ರಾಯಬಾಗ: ವಿದ್ಯಾರ್ಥಿಗಳು ಸಮಾಜದಲ್ಲಿ ಉನ್ನತ ಸ್ಥಾನ ಪಡೆದು, ಎಲ್ಲರಿಂದ ಗೌರವಿಸಲ್ಪಟ್ಟಾಗ ಮಾತ್ರ ಗುರುವಿನ ಶ್ರಮ ಸಾರ್ಥಕ ಎಂದು ಶಿಕ್ಷಕಿ ರಾಜಶ್ರೀ ಪಾಟೀಲ ಹೇಳಿದರು. ತಾಲೂಕಿನ ಯಡ್ರಾಂವ ಗ್ರಾಮದ ಮಾಳಿ ತೋಟದಲ್ಲಿ ರಾಯಬಾಗದ ಮಹಾವೀರ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆಯ 1985-92ನೇ ಸಾಲಿನ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಂದ ಸೇವಾ ನಿವೃತ್ತಿ ಹೊಂದಿದ ಶಿಕ್ಷಕಿಯರಿಗೆ ಶನಿವಾರ ಹಮ್ಮಿಕೊಂಡಿದ್ದ ಸತ್ಕಾರ ಸಮಾರಂಭದಲ್ಲಿ ಮಾತನಾಡಿದರು. ನಿವೃತ್ತ ಶಿಕ್ಷಕಿಯರಾದ ನಿರ್ಮಲಾ ಕಠಾರೆ, ಕಸ್ತೂರಿ ಚೌಗಲಾ ಮತ್ತು ಪುಷ್ಪಾ ಮಗೆಣ್ಣವರ ಅವರನ್ನು ಸತ್ಕರಿಸಲಾಯಿತು. ಅರುಣಾ ಪೊಮ್ಮಾಯಿ, ವಿದ್ಯಾಧರ ಕುಲಗುಡೆ, ರಾಜು ಶಿವಕಾಳೆ, ರಾಜು ಶೆಟ್ಟಿ, ಪ್ರಶಾಂತ ನಾಯಿಕ, ಶೀತಲ ಪಾಟೀಲ ಇತರರಿದ್ದರು.