ಕಲಬುರಗಿ: ಹಿಂದುಳಿದ ಕಲಬುರಗಿಯಲ್ಲಿ ದೇಶ, ವಿದೇಶದ ಆಟಗಾರರು ಆಗಮಿಸಿ, ಲಾನ್ ಟೆನಿಸ್ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿರುವುದು ಜಿಲ್ಲೆಯ ಖುಷಿಯ ವಿಚಾರ. ಪಟುಗಳು ಕ್ರೀಡಾ ಸ್ಫೂರ್ತಿಯೊಂದಿಗೆ ಮುಂದುವರಿಯಬೇಕು ಎಂದು ಶಾಸಕ ಅಲ್ಲಮಪ್ರಭು ಪಾಟೀಲ್ ಹೇಳಿದರು.
ಚಂದ್ರಶೇಖರ ಪಾಟೀಲ್ ಕ್ರೀಡಾಂಗಣದಲ್ಲಿ ಮಂಗಳವಾರದಿAದ ಆರಂಭವಾದ ಐಟಿಎಫ್ ಪುರುಷರ ಓಪನ್-೨೦೨೪ ಟೆನಿಸ್ ಟೂರ್ನಿಯ ಪ್ರಥಮ ಸುತ್ತಿನ ಪಂದ್ಯಗಳಿಗೆ ಚಾಲನೆ ನೀಡಿ ಮಾತನಾಡಿ, ಅಂತಾರಾಷ್ಟಿçÃಯ ಮಟ್ಟದ ಟೂರ್ನಿ ಆಯೋಜನೆ ಶ್ಲಾಘನೀಯ. ಸ್ಥಳೀಯ ಪಟುಗಳು ಕ್ರೀಡಾ ಸ್ಫೂರ್ತಿ ಪಡೆಯಬೇಕು ಎಂದು ಸಲಹೆ ನೀಡಿದರು.
ಕ್ರೀಡಾ ಚಟುವಟಿಕೆಗಳಿಗೆ ಪ್ರೋತ್ಸಾಹಿಸಲು ಕೆಕೆಆರ್‌ಡಿಬಿಯಿಂದ ೩೩ ಕೋಟಿ ರೂ. ಅನುದಾನ ಒದಗಿಸಲಾಗಿದೆ. ಮುಂದಿನ ದಿನದಲ್ಲಿ ಮಹಿಳೆಯರನ್ನು ಎಲ್ಲ ವಿಧದ ಕ್ರೀಡೆಯತ್ತ ಸೆಳೆಯಲು ಒತ್ತು ನೀಡಲಾಗುವುದು ಎಂದರು.
ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಮಾತನಾಡಿ, ೨೫,೦೦೦ ಯುಎಸ್ ಡಾಲರ್ ಮೊತ್ತದ ಟೂರ್ನಿಯಲ್ಲಿ ೩೨ ಆಟಗಾರರು ಸಿಂಗಲ್ಸ್ ಮತ್ತು ೧೬ ತಂಡ ಡಬಲ್ಸ್ನಲ್ಲಿ ಪರಸ್ಪರ ಸೆಣಸಲಿದ್ದಾರೆ. ಎಟಿಪಿ ಉತ್ತಮ ರ‍್ಯಾಂಕ್ ಹೊಂದಿರುವ ಸುಮಾರು ೧೧ ದೇಶ-ವಿದೇಶದ ಆಟಗಾರರು ಭಾಗವಹಿಸಿದ್ದು, ಉತ್ಕೃಷ್ಟ ದರ್ಜೆಯ ಟೆನಿಸ್ ಪ್ರದರ್ಶನ ನಿರೀಕ್ಷಿಸಲಾಗುತ್ತಿದೆ. ಕ್ರೀಡಾ ವಸತಿ ನಿಲಯದ ಮಕ್ಕಳನ್ನು ಬಾಲ್ ಬಾಯ್ಸ್ಗಳನ್ನಾಗಿ ತೆಗೆದುಕೊಳ್ಳಲಾಗಿದೆ ಎಂದರು.
ಕನ್ನಡಿಗ ಮೈಸೂರಿನ ಮನೀಷ ಗಣೇಶ ಮತ್ತು ಗುಜರಾತಿನ ದೇವ ಜಾವಿಯಾ ಮಧ್ಯದ ಪಂದ್ಯಕ್ಕೆ ಟಾಸ್ ಮಾಡುವ ಮೂಲಕ ಪಂದ್ಯಕ್ಕೆ ಚಾಲನೆ ನೀಡಿ, ಆಟಗಾರರಿಗೆ ಶಾಸಕ ಅಲ್ಲಮಪ್ರಭು ಪಾಟೀಲ್ ಶುಭ ಕೋರಿದರು.
ಅಪರ ಜಿ¯್ಲÁಧಿಕಾರಿ ರಾಯಪ್ಪ ಹುಣಸಗಿ, ಕೆಎಸ್‌ಎಲ್‌ಟಿಎ ಟೂರ್ನಾಮೆಂಟ್ ಡೈರೆಕ್ಟರ್ ಪೀಟರ್ ವಿಜಯಕುಮಾರ, ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್, ಆಹಾರ ಇಲಾಖೆ ಉಪನಿರ್ದೇಶಕ ಭೀಮರಾಯ, ಡಿಎಚ್‌ಓ ಡಾ.ಶರಣಬಸಪ್ಪ ಖ್ಯಾತನಾಳ, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಸುರೇಶ, ಸಂಜಯ ಬಾಣದ, ಪ್ರವೀಣ ಪುಣೆ ಇತರರಿದ್ದರು.