ಜಿಲ್ಲೆ

ಗದಗ: ಕಮಲದಂತಹ ಸಂಸ್ಕಾರ ಬೇಕು: ಬ್ರಹ್ಮಕುಮಾರಿ ಜಯಂತಿ ಅಕ್ಕ

ಗದಗ:
ಕೆಸರಲ್ಲಿ ಕಮಲವಿದ್ದರು ಪ್ರಕರವಾಗಿರುವಂತೆ ಸಂಸಾರ ಸಾಗರದಲ್ಲಿರುವವರು, ವ್ಯಾಪಾರಸ್ಥರು, ಉದ್ಯೂಗಿಗಳು ತಮ್ಮ ಜಂಜಾಟವನ್ನು ಸ್ಪಲ್ವ ದೂರ ಸರಿಸಿ ಸಜ್ಜನರ ಸಂಘದಿಂದ ಸಂಸ್ಕಾರವಂತಾದರೆ ಭಾವಿ ಸಮಾಜದ ನಿರ್ಮಾತೃಗಳು ಸಹ ಹೃದಯಿಗಳಾಗುತ್ತಾರೆ ಎಂದು ಈಶ್ವರಿ ವಿಶ್ವ ವಿದ್ಯಾಲಯ ಪ್ರಜಾಪಿತ ರಾಜಮಾತಾ ಬ್ರಹ್ಮಕುಮಾರಿ ಜಯಂತಿ ಅಕ್ಕನವರು ಹೇಳಿದರು.
ತಾಲೂಕಿನ ಹುಲಕೋಟಿ ಈಶ್ವರಿ ವಿಶ್ವ ವಿದ್ಯಾಲಯದಲ್ಲಿ ಮಂಗಳವಾರ ಜರುಗಿದ ದಿನದರ್ಶಿಕೆ ಬಿಡುಗಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿಘ್ನೇಶ್ವರನ ಜನನ ವೈಜ್ಞಾನಿಕವಲ್ಲ ಅದು ವೈಚಾರಿಕತೆಯಿಂದ ಕೂಡಿದೆ. ಮಣ್ಣಿನ ಗಣಪ ಮಣ್ಣಲ್ಲಿ ಲೀನವಾಗುತ್ತದೆ. ಮಾನವಗುಣಗಳ ಅರ್ಥೈಸುವುದಕ್ಕೆ ಗಣಪನÀ ಜನನ ಸೂಚಕದ ಧರ್ಮಾಚರಣೆ ನಡೆಯುತ್ತದೆ. ಶುದ್ದ ಮಾತು, ಪವಿತ್ರ ಆತ್ಮ, ಪರಿಪೂರ್ಣ ಮಾನವನಾಗಬೇಕಾದರೆ ಚಂಚಲತೆ, ಮೌಢ್ಯತೆ ಹೊಡೆದೊಡಿಸಬೇಕು ಎಂದರು
ಬ್ರಹ್ಮಕುಮಾರಿ ಬಿ.ಕೆ.ಉಮಾ ಅಕ್ಕ, ರೇಖಾ ಅಕ್ಕನವರು, ಎಚ್.ವಿ. ತಹಸೀಲ್ದಾರ, ಎಲ್.ಬಿ.ಕಟ್ಟಿ, ಎಚ್.ಎಂ ಮಡಿವಾಳರ. ಎಲ್. ಎಚ್. ಕಾಲವಾಡ, ನಿರ್ಮಲಾ ಸರ್ವದೆ, ಹನಮಂತರಡ್ಡಿ ಹೊಸಹಳ್ಳಿ, ರಾಮನಗೌಡಣ್ಣ ಮರಿಯಪ್ಪಗೌಡರ, ಎಚ್.ವಿ. ಬೇಟಗೇರಿ, ವಿಠ್ಠಲರಡ್ಡಿ ಕಲಾಳ ಉಪಸ್ಥಿತರಿದ್ದರು.