರ್ ರಂಗಮಂದಿರದಲ್ಲಿ ಜ್ಞಾನದೀಪ ಟ್ರಸ್ಟ್ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಭಾವಗೀತೆ ಹಾಗೂ ಜಾನಪದ ಗೀತೆಗಳ ಗಾಯನ ಸ್ಪರ್ಧೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳು ಕಲೆಯ ಮೂಲಕ ಏನನ್ನು ಬೇಕಾದರೂ ಸಾಧಿಸಬಹುದಾಗಿದೆ. ಕಲೆಯು ಯಾರ ಮನೆ ಸ್ವತ್ತಲ್ಲ. ಕಲೆಗೆ ಬಡವ-ಶ್ರೀಮಂತ ಎಂಬ ಭೇಧಭಾವ ಇಲ್ಲ. ಕಲೆಯು ಎಲ್ಲರಲ್ಲೂ ಅಡಗಿದೆ ಅದನ್ನು ಗುರುತಿಸಲು ಒಂದು ವೇದಿಕೆ ಅವಶ್ಯಕವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಜ್ಞಾನದೀಪ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಆರ್.ಪಿ.ನಂಜುಂಡಸ್ವಾಮಿ, ಅಧ್ಯಕ್ಷ ಪಿ.ಜಯರಾಮ್, ಜಯ ಕರ್ನಾಟಕ ಜನಪರ ವೇದಿಕೆ ರಾಜ್ಯ ಕಾರ್ಯಾಧ್ಯಕ್ಷ ರಾಮಚಂದ್ರ, ರಾಜ್ಯ ಉಪಾಧ್ಯಕ್ಷ ಕೆ.ಎನ್.ಜಗದೀಶ್, ರಾಜ್ಯ ಸಂಘಟನಾ ಕಾರ್ಯದರ್ಶಿ ಗೋಪಿ, ಜಿಲ್ಲಾಧ್ಯಕ್ಷ ಜಕಾವುಲ್ಲಾ, ನಗರಸಭಾ ಉಪಾಧ್ಯಕ್ಷೆ ಮಮತ ಬಾಲಸುಬ್ರಹ್ಮಣ್ಯ, ಸದಸ್ಯರಾದ ನೀಲಮ್ಮ, ಕುಮುದಾ ಕೇಶವಮೂರ್ತಿ, ಕರ್ನಾಟಕ ಸೇನಾ ಪಡೆ ಅಧ್ಯಕ್ಷ ರ್ಶಋಈನಿವಾಸಗೌಡ, ಉಮ್ಮತ್ತೂರು ಚಂದ್ರು ಹಾಗೂ ಇತರರು ಭಾಗವಹಿಸಿದ್ದರು.