ಕಲಬುರಗಿ: ಜಿಲ್ಲೆಯಲ್ಲಿ ಕರೊನಾ ಮಹಾಮಾರಿಗೆ ಮತ್ತೊಂದು ಬಲಿಯಾಗಿದ್ದು, ಮೃತರ ಸಂಖ್ಯೆ ನಾಲ್ಕಕ್ಕೇರಿದೆ. 80 ವರ್ಷದ ಮೃತ ವೃದ್ಧ ಸೇರಿ ಮೂರು ಹೊಸ ಕರೊನಾ ಪಾಸಿಟಿವ್ ಕೇಸ್ ಮಂಗಳವಾರ ದೃಢಪಟ್ಟಿವೆ. ಈ ಮೂಲಕ ಸೋಂಕಿತರ ಸಂಖ್ಯೆಯೂ 30ಕ್ಕೇರಿದೆ.
ಸೋಂಕಿತರಲ್ಲಿ ನಾಲ್ವರು ಮೃತಪಟ್ಟಿದ್ದು, ಮೂವರು ಗುಣಮುಖ ಹೊಂದಿ ಮನೆಗೆ ವಾಪಸಾಗಿದ್ದಾರೆ. ರಾಜ್ಯದಲ್ಲೇ ಹೆಚ್ಚು ಸಾವು ಕಂಡ ಜಿಲ್ಲೆಗಳಲ್ಲಿ ಕಲಬುರಗಿ ಒಂದಾಗಿದೆ. ದೇಶದಲ್ಲಿ ಕರೊನಾ ಕಾಲಿಟ್ಟಾಗ ಮೊದಲ ಸಾವು ಸಂಭವಿಸಿದ್ದು ಸಹ ಇಲ್ಲೇ. ಮಂಗಳವಾರ 4ನೇ ಸಾವು ಸಂಭವಿಸಿದ್ದರಿಂದ ಇನ್ನಷ್ಟು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲೇಬೇಕಿದೆ. ಯಾವುದೇ ಸೋಂಕಿತ ವ್ಯಕ್ತಿಗೆ ಸಂಪರ್ಕ ಹೊಂದಿಲ್ಲದಿದ್ದರೂ ಅದ್ಹೇಗೆ ಈ ಮೂರು ಹೊಸ ಪಾಸಿಟಿವ್ ಕೇಸ್ಗಳು ಬಂದಿವೆ ಎಂಬ ಪ್ರಶ್ನೆ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆಯನ್ನು ಚಿಂತೆಗೀಡು ಮಾಡಿವೆ.
ಮೃತ ವ್ಯಕ್ತಿ (ಪಿ414) ನಾಲ್ಕು ವರ್ಷಗಳಿಂದ ಪಾಕರ್ಿನ್ಸನ್ ರೋಗದಿಂದ ಬಳಲುತ್ತಿದ್ದ. ಮೂರು ವರ್ಷಗಳಿಂದ ಬೆಡ್ ರೆಸ್ಟ್ನಲ್ಲಿದ್ದ. 19ರಂದು ವಿಪರೀತ ಜ್ವರ ಬಂದಿದ್ದರಿಂದ ಇಎಸ್ಐ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಿದರೂ ಫಲಿಸದೆ ಕೊನೆಯುಸಿರೆಳೆದಿದ್ದಾನೆ. ತಕ್ಷಣವೇ ಮೃತನ ರಕ್ತವನ್ನು ಪರೀಕ್ಷಿಸಿದಾಗ ಕರೊನಾ ಸೋಂಕು ಇರುವುದು ದೃಢಪಟ್ಟಿದೆ. ಕರೊನಾ ಸಾವಿನ ಹಿನ್ನೆಲೆಯಲ್ಲಿ ಸಕರ್ಾರದ ಮುಂಜಾಗ್ರತಾ ಕ್ರಮಗಳಂತೆ ಅಂತ್ಯಕ್ರಿಯೆ ಜರುಗಿಸಲಾಯಿತು.
ಮೃತನ ಟ್ರಾವೆಲ್ ಹಿಸ್ಟರಿ ಸದ್ಯಕ್ಕೆ ಲಭ್ಯವಾಗುತ್ತಿಲ್ಲ. ಆತನ ಜತೆ ಸಂಪರ್ಕಕ್ಕೆ ಬಂದವರು, ಸಾಥ್ ಗುಂಬಜ್ ಹತ್ತಿರ ವಾಸವಾಗಿದ್ದ ಆತನನ್ನು ಪರೀಕ್ಷಿಸಿದ ವೈದ್ಯಕೀಯ ಸಿಬ್ಬಂದಿ ಮತ್ತು ಕುಟುಂಬ ಸದಸ್ಯರು ಹಾಗೂ ಸಂಬಂಧಿಕರನ್ನೂ ಪರೀಕ್ಷೆಗೆ ಒಳಪಡಿಸುವ ಸಾಧ್ಯತೆ ಇದೆ. ಸದ್ಯಕ್ಕೆ ಸಾಥ್ ಗುಂಬಜ್ ಹತ್ತಿರದ ಎಲ್ಲ ರಸ್ತೆಗಳನ್ನು ಬಂದ್ ಮಾಡಿ ಜನಸಂಚಾರ ಸಂಪೂರ್ಣ ನಿಷೇಧಿಸಲಾಗಿದೆ.
ಉಳಿದ ಎರಡು ಪ್ರಕರಣಗಳಲ್ಲಿ 24 ವರ್ಷದ ಯುವಕ (ಪಿ412) ಮತ್ತು 61 ವರ್ಷದ ವೃದ್ಧ (ಪಿ413) ಎಂದು ಗುರುತಿಸಲಾಗಿದೆ. ಯುವಕ ಜ್ವರದಿಂದ ಬಳಲುತ್ತಿದ್ದ. 61 ವರ್ಷದ ವ್ಯಕ್ತಿಗೆ ಸೋಂಕು ಹೇಗೆ ಬಂತು ಎಂಬುದನ್ನು ಪತ್ತೆ ಮಾಡಲಾಗುತ್ತಿದೆ.
912 ಜನರ ರಿಪೋರ್ಟ್ ನೆಗೆಟಿವ್
ಜಿಲ್ಲೆಯಲ್ಲಿ ಈವರೆಗೆ 2005 ಶಂಕಿತರ ರಕ್ತ, ಗಂಟಲು ದ್ರವ ಟೆಸ್ಟ್ಗೆ ಕಳುಹಿಸಿದ್ದು, 912 ಜನರ ನೆಗೆಟಿವ್ ರಿಪೋಟರ್್ ಬಂದಿದೆ. 1061 ಜನರ ಪರೀಕ್ಷಾ ವರದಿಗೆ ಕಾಯಲಾಗುತ್ತಿದೆ. ಕಂಟೇನ್ಮೆಂಟ್ ಜೋನ್ಗಳಲ್ಲಿ 34699 ಮನೆಗಳ ಸಮೀಕ್ಷೆ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ತಿಳಿಸಿದ್ದಾರೆ. ಪ್ರೈಮರಿ ಕಾಂಟ್ಯಾಕ್ಟ್ಸ್ 444, ಸೆಕೆಂಡರಿ ಕಾಂಟ್ಯಾಕ್ಟ್ಸ್ 1735, ವಿದೇಶದಿಂದ ಬಂದ 488 ಜನರನ್ನು ಗುರುತಿಸಿದ್ದು, ಹೋಂ ಕ್ವಾರಂಟೈನ್ನಲ್ಲಿ 1347 ಜನರನ್ನು ಇರಿಸಲಾಗಿದೆ. 28 ದಿನ ಹೋಂ ಕ್ವಾರಂಟೈನ್ ಮುಗಿಸಿದ 967 ಹಾಗೂ 14 ದಿನದ ಅವಧಿ ಮುಗಿಸಿದ 86 ಜನರನ್ನು ಮುಕ್ತಗೊಳಿಸಲಾಗಿದೆ. 193 ಜನರನ್ನು ಇಎಸ್ಐಸಿ ಐಸೋಲೇಷನ್ ವಾಡರ್್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.