ಜಿಲ್ಲೆ

ಕಲೆ, ಕಲಾವಿದರ ಪೊ›ೕತ್ಸಾಹಕ್ಕೆ ಸರ್ಕಾರದಿಂದ ನೆರವು

ಯಲ್ಲಾಪುರ: ಯಕ್ಷಗಾನ ನಾಡಿನ ಶ್ರೇಷ್ಠ ಕಲೆಯಾಗಿದ್ದು, ಕಲೆ ಹಾಗೂ ಕಲಾವಿದರ ಪೋ›ತ್ಸಾಹಕ್ಕೆ ಸರ್ಕಾರದಿಂದ ಅಗತ್ಯ ನೆರವು ನೀಡಲಾಗುವುದು ಎಂದು ಸಕ್ಕರೆ ಹಾಗೂ ಕಾರ್ವಿುಕ ಸಚಿವ ಶಿವರಾಮ ಹೆಬ್ಬಾರ ಹೇಳಿದರು.

ಅವರು ಭಾನುವಾರ ರಾತ್ರಿ ಪಟ್ಟಣದ ನಿಸರ್ಗಮನೆಯಲ್ಲಿ ಸಂಕಲ್ಪ ಸಂಸ್ಥೆಯ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಯಕ್ಷಗಾನೋತ್ಸವ -ಹಿಮ್ಮೇಳ ಗಾನ ಹಬ್ಬದ ಸಮಾರೋಪ ಸಮಾರಂಭದಲ್ಲಿ ನೂತನ ಸಂಕಲ್ಪ ಕಲಾ ಭವನ ಉದ್ಘಾಟಿಸಿ, ಹೊಸ್ತೋಟ ಮಂಜುನಾಥ ಭಾಗವತರ ಸಂಸ್ಮರಣೆ ಪ್ರಯುಕ್ತ ಭಾಗವತರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.

ಹಿರಿಯ ಪತ್ರಕರ್ತ ಎಂ.ಕೆ. ಭಾಸ್ಕರ ರಾವ್ ಮಾತನಾಡಿ, ಹಿಂದಿನ ಕಲಾವಿದರು ಕಲೆಯ ಶ್ರೇಷ್ಠತೆಯನ್ನು ಕಾಯ್ದುಕೊಂಡು ಬಂದಿದ್ದು, ಅದನ್ನು ಯುವ ಕಲಾವಿದರು ಮುಂದುವರಿಸಿಕೊಂಡು ಹೋಗಬೇಕು ಎಂದರು.

ಉದ್ಯಮಿ ವೆಂಕಟ್ರಮಣ ಹೆಗಡೆ, ಬಿಜೆಪಿ ಮುಖಂಡರಾದ ವಿನೋದ ಪ್ರಭು, ರಾಮು ನಾಯ್ಕ, ಉಮೇಶ ಭಾಗ್ವತ, ಪಿಎಲ್​ಡಿ ಬ್ಯಾಂಕ್ ಅಧ್ಯಕ್ಷ ಆರ್.ಎಸ್. ಭಟ್ಟ, ವಿಕಾಸ ಅರ್ಬನ್ ಬ್ಯಾಂಕ್ ಅಧ್ಯಕ್ಷ ಮುರಳಿ ಹೆಗಡೆ, ಕಲಾವಿದರಾದ ರಾಘವೇಂದ್ರ ಆಚಾರಿ ಜನ್ಸಾಲೆ, ಕಾವ್ಯಶ್ರೀ ಅಜೇರು, ಪ್ರಮುಖರಾದ ಡಿ.ಎನ್. ಗಾಂವ್ಕಾರ, ಎನ್.ಎನ್. ಹೆಬ್ಬಾರ, ಎನ್.ಕೆ. ಭಟ್ಟ ಮೆಣಸುಪಾಲ, ಎಂ.ಆರ್. ಹೆಗಡೆ, ವೇಣುಗೋಪಾಲ ಮದ್ಗುಣಿ ಇತರರಿದ್ದರು. ಡಾ. ರವಿ ಭಟ್ಟ ಬರಗದ್ದೆ, ನಾಗರಾಜ ಹೆಗಡೆ, ನಿರ್ವಹಿಸಿದರು.

ಯುವಕರು ಪಾಶ್ಚಾತ್ಯ ಸಂಸ್ಕೃತಿಗೆ ಮರುಳಾಗಿ ನಮ್ಮತನ ಕಳೆದುಕೊಳ್ಳು ತ್ತಿದ್ದಾರೆಂಬುದು ಸುಳ್ಳು. ಇದಕ್ಕೆ ಯಕ್ಷಗಾನದಂತಹ ಕಲೆಯತ್ತ ಯುವಕರು ಆಕರ್ಷಿತರಾಗುತ್ತಿರುವುದು ಉತ್ತಮ ನಿದರ್ಶನ. ಹಿರಿಯ ಕಲಾವಿದರ ಮಾರ್ಗದರ್ಶನದಲ್ಲಿ ಯುವ ಕಲಾವಿದರು ಕಲೆಯನ್ನು ಬೆಳೆಸಿಕೊಂಡು ಹೋಗಬೇಕು.| ಪ್ರಮೋದ ಹೆಗಡೆ ಸಂಕಲ್ಪ ಸಂಸ್ಥೆ ಅಧ್ಯಕ್ಷ