ಕಲಬುರಗಿ: ಅತ್ಯಾಚಾರ, ಉದ್ಯಮಿಗೆ ಬೆದರಿಸಿ ಹಣ ವಸೂಲಿ, ಹನಿಟ್ರ್ಯಾಪ್, ಹೆದರಿಸಿ ಡೀಲ್ ಮಾಡುವ ಸಂಘಟನೆಗಳು ಜಿಲ್ಲೆಯಲ್ಲಿ ಲಷ್ಕರ್ ಇ ತಯ್ಯಬಾ (ಎಲ್‌ಇಟಿ) ಮಾದರಿ ಭಯ ಸೃಷ್ಟಿಸಿ ಅಟ್ಟಹಾಸ ಮೆರೆಯುತ್ತಿದ್ದು, ಜಿಲ್ಲೆ ಕೆಟ್ಟ ಕಾರಣಕ್ಕೆ ಕುಖ್ಯಾತಿಗೆ ಒಳಗಾಗುತ್ತಿದೆ. ಆದರೆ ಆಡಳಿತದಲ್ಲಿರುವವರು ಅತ್ಯಾಚಾರಿಗಳನ್ನು, ಹನಿಟ್ರ್ಯಾಪ್ ಮಾಡುವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಶ್ರೀರಾಮ ಸೇನೆ ಗೌರವಾಧ್ಯಕ್ಷ, ಆಂದೋಲಾದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಆರೋಪಿಸಿದರು.
ಯಾರದ್ದೋ ಜಮೀನಿಗೆ ಲಗ್ಗೆ ಹಾಕಿ ವಿವಾದ ಮಾಡಿ, ಹಣ ವಸೂಲಿ, ಮಹಿಳೆಯರನ್ನು ಮುಂದೆ ಇಟ್ಟುಕೊಂಡು ಹನಿಟ್ರಾÈಪ್, ನಂತರ ಆ ಮಹಿಳೆಯರ ಮೇಲೆ ನಿರಂತರ ಅತ್ಯಾಚಾರ ನಡೆಸಲಾಗಿದೆ. ಮಹಿಳೆ ಗರ್ಭಿಣಿಯಾಗಿದ್ದರೂ ಭ್ರೂಣ ಹತ್ಯೆ ಮಾಡಲಾಗಿದೆ. ಪೊಲೀಸರು, ಸಚಿವರಿಗೆ ಇಂತಹ ಕಳಂಕದ ಬಗ್ಗೆ ತಿಳಿಯುತ್ತಿಲವಲೇ? ಅಮಾಯಕರಿಗೆ ಈ ಜಿಲ್ಲೆಯಲ್ಲಿ ನ್ಯಾಯ ಇಲ್ಲವೇ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.
ಪೊಲೀಸರ ವೈಫಲ್ಯ: ಅತ್ಯಾಚಾರ, ಹನಿಟ್ರಾÈಪ್, ಜೀವ ಬೆದರಿಕೆಯಡಿ ಎಫ್‌ಐಆರ್ ದಾಖಲಾಗಿದ್ದು, ಆ ಆರೋಪಿಯನ್ನು ಪೊಲೀಸರು ಬಂಧಿಸುತ್ತಿಲ್ಲ. ಆತ ಬಹಿರಂಗವಾಗಿ ಪತ್ರಿಕಾಗೋಷ್ಠಿ ಮಾಡಿ, ಬೆದರಿಕೆ ಒಡ್ಡುತ್ತಿದ್ದಾನೆ. ಹೀಗೆ ಬಹಿರಂಗವಾಗಿ ಆರೋಪಿ ಓಡಾಡುತ್ತಿದ್ದಾನೆ. ಆದರೆ ಪೊಲೀಸರು ಆಂದೋಲಾ ಸ್ವಾಮೀಜಿ ಕೇಸ್ ಹುಡುಕುತ್ತಾರೆ, ಮಣಿಕಂಠರನ್ನು ಹುಡುಕಾಡಿ ಪ್ರಕರಣ ದಾಖಲಿಸುತ್ತಾರೆ. ಇಲ್ಲಿ ಕಣ್ಣಿಗೆ ಕಾಣುತ್ತಿಲ್ಲವೇ ಎಂದು ಕಿಡಿ ಕಾರಿದರು.
ಸಿಪಿಐ ಡೀಲ್ ಮಾಡಿಕೊಂಡ್ರಾ?: ಅತ್ಯಾಚಾರ, ಹನಿಟ್ರಾÈಪ್ ಪ್ರಕರಣದಲ್ಲಿನ ಆರೋಪಿಯನ್ನು ಸ್ಟೇಷನ್ ಬಜಾರ್ ಸಿಪಿಐ ರಕ್ಷಿಸುತ್ತಿರುವ ಅನುಮಾನ ಬರುತ್ತಿದೆ. ಆರೋಪಿಗಳ ಜತೆಗೆ ಡೀಲ್ ಮಾಡಿಕೊಂಡಿರುವ ಶಂಕೆ ಇದೆ. ಹನಿಟ್ರಾÈಪ್ ಮಾಡಿದ ಸಂಘಟನೆಯ ಆರೋಪಿಗಳು ಪಿಎಫ್‌ಐ ಸಂಘಟನೆಯವರ ಜತೆಗೆ ನಿಲ್ಲುತ್ತಾರೆ. ಇವರ ಬಗ್ಗೆ ಸಂಪೂರ್ಣ ಅರಿಯಬೇಕು. ತನಿಖೆ ನಡೆಸಬೇಕು. ಇಲ್ಲದಿದ್ದರೆ ಕಮೀಷನರ್ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಖರ್ಗೆ ಕೋಟೆಯಲ್ಲಿ ಗನ್ ಇಟ್ಟು ವಸೂಲಿ
ಸ್ಟಾçಂಗ್ ಮಿನಿಸ್ಟರ್ ಎಂದು ಹೇಳಿಕೊಳ್ಳುವ ಸಚಿವ ಪ್ರಿಯಾಂಕ್ ಖರ್ಗೆ ಕೋಟೆಯಲ್ಲಿ ಗನ್ ಪಾಯಿಂಟ್ ಇಟ್ಟು ಉದ್ಯಮಿಗಳನ್ನು ಬೆದರಿಸಿ, ಹನಿಟ್ರಾÈಪ್ ಮಾಡಿ ಹಣ ವಸೂಲಿ ಮಾಡಲಾಗುತ್ತಿದೆ. ಖರ್ಗೆ ಅಜ್ಞಾನದಿಂದ ಕಾನೂನು ಐಸಿಯುನಲ್ಲಿ ಇದೆ ಎಂದು ಶ್ರೀರಾಮ ಸೇನೆ ಗೌರವಾಧ್ಯಕ್ಷ, ಆಂದೋಲಾದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಆರೋಪಿಸಿದರು. ಪ್ರಿಯಾಂಕ್ ಖರ್ಗೆ ಕೇಸರಿ ಶಾಲು ಹೊದ್ದವರ ಮೇಲೆ ದ್ವೇಷ ಮಾಡ್ತಾರೆ. ಇದೀಗ ಜಿಲ್ಲೆಯಲ್ಲಿ ಶಾಂತಿ, ಸಮೃದ್ಧಿಯ ಸಂಕೇತವಾದ ನೀಲಿ ಶಾಲು ಹಾಕಿಕೊಂಡವರು, ಸಂವಿಧಾನ ರಕ್ಷಣೆಯ ಹೆಸರು ಹೇಳಿಕೊಂಡು ಅಮಾಯಕ ಹೆಣ್ಣು ಮಕ್ಕಳನ್ನು ಅತ್ಯಾಚಾರ ಮಾಡುವುದು, ಹನಿಟ್ರಾÈಪ್ ಮಾಡುತ್ತಿದ್ದಾರೆ. ಇವರ ವಿರುದ್ಧ ಕ್ರಮ ಯಾವಾಗ ಕೈಗೊಳ್ಳುತ್ತೀರಿ? ಎಂದು ಪ್ರಶ್ನಿಸಿದರು.