ಜಿಲ್ಲೆ

ಕಲಾವಿದರ ಮೇಲಿದೆ ಸಾಮಾಜಿಕ ಹೊಣೆಗಾರಿಕೆ

ಕಲಬುರಗಿ: ರಂಗಭೂಮಿ ಕಲಾದವಿದರ ಮೇಲೆ ಬಹುದೊಡ್ಡ ಸಾಮಾಜಿಕ ಹೊಣೆಗಾರಿಕೆ ಇದೆ. ರಂಗಭೂಮಿ ಜೀವನ ಪಾಠಶಾಲೆ ಇದ್ದಂತೆ. ಅಂತಲೇ ಅವರು ಸಮಾಜಮುಖಿ ಸಂದೇಶಗಳನ್ನು ಕೊಡುವಂತಹ ಕೆಲಸ ಮಾಡುತ್ತಾರೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯP್ಷÀ ಪ್ರೊ.ಎಸ್.ಜಿ. ಸಿದ್ಧರಾಮಯ್ಯ ಹೇಳಿದರು.

ನಗರದ ವಿಶ್ವೇಶ್ವರಯ್ಯ ಭವನದಲ್ಲಿ ರಂಗಸAಗಮ ಕಲಾ ವೇದಿಕೆ ಮಂಗಳವಾರ ಆಯೋಜಿಸಿದ್ದ ಸಮಾರಂಭ ಉದ್ಘಾಟಿಸಿ ಹಿರಿಯ ರಂಗಕರ್ಮಿ ಎಸ್.ಬಿ. ಜಂಗಮಶೆಟ್ಟಿ ರಂಗ ಪುರಸ್ಕಾರವನ್ನು ಹುಬ್ಬಳ್ಳಿ ಕಲಾವಿದ ಪ್ರಶಾಂತ ಹಿರೇಮಠ ಮತ್ತು ಸುಭದ್ರಾದೇವಿ ಜಂಗಮಶೆಟ್ಟಿ ರಂಗ ಪುರಸ್ಕಾರವನ್ನು ತುಮಕೂರಿನ ಕಲಾವಿದೆ ಪ್ರೇಮಾ ಹೊಸಮನಿ ಅವರಿಗೆ ಪ್ರದಾನ ಮಾಡಿ ಮಾತನಾಡಿ, ರಂಗ ಕಲಾವಿದರು ಜವಾಬ್ದಾರಿ ನಿಭಾಯಿಸುತ್ತಾರೆ ಎಂದು ಶ್ಲಾಘಿಸಿದರು.

ರಂಗಭೂಮಿಯಿAದ ಚಿತ್ರರಂಗಕ್ಕೆ ಬಂದಿರುವ ಕಲಾವಿದರ ಸಾಮಾಜಿಕ ಹೊಣೆಗಾರಿಕೆ ಹಾಗೂ ನೇರವಾಗಿ ಸಿನಿಮಾಕ್ಕೆ ಬಂದವರ ಹೊಣೆಗಾರಿಕೆಯನ್ನು ಒಮ್ಮೆ ಸೂಕ್ಷö್ಮವಾಗಿ ಗಮನಿಸಿ. ರಂಗಭೂಮಿಯಿAದ ಬಂದ ಡಾ.ರಾಜಕುಮಾರ್ ಅವರಂಥ ಕಲಾವಿದರ ನಡವಳಿಕೆಗೂ, ಉಳಿದವರ ನಡವಳಿಕೆಯನ್ನು ಗಮನಿಸಿ ಹೇಗೆ ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂಬುದು ಅರ್ಥವಾಗುತ್ತದೆ ಎನ್ನುವ ಮೂಲಕ ಪರೋಕ್ಷವಾಗಿ ಕೆಲ ನಟರ ಹೆಸರು ಉಲ್ಲೇಖಿಸದೆ ವಾಗ್ದಾಳಿ ನಡೆಸಿದರು.

ಕಲಾವಿದರು ಮಾರಿಕೊಂಡರೆ ಅವರನ್ನು ಅನುಕರಿಸುವ ಯುವ ಸಮೂಹ ಹಾಳಾಗುತ್ತದೆ. ಹಿಂದಿ ಚಿತ್ರರಂಗದವರು ಸಮಾಜಕ್ಕೆ ಮಾರಕವಾಗಿರುವ ಜಾಹೀರಾತುಗಳನ್ನು ಮಾಡುತ್ತಿದ್ದು, ಅವರನ್ನು ಅನುಕರಿಸುವವರ ಗತಿ ಏನಾಗಬೇಡ ಎಂದು ಖಾರವಾಗಿ ಪ್ರಶ್ನಿಸಿದ ಪ್ರೊ.ಸಿದ್ಧರಾಮಯ್ಯ, ರಂಗಭೂಮಿ ಕಲಾವಿದರು ಇಂತಹ ಕೆಲಸ ಮಾಡಿದವರಲ್ಲ, ಮಾಡುವುದೂ ಇಲ್ಲ. ಹೀಗಾಗಿ ಕಲಾವಿದರು ಜನರಿಗೆ ಉತ್ತಮ ಸಂದೇಶ ನೀಡುವಂತೆ ನಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಶ್ರೀನಿವಾಸ ಸರಡಗಿಯ ಶ್ರೀ ಡಾ.ರೇವಣಸಿದ್ಧ ಶಿವಾಚಾರ್ಯರು ಸಾನ್ನಿಧ್ಯ, ಕರ್ನಾಟಕ ನಾಟಕ ಅಕಾಡೆಮಿ ಮಾಜಿ ಅಧ್ಯಕ್ಷ ಶೇಖ ಮಾಸ್ತರ್ ಅಧ್ಯಕ್ಷತೆ ವಹಿಸಿದ್ದರು. ಕಲಬುರಗಿ ರಂಗಾಯಣ ಮಾಜಿ ನಿರ್ದೇಶಕ ಪ್ರಭಾಕರ ಜೋಶಿ, ರಂಗ ಸಂಗಮ ಕಲಾ ವೇದಿಕೆ ಅಧ್ಯಕ್ಷೆ ಶಿವಗೀತಾ ಬಸವಪ್ರಭು, ಪ್ರಮುಖರಾದ ಬಸವಪ್ರಭು ಶಾಂತರಸ, ಬಸವಪ್ರಭು, ಮಿಲಿಂದ ಮಡಕಿ, ವಿಶ್ವರಾಜ, ಅಪ್ಪಾರಾವ ಅಕ್ಕೋಣಿ, ಡಾ.ಸ್ವಾಮಿರಾವ ಕುಲಕರ್ಣಿ, ಡಾ.ಎಸ್.ಎಸ್. ಗುಬ್ಬಿ, ರವಿ ಬಿರಾದಾರ ಕಮಲಾಪುರ, ಸದಾನಂದ ಪೆರ್ಲ, ರವೀಂದ್ರ ಶಾಬಾದಿ, ಶಂಕ್ರಯ್ಯ ಘಂಟಿ, ಸಿದ್ಧರಾಮ ಹೊನ್ಕಲ್, ಪ್ರಭುಲಿಂಗ ನೀಲೂರೆ, ಬಮ್ಮನಳ್ಳಿ ಸ್ವಾಮಿ, ಸಿದ್ದಪ್ಪ ತಳ್ಳಳ್ಳಿ, ಮೋಹನ ಸೀತನೂರ, ಶರಣಗೌಡ ಪಾಳಾ, ಅಂಬಾರಾಯ ಕೋಣೆ, ನಾರಾಯಣ ಕುಲಕರ್ಣಿ, ಕೆ.ಪಿ.ಗಿರಿಧರ ಇತರರಿದ್ದರು.

ವೇದಿಕೆ ಪ್ರಧಾನ ಕಾರ್ಯದರ್ಶಿ ಡಾ.ಸುಜಾತಾ ಜಂಗಮಶೆಟ್ಟಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಸಾಹಿತಿ-ಪತ್ರಕರ್ತ ಮಹಿಪಾಲರೆಡ್ಡಿ ಮುನ್ನೂರ ಪ್ರಶಸ್ತಿ ಪುರಸ್ಕೃತರ ಕುರಿತು ಮಾತನಾಡಿ ನಿರೂಪಣೆ ಮಾಡಿದರು. ಬಿ.ಎಚ್.ನಿರಗುಡಿ ವಂದಿಸಿದರು.