ಕಲಬುರಗಿ: ನಗರದ ವಿವಿಧ ಬಡಾವಣೆಗಳಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ ೩೧ರಂದು ಆರಂಭವಾಗಲಿದ್ದು, ಮೂರು ದಿನ ವಿಜೃಂಭಣೆಯಿಂದ ಜರುಗಲಿದೆ.
ಜೇವರ್ಗಿ ಕಾಲನಿ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ೩೧ರಿಂದ ಸೆ.೨ರವರೆಗೆ ಆರಾಧನೆ ವೈಭವದಿಂದ ನಡೆಯಲಿದ್ದು, ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಶ್ರೀ ರಾಘವೇಂದ್ರಸ್ವಾಮಿ ಭಕ್ತವೃಂದದ ಅಧ್ಯಕ್ಷ ನರೇಂದ್ರ ಫಿರೋಜಾಬಾದ್‌ಕರ್ ತಿಳಿಸಿದ್ದಾರೆ.
೩೧ರಂದು ಪೂರ್ವಾರಾಧನೆ ನಿಮಿತ್ತ ಬೆಳಗ್ಗೆ ೫ಕ್ಕೆ ಶೈಲಜಾ ಕುಲಕರ್ಣಿ ಅವರಿಂದ ಸುಪ್ರಭಾತ, ೬.೩೦ಕ್ಕೆ ಶ್ರೀಸುಧಾ ಸೇವಾ ಸಮಿತಿಯಿಂದ ಪುಷ್ಪಾರ್ಚನೆ, ೮.೩೦ಕ್ಕೆ ವಿಶ್ವಮಧ್ವ ಮಹಾಪರಿಷತ್‌ನ ಅಡಿ ಬರುವ ವಿವಿಧ ಪಾರಾಯಣ ಸಂಘಗಳ ಸದಸ್ಯರಿಂದ ಸಾಮೂಹಿಕ ಪಾರಾಯಣ, ಅಷ್ಟೋತ್ತರ ನಂತರ ಪಂಚಾಮೃತ ಅಭಿಷೇಕ, ಅಲಂಕಾರ ಹಾಗೂ ಮಹಾಪೂಜೆ, ೯.೩೦ಕ್ಕೆ ಕಿಶೋರ ದೇಶಪಾಂಡೆ ಅವರಿಂದ ಪವಮಾನ ಹೋಮ, ನಂತರ ಮಹಾ ನೈವೇದ್ಯ, ತೀರ್ಥ ಪ್ರಸಾದ ನಡೆಯಲಿದೆ. ಮಧಾಹ್ನ ೨ಕ್ಕೆ ಪ್ರಸನ್ನಮಾರುತಿ ಹಾಗೂ ವಿದ್ಯಾಹನುಮಾನ ಭಜನಾ ಮಂಡಳಿಗಳಿಂದ ಭಜನೆ, ಸಂಜೆ ೬.೩೦ಕ್ಕೆ ಓಂಕಾರ ನೃತ್ಯ ಸಾಧನಾ ತಂಡದವರಿಂದ ನೃತ್ಯ(ದಾಸಮಂಜರಿ) ಕಾರ್ಯಕ್ರಮ, ರಾತ್ರಿ ೮.೩೦ಕ್ಕೆ ಪಲ್ಲಕ್ಕಿ, ಅಷ್ಟಾವಧಾನ ಸೇವೆ, ಮಹಾ ಮಂಗಳಾರತಿ ನಡೆಯಲಿದೆ.
ಸೆ.೧ರಂದು ಮಧ್ಯಾರಾಧನೆ ನಿಮಿತ್ತ ಬೆಳಗ್ಗೆ ೯.೩೦ಕ್ಕೆ ರಜತ ರಥೋತ್ಸವ, ನಂತರ ರಥಬೀದಿಯಲ್ಲಿ ರಥೋತ್ಸವ ನಡೆಯಲಿದೆ. ಗಾಯತ್ರಿ ಯುವಕ ಮಂಡಳಿ ಹಾಗೂ ಜಯತೀರ್ಥ ನಗರದ ಶ್ರೀಲಕ್ಷಿ ನಾರಾಯಣ ಭಜನಾ ಮಂಡಳಿ ಸದಸ್ಯರಿಂದ ಭಜನೆ, ಮಧ್ಯಾಹ್ನ ೧೨.೩೦ಕ್ಕೆ ಅಷ್ಟಾವಧಾನ ಸೇವೆ, ನೈವೇದ್ಯ, ಮಂಗಳಾರತಿ, ಮಧ್ಯಾಹ್ನ ೨ಕ್ಕೆ ಸಾರ್ವಜನಿಕ ತೀರ್ಥ ಪ್ರಸಾದ. ಪರಿಮಳಾ ಭಜನಾ ಮಂಡಳಿ ಮತ್ತು ಪ್ರಭಂಜನಾ ಭಜನಾ ಮಂಡಳಿಗಳಿAದ ಭಜನೆ. ಸಂಜೆ ೬.೩೦ಕ್ಕೆ ಬಾಗಲಕೋಟೆಯ ಜಯತೀರ್ಥ ತಾಸಗಾಂವ್ ಅವರಿಂದ ದಾಸವಾಣಿ, ರಾತ್ರಿ ೮.೩೦ಕ್ಕೆ ಮಹಾ ಮಂಗಳಾರತಿ ನಡೆಯಲಿದೆ. ಸೆ.೨ರಂದು ಉತ್ತರಾರಾಧನೆ ನಿಮಿತ್ತ ಬೆಳಗ್ಗೆ ಸುಪ್ರಭಾತ, ಪಾರಾಯಣ, ಪುಷ್ಪಾರ್ಚನೆ, ಹೋಮ, ರಜತ ರಥೋತ್ಸವ, ಅಷ್ಟಾವಧಾನ ಸೇವೆ, ಮಧ್ಯಾಹ್ನ ೨ಕ್ಕೆ ತೀರ್ಥ ಪ್ರಸಾದ, ಧ್ಯಾನಾಂಜನೇಯ ಹಾಗೂ ವೈಷ್ಣವಿ ಭಜನಾ ಮಂಡಳಿಗಳಿAದ ಭಜನೆ, ಸಂಜೆ ೬.೩೦ಕ್ಕೆ ವಂದನಾರ್ಪಣೆ, ೬.೪೫ಕ್ಕೆ ಅನಂತ ಮಿಸ್ತಿç ಅವರಿಂದ ದಾಸವಾಣಿ, ರಾತ್ರಿ ೯.೩೦ಕ್ಕೆ ಮಹಾ ಮಂಗಳಾರತಿ ನಡೆಯಲಿದೆ ಎಂದು ತಿಳಿಸಿದ್ದಾರೆ.
ಜಗತ್ ಬಡಾವಣೆ ರಾಯರ ಮಠ: ನಗರದ ಜಗತ್ ಬಡಾವಣೆ ಗೋಮುಖ ರಾಘವೇಂದ್ರ ಸ್ವಾಮಿ ಮಠದಲ್ಲಿ ೩೧ರಿಂದ ಸೆ.೨ರ ವರೆಗೆ ರಾಯರ ಆರಾಧನೆ ನಡೆಯಲಿದೆ ಎಂದು ಶ್ರೀಗುರುರಾಜ ಸೇವಾ ಸಮಿತಿ ಪ್ರಕಟಣೆ ತಿಳಿಸಿದೆ. ನಿತ್ಯ ಬೆಳಗ್ಗೆ ವಿಷ್ಣುಸಹಸ್ರನಾಮ ಪಾರಾಯಣ, ರಾಯರ ಅಷ್ಟೋತ್ತರ ಪಠಣ, ಪಂಚಾಮೃತ ಅಭಿಷೇಕ, ನಂತರ ಶ್ರೀಗುರು ಸಾರ್ವಭೌಮ ಭಜನಾ ಮಂಡಳಿಯಿAದ ಭಜನೆ, ಮಹಾ ಮಂಗಳಾರತಿ ನಡೆಯಲಿದೆ. ೩೧ರಂದು ವಿಷ್ಣುದಾಸಾಚಾರ್ಯ ಖಜೂರಿ ಅವರಿಂದ ಪ್ರವಚನ, ಖ್ಯಾತ ನೇತ್ರ ತಜ್ಞ ಡಾ.ಉದಯ ಪಾಟೀಲ್, ಡಾ.ಉಡುಪಿಕೃಷ್ಣ ಜೋಶಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.
ಸೆ.೧ರಂದು ಮಧ್ಯಾರಾಧನೆ ನಿಮಿತ್ತ ಶ್ರೀಪೂರ್ಣಪ್ರಜ್ಞ ಪಾರಾಯಣ ಸಂಘದಿAದ ಅಷ್ಟೋತ್ತರ, ರಾಯರ ಉತ್ಸವ ಮೂರ್ತಿಯ ಪಲ್ಲಕ್ಕಿ ಉತ್ಸವ ಗ್ರಾಮ ಪ್ರದಕ್ಷಿಣೆ ನಡೆಯಲಿದೆ. ಬಲಭೀಮಸೇನ ಭಜನಾ ಮಂಡಳಿ ಹಾಗೂ ವೈಭವ ಲಕ್ಷಿö್ಮÃ ಭಜನಾ ಮಂಡಳಿ ಸದಸ್ಯರಿಂದ ಭಜನೆ, ನಂತರ ಪಂ.ಗೋಪಾಲಾಚಾರ್ಯ ಅಕಮಂಚಿ ಅವರಿಂದ ಪ್ರವಚನ ನಡೆಯಲಿದೆ. ಶಾಸಕ ಅಲ್ಲಮಪ್ರಭು ಪಾಟೀಲ್, ಪೂರ್ಣಿಮಾ ಬಾರಿಮನಿ, ಸೀತಾ ಮಲ್ಲಾಬಾದಿ, ವಿಶಾಲ ನವರಂಗ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಸೆ.೨ರಂದು ಉತ್ತರಾರಾಧನೆ ನಿಮಿತ್ತ ಬೆಳಗ್ಗೆ ವಿಷ್ಣು ಸಹಸ್ರನಾಮ ಪಾರಾಯಣ, ರಾಯರ ಅಷ್ಟೋತ್ತರ ಜರುಗಲಿದೆ. ಡಾ.ಪಂ.ಶ್ರೀನಿವಾಸಾಚಾರ್ಯ ಪದಕಿ ಅವರಿಂದ ಪ್ರವಚನ ನಡೆಯಲಿದೆ. ರವಿ ಲಾತೂರಕರ್, ವೆಂಕಟೇಶ ಆಡಕಿ ಮುಖ್ಯ ಅತಿಗಳಾಗಿದ್ದಾರೆ.