ಜಿಲ್ಲೆ

ಕಲಾವಿದರನ್ನು ಗುರುತಿಸಿ, ಪ್ರೋತ್ಸಾಹಿಸುವ ಕೆಲಸವಾಗಲಿ

ಯಡ್ರಾಮಿ: ಮೌಖಿಕ ಸಂಪ್ರದಾಯದಲ್ಲಿ ಸಾಗಿಬಂದ ಗದ್ಯ, ಪದ್ಯವೇ ಜಾನಪದವಾಗಿದೆ. ಇದು ವೈಚಾರಿಕವಷ್ಟೇ ಅಲ್ಲ, ವೈಜ್ಞಾನಿಕತೆಯನ್ನೂ ಒಳಗೊಂಡಿದೆ ಎಂದು ಯುವ ಸಾಹಿತಿ ಸಂತೋಷ ನವಲಗುಂದ ಮಳ್ಳಿ ತಿಳಿಸಿದರು.

ವಿರಕ್ತ ಮಠದಲ್ಲಿ ಸಗರಾದ್ರಿ ಸಾಂಸ್ಕೃತಿಕ ಸಂಗಮ ವೇದಿಕೆಯಿಂದ ಗುರುವಾರ ಹಮ್ಮಿಕೊಂಡಿದ್ದ ಕರ್ನಾಟಕ ಜಾನಪದ ಪರಿಷತ್ ತಾಲೂಕು ಘಟಕದ ಪದಾಧಿಕಾರಿಗಳ ಪದಗ್ರಹಣ ಹಾಗೂ ಕಾರ್ಯಚಟುವಟಿಕೆ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ, ಜಾನಪದ ನಮ್ಮ ಸಂಸ್ಕೃತಿ ಮತ್ತು ಪರಂಪರೆಗೆ ಸಂಬAಧಿಸಿದ ವಿಷಯವಾಗಿದ್ದು, ಈ ಬಗ್ಗೆ ಸುಮಾರು ನೂರು ವರ್ಷಗಳ ಹಿಂದೆಯೇ ಅಧ್ಯಯನ ನಡೆದಿದೆ. ಸಂಸ್ಕೃತಿ ಪುನಶ್ಚೇತನಗೊಳಿಸುವ ಮತ್ತು ಕಲಾವಿದರನ್ನು ಗುರುತಿಸಿ, ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪರಿಷತ್ ಶ್ರಮಿಸಲಿ ಎಂದರು.

ಯಡ್ರಾಮಿ ವಿರಕ್ತಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಖ್ಯಾತ ಮಕ್ಕಳ ಸಾಹಿತಿ ಎ.ಕೆ.ರಾಮೇಶ್ವರ ಉದ್ಘಾಟಿಸಿದರು. ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಸಿ.ಎಸ್.ಮಾಲಿಪಾಟೀಲ್ ಉದ್ಘಾಟಿಸಿದರು. ಕಜಾಪ ತಾಲೂಕು ಅಧ್ಯಕ್ಷ ಬಸವರಾಜ ಬಡಿಗೇರ, ಕಸಾಪ ತಾಲೂಕು ಅಧ್ಯಕ್ಷ ನಾಗಪ್ಪ ಸಜ್ಜನ್, ಪ್ರಮುಖರಾದ ಮಡಿವಾಳಪ್ಪ ದುದ್ದಣಗಿ, ಭೀಮರಾಯಗೌಡ ಹಿರೇಗೌಡರ, ಪ್ರಕಾಶ ಬೆಲ್ಲದ, ಬಸವರಾಜ ಅರಕೇರಿ, ಸಿದ್ದು ಹೂಗಾರ, ಡಾ.ಕೆ.ಕೆ.ದೇಸಾಯಿ, ರೇವಣಸಿದ್ದಯ್ಯ ಪುರಾಣಿಕ, ಲಕ್ಷ್ಮಿ ದೇಸಾಯಿ, ಸುಧಾಬಾಯಿ ಇನಾಮದಾರ, ನೀಲಮ್ಮ ಚನ್ನಾಗೋಳ, ಬಸವರಾಜ ಬಡಿಗೇರ, ಗೊಲ್ಲಾಳ್ಳಪ್ಪಗೌಡ ಬಿರಾದಾರ, ರುದ್ರಗೌಡ ಪಾಟೀಲ್, ರಾಜಶೇಖರಗೌಡ ಅಖಂಡಹಳ್ಳಿ, ವಿರೇಶಕುಮಾರ ವಿಶ್ವಕರ್ಮ, ಶರಣು ಪೂಜಾರಿ ಇತರರಿದ್ದರು.