ಕಲಾದಗಿ: ಭಾವೈಕ್ಯತೆಯ ಸೂಫಿಸಂತ ಎಂದು ಹೆಸರಾದ ಇಲ್ಲಿನ ಹಜರತ ನೂರ ಅಲಿ ಶಹ್ ಬಾಬಾ ಅವರ 83ನೇ ಉರುಸ್ ಸರ್ವಧರ್ಮದ ಭಕ್ತರ ಸಮ್ಮುಖದಲ್ಲಿ ಶನಿವಾರ ನೆರವೇರಿತು.
ಬೆಳಗ್ಗೆಯಿಂದ ರಾತ್ರಿಯವರೆಗೂ ಭಕ್ತರು ಸಕ್ಕರೆ, ಮಾದಲಿಯನ್ನು ನೀಡಿ ಧೂಪ ಹಾಕಿದರು. ದರ್ಗಾದ ಆವರಣದಲ್ಲಿ ಅನ್ನ ಸಂತರ್ಪಣೆ ಮಾಡಲಾಯಿತು. ರಾತ್ರಿ 9 ಗಂಟೆಗೆ ಅಂತಾರಾಷ್ಟ್ರೀಯ ಖ್ಯಾತಿಯ ಖವ್ವಾಲರಾದ ದೆಹಲಿಯ ವಸೀಮ್ ಸಾಬ್ರೀ ಖವ್ವಾಲ ಹಾಗೂ ಭೂಪಾಲ್‌ನ ಹಾಜಿ ಮುಕರ‌್ರಮ್ ಅಲಿ ವಾರಾಸಿ ಖವ್ವಾಲ ಅವರ ಪ್ರಸ್ತುತಪಡಿಸಿದ ಕವ್ವಾಲಿ ಕಾರ್ಯಕ್ರಮ ನಡೆಯಿತು. ರಾತ್ರಿ 10 ಗಂಟೆಗೆ ಬಸ್ ನಿಲ್ದಾಣದ ಬಳಿ ಕಲೆ ಮತ್ತು ಸಾಂಸ್ಕೃತಿಕ ರಕ್ಷಣಾ ವೇದಿಕೆ ವತಿಯಿಂದ ಲಕ್ಷ್ಮೇಶ್ವರದ ಜೈ ಮಾತೃಭೂಮಿ ನಾಟ್ಯ ಸಂಘದಿಂದ ದುಡ್ಡು ದಾರಿ ಬಿಡಿಸಿತು ನಾಟಕ ಪ್ರದರ್ಶನ ನಡೆಯಿತು.
ಫೆ.23ರಂದು ಬಸ್ ನಿಲ್ದಾಣದ ಬಳಿ ರಾತ್ರಿ 9ಗಂಟೆಗೆ ಸಾಯಿ ಮೆಲೋಡೀಸ್ ಅವರಿಂದ ಹಾಸ್ಯ ರಸಮಂಜರಿ ಕಾರ್ಯಕ್ರಮ ಜರುಗಲಿದೆ.