ಕಲಬುರಗಿ: ವರ್ಣಗಳ ಸಂಯೋಜನೆ ಕಲಾತ್ಮಕತೆಯಲ್ಲಿ ಕಲಾವಿದನ ನೈಪುಣ್ಯ ಅಡಗಿದೆ ಎಂದು ಪುಣೆಯ ಪ್ರಾತ್ಯಕ್ಷಿಕೆ ಕಲಾವಿದ ರಾಮಚಂದ್ರ ಖರಟಮಲ್ ಅಭಿಪ್ರಾಯಪಟ್ಟರು.
ಶರಣನಗರದ ಎಚ್.ಕೆ. ಸೀತನೂರ ಆರ್ಟ್ ಗ್ಯಾಲರಿಯಲ್ಲಿ ಭಾನುವಾರ ಆಯೋಜಿಸಿದ್ದ ಕ್ಯಾಮಲ್ ನ್ಯೂ ಆರ್ಟಿಸ್ಟ್ ಎಚ್‌ಡಿ, ಅಕ್ರಲಿಕ್ ಸಮಾರಂಭದಲ್ಲಿ ಪ್ರಾತ್ಯಕ್ಷಿಕೆ ನೀಡಿದ ಅವರು, ಚಿತ್ರಕಲಾಕೃತಿಗಳು ಉತ್ತಮ ಗುಣಮಟ್ಟದ ವರ್ಣಗಳ ಸಂಯೋಜನೆ ಮೂಲಕ ಆಕರ್ಷಿಸುವಂತಿವೆ. ಒಬ್ಬ ಅಪ್ಪಟ ಕಲಾವಿದನಿಗೆ ಹೇಳಿ ಮಾಡಿಸಿದಂತಹ ಕ್ಯಾಮಲ್ ಕಲರ್ ತನ್ನದೇ ಆದ ವೈಶಿಷ್ಟ ಪಡೆದಿದೆ. ಭಾರತೀಯ ವರ್ಣ ಪ್ರಪಂಚದಲ್ಲಿ ಕಲಾವಿದನಿಗೆ ಕ್ಯಾಮಲ್ ಕಮಾಲ್ ಮಾಡಿದೆ ಎಂದರು.
ಕೋಕ್ಯೂಕ್ಯಾಮಲಿನ್ ವಲಯ ಅಭಿವೃದ್ಧಿ ವ್ಯವಸ್ಥಾಪಕ ನಂದಕುಮಾರ ಗಾಯಕವಾಡ ಮಾತನಾಡಿ, ಕ್ಯಾಮಲï ೧೯೩೫ರಲ್ಲಿ ಸ್ಥಾಪನೆಯಾಗಿ ಜಗತ್ತಿನುದ್ದಕ್ಕೂ ತನ್ನ ವಿಸ್ತಾರ ಹೆಚ್ಚಿಸಿಕೊಂಡಿದೆ. ೬೦ ಎಂಎಲ್ ಕಲರ್ ಬಾಟಲ್‌ಗಳು ಮಾರುಕಟ್ಟೆಗೆ ಪ್ರವೇಶಿಸಿವೆ. ಕಲಾವಿದರ ಕೈಚಳಕಕ್ಕೆ ವರ್ಣಗಳ ಲೇಪನದಿಂದ ಕಲಾಕೃತಿ ಉತ್ತಮವಾಗಿ ಹೊರಹೊಮ್ಮಲು ಕ್ಯಾಮಲ್ ಪೂರಕವಾಗಿದೆ ಎಂದು ಹೇಳಿದರು.
ನಾಡೋಜ ಡಾ.ಜೆ.ಎಸ್. ಖಂಡೇರಾವ್ ಉದ್ಘಾಟಿಸಿದರು. ಕಲ್ಯಾಣ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಶಶಿಕಾಂತ ಪಾಟೀಲ್, ಉದ್ಯಮಿ ಎನ್.ಎ. ಪಾಟೀಲ್, ಬಸವರಾಜ ಜಾನೆ, ಚಂದ್ರಹಾಸ ಜಾಲಿಹಾಳ, ಸಂತೋಷ ಅಂದಾನಿ, ಅಶೋಕ ಹಿರೇಮಠ, ಬಿ.ಕೆ. ಬಡಿಗೇರ, ಡಾ.ಅಶೋಕ ಶೆಟಗಾರ, ಜಿತೇಂದ್ರ ಕೊಥಳಿಕರ್, ನಾಗರಾಜ ಕುಲಕರ್ಣಿ, ರಾಜಕುಮಾರ ಕಾಳೆ, ಲಕ್ಷಿಕಾಂತ ಮನೋಹರ್, ಡಿ.ಎಸ್. ದೇಸಾಯಿ, ಸಿದ್ದು ಮರಗೋಳ, ಡಾ.ಶಾಹೀದ್ ಪಾಶಾ, ಬಿ.ಎನ್. ಪಾಟೀಲ್, ಬಿ.ವಿ. ಕಾಮಜಿ, ಮಾನಯ್ಯ ಬಡಿಗೇರ, ವೀರೇಶ ಪತ್ತಾರ, ನಾರಾಯಣ ಜೋಶಿ, ಕೆ.ಪಿ ಗಿರಿಧರ, ಮೀನಾಕ್ಷಿ ಗುತ್ತೇದಾರ್ ಇದ್ದರು.
ರಮೇಶ ಕುಲಕರ್ಣಿ ಪ್ರಾರ್ಥಿಸಿದರು. ಆರ್ಟ್ ಗ್ಯಾಲರಿ ಸಂಸ್ಥಾಪಕ ಟ್ರಸ್ಟಿ ಮೋಹನ್ ಸೀತನೂರ ಸ್ವಾಗತಿಸಿದರು. ಎಂ.ಸಂಜೀವ್ ನಿರೂಪಣೆ ಮಾಡಿದರು. ಡಾ.ಅಶೋಕ ಶೆಟಕಾರ ವಂದಿಸಿದರು.