ಜಿಲ್ಲೆ

ಕಲೆಗಳ ಉಳಿವಿಗೆ ಸರ್ಕಾರ ಪ್ರೋತ್ಸಾಹ ನೀಡಲಿ

Mandya

ಕಿಕ್ಕೇರಿ: ಕಲೆ-ಕಲಾವಿದ ಒಂದೇ ನಾಣ್ಯದ ಎರಡು ಮುಖಗಳಾಗಿದ್ದು ಕಲೆಗಳ ಜತೆಗೆ ಕಲಾವಿದರ ಉಳಿವಿಗೆ ಸರ್ಕಾರ ಪ್ರೋತ್ಸಾಹ ನೀಡಬೇಕು ಎಂದು ಸುಬ್ರಹ್ಮಣ್ಯ ಸೇವಾ ಟ್ರಸ್ಟ್ ಅಧ್ಯಕ್ಷ ಬಿ.ಎಂ.ಕಿರಣ್ ತಿಳಿಸಿದರು.


ಹೋಬಳಿಯ ಲಕ್ಷ್ಮೀಪುರ ಗ್ರಾಮದಲ್ಲಿ ಗುರುವಾರ ರಾತ್ರಿ ಬನ್ನಿಮಂಟಪ ಯುವ ಬಳಗ ಏರ್ಪಡಿಸಿದ್ದ ಕುರುಕ್ಷೇತ್ರ ನಾಟಕ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿ, ನಾಟಕಗಳು ಗ್ರಾಮೀಣ ಭಾಗದ ಜನರ ಕಲೆಗಳಿಗೆ ಪ್ರಮುಖ ವೇದಿಕೆಯಾಗಿವೆ. ಯುವ ಪೀಳಿಗೆ ಇಂತಹ ಕಲೆಗಳ ಉಳಿವಿಗೆ ಹಿರಿಯರೊಂದಿಗೆ ಕೈಜೋಡಿಸಬೇಕು ಎಂದು ಹೇಳಿದರು.


ಸಮಾಜ ಸೇವಕ ಆರ್‌ಟಿಒ ಮಲ್ಲಿಕಾರ್ಜುನ, ಮುಡಾ ಅಧ್ಯಕ್ಷ ಕೆ.ಶ್ರೀನಿವಾಸ್, ಮನ್ಮುಲ್ ನಿರ್ದೇಶಕ ಎಚ್.ಟಿ. ಮಂಜು, ಮುಖಂಡ ಎಲ್.ಪಿ. ನಂಜಪ್ಪ ಮಾತನಾಡಿದರು. ಗ್ರಾಪಂ ಅಧ್ಯಕ್ಷ ರಘು, ಎಲ್.ಪಿ.ನಂಜಪ್ಪ, ಎಲ್.ಕೆ.ಮಂಜುನಾಥ್, ಮನು, ಪ್ರಕಾಶ್, ಎಲ್.ಎಸ್.ಧರ್ಮಪ್ಪ ಇತರರಿದ್ದರು.