ಕಲಬುರಗಿ: ವಿದ್ಯಾರ್ಥಿಗಳೇ ಕಲಾಕೃತಿ ಎಂದು ಭಾವಿಸಿದ್ದ ಪ್ರೊ.ವಿ.ಜಿ.ಅಂದಾನಿ ಅವರು, ಶಿಷ್ಯರಲ್ಲಿ ನಡತೆ, ಘನತೆಯನ್ನು ಮೂಡಿಸಿ ಬದುಕು ರೂಪಿಸುವ ಜತೆಗೆ ಕಲಾದೇವಿಯನ್ನು ಆರಾಧಿಸುವ ಶಕ್ತಿ ತುಂಬಿ, ನಾಡಿಗೆ ಅತ್ಯುತ್ತಮ ಕಲಾವಿದರನ್ನು ನೀಡಿದ್ದಾರೆ ಎಂದು ರಾಜ್ಯ ಲಲಿತ ಕಲಾ ಅಕಾಡೆಮಿ ಮಾಜಿ ಅಧ್ಯP್ಷÀ ಡಾ. ಎಂ.ಎಸ್.ಮೂರ್ತಿ ಹೇಳಿದರು.
ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಶನಿವಾರ ಪ್ರೊ. ವಿ.ಜಿ.ಅಂದಾನಿಯವರ ೭೫ನೇ ವರ್ಷದ ವಜ್ರಮಹೋತ್ಸವ ಅಂಗವಾಗಿ ಶನಿವಾರ ಏರ್ಪಡಿಸಿದ್ದ ಬಯಲ ಬೆಳಕು ಅಭಿನಂದನ ಗ್ರಂಥ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿ, ಅಂದಾನಿಯವರು ದೃಶ್ಯ ಕಲಾ ಕುಲದ ಗೌರವವನ್ನು ಎತ್ತಿ ಹಿಡಿದಿದ್ದಾರೆ. ಕೂಡುವುದನ್ನು ಕಲಿಸುವುದು ದೃಶ್ಯಕಲೆ. ಅವರ ಅಭಿನಂದನ ಗ್ರಂಥ ದೃಶ್ಯಕಲೆ ಚರಿತ್ರೆಯ ದಾಖಲೆಯಾಗಿದೆ ಎಂದು ಬಣ್ಣಿಸಿದರು.
ಸಾಹಿತ್ಯ e್ಞÁನಪೀಠದ ಮೇಲೆ ನಿಂತಿದೆ. ದೃಶ್ಯಕಲೆ ನಿಂತಿರುವುದು ಸಾಮಾನ್ಯ e್ಞÁನದ ಮೇಲೆ. ಆದರೆ ದೃಶ್ಯಕಲೆಯೇ ಅP್ಷÀರದ ತಾಯಿ. ಅದನ್ನು ಅತ್ಯಂತ ಶ್ರದ್ಧೆಯಿಂದ ಅಳವಡಿಸಿಕೊಳ್ಳಲು ಸಾಧ್ಯ ಎಂದು ಹೇಳಿದರು.
ವೈದ್ಯಕೀಯ ಶಿP್ಷÀಣ, ಕೌಶಲಾಭಿವೃದ್ಧಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಮಾತನಾಡಿ, ಪ್ರೊ.ವಿ.ಜಿ.ಅಂದಾನಿ ಅವರು ಶ್ರದ್ಧೆ, ಶ್ರಮದಿಂದ ಕಲಾ ಸಂಸ್ಥೆಯನ್ನು ಬೆಳೆಸಿ, ನೂರಾರು ಕಲಾವಿದರನ್ನು ಸೃಷ್ಟಿಸಿದ್ದಾರೆ. ಇಂತಹ ಮಹತ್ವದ ಸಂಸ್ಥೆಯನ್ನು ಕಾಪಿಟ್ಟುಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಅದರ ಸಂರಕ್ಷಣೆಯ ಜವಾಬ್ದಾರಿಯನ್ನು ನಾವು ಹೊರುತ್ತೇವೆ ಎಂದು ಭರವಸೆ ನೀಡಿದರು.
ಅಭಿನಂದನ ಗ್ರಂಥ ಸಂಪಾದಕರಾದ ಕಾಶಿನಾಥ ಮಾತನಾಡಿ, ರಾಜ್ಯದಲ್ಲಿಯೇ ಪ್ರಪ್ರಥಮ ಬಾರಿಗೆ ಚಿತ್ರಕಲಾ ಸ್ನಾತಕೋತ್ತರ ಪದವಿ ಕಲಬುರಗಿಯಲ್ಲಿ ಪ್ರಾರಂಭವಾಯಿತು. ಅದಕ್ಕೆ ಪ್ರೊ.ಅಂದಾನಿಯವರ ಕೊಡುಗೆ ಅಪಾರ. ಪ್ರೊ.ವಿ.ಜಿ.ಅಂದಾನಿಯವರು ಸಂಸ್ಥೆ ಮತ್ತು ವಿದ್ಯಾರ್ಥಿಗಳನ್ನು ಬಹಳ ಪ್ರೀತಿಸುತ್ತಿದ್ದರು. ಹೀಗಾಗಿ ಅವರ ೭೫ ವಿದ್ಯಾರ್ಥಿಗಳಿಂದ ಅವರ ಕುರಿತು ಲೇಖನ ಬರೆಯಿಸಿ ಅಭಿನಂದನ ಗ್ರಂಥ ಹೊರತರಲಾಗಿದೆ ಎಂದು ತಿಳಿಸಿದರು.
ಗ್ರಂಥದ ಮತ್ತೊಬ್ಬ ಸಂಪಾದಕರಾದ ಸತೀಶಕುಮಾರ ಪಿ.ವ¯್ಲÉÃಪುರೆ, ವಿ.ಜಿ.ಅಂದಾನಿಯವರು ಸಾಮಾಜಿಕ, ಸಾಂಸ್ಕೃತಿಕ ವಲಯದ ಚಿರಪರಿಚಿತರು. ದೃಶ್ಯಕಲಾ ಲೋಕದ ದಿಗ್ಗಜರು ಎಂದು ಬಣ್ಣಿಸಿದರು.
ಸಂಸದ ರಾಧಾಕೃಷ್ಣ ದೊಡ್ಡಮನಿ ಅಭಿನಂದನ ಗ್ರಂಥ ಬಿಡುಗಡೆ ಮಾಡಿದರು. ಶಾಸಕ ಅಲ್ಲಮಪ್ರಭು ಪಾಟೀಲ್, ದಿ ಐಡಿಯಲ್ ಫೈನ್ ಆರ್ಟ್ ಸಂಸ್ಥೆ ಅಧ್ಯP್ಷÀ ರಾಜಶೇಖರ ಕೆ.ಪಾಟೀಲ್, ಗೌತಮ ಅಂದಾನಿ, ರಾಜಕುಮಾರ ಅಂದಾನಿ, ಮು.ಗು.ಬಿರಾದಾರ, ಟಿ.ದೇವೇಂದ್ರ ಇತರರಿದ್ದರು.