ಬೆಳಗಾವಿ: ನಗರದ ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರು ಪೂರೈಸಬೇಕು. ಮಳೆಗಾಲದಲ್ಲಿ ಕಲುಷಿತ ನೀರು ಸರಬರಾಜು ಆಗದಂತೆ ನಿಗಾವಹಿಸಬೇಕು ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಖಡಕ್ಕಾಗಿ ಸೂಚಿಸಿದರು.
ನಗರದ ಯೋಜನಾ ಅನುಷ್ಠಾನ ಘಟಕದ ಕಚೇರಿಯಲ್ಲಿ ಈಚೆಗೆ ಜರುಗಿದ ನಿರಂತರ ನೀರು ಸರಬರಾಜು ಯೋಜನೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ನೀರು ಶುದ್ಧೀಕರಣ ಘಟಕಗಳಲ್ಲಿ ಹಾಗೂ ಜಲ ಸಂಗ್ರಹಾರಗಳಲ್ಲಿ ಸ್ವಚ್ಛತೆ ಕಾಪಾಡಿ, ನಗರಕ್ಕೆ ಶುದ್ಧ ನೀರು ಸರಬರಾಜು ಮಾಡುವಂತೆ ತಿಳಿಸಿದರು.
ನಗರದಲ್ಲಿ ವಿಶ್ವ ಬ್ಯಾಂಕ್ ನೆರವಿನ ಯೋಜನೆಗಳ ಮಾಹಿತಿ ಪಡೆದು ಯೋಜನೆ ಯಶಸ್ವಿ ಅನುಷ್ಠಾನಕ್ಕೆ ಸಲಹೆ-ಸೂಚನೆ ನೀಡಿದರು. ಪ್ರಗತಿಯಲ್ಲಿರುವ ನೀರು ಸರಬರಾಜು ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸುವ ಜತೆಗೆ, ಯೋಜಿತ ನೀರು ಶುದ್ಧೀಕರಣ ಘಟಕವನ್ನು ಡಿಸೆಂಬರ್-2024ರೊಳಗಾಗಿ ಪೂರ್ಣಗೊಳಿಸುವಂತೆ ನಿರ್ದೇಶನ ನೀಡಿದರು.
ಕೆಯುಐಡಿಎಫ್‌ಸಿಯ ಅಧೀಕ್ಷಕ ಅಭಿಯಂತರೆ ಲಕ್ಷ್ಮೀ ಸುಳಗೇಕರ, ಕಾರ್ಯನಿರ್ವಾಹಕ ಅಭಿಯಂತರರಾದ ಅಶೋಕ ಬುರಕುಲೆ, ವಿ.ಎಂ.ಸಾಲಿಮಠ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ರಾದ ಶಶಿಕುಮಾರ ಹತ್ತಿ, ವಿಜಯಾನಂದ ಸೊಲ್ಲಾಪುರ, ಉಮೇಶ ನಿಟ್ಟೂರಕರ, ಬಸವರಾಜ ಬೇವಿನಕಟ್ಟಿ, ಎಲ್‌ಆ್ಯಂಡ್‌ಟಿ ಯೋಜನಾ ವ್ಯವಸ್ಥಾಪಕರು ಇತರರಿದ್ದರು.