ಜಿಲ್ಲೆ

ಕಲಬುರಗಿಗೆ ಆಗಮಿಸಿದ ಸಿಎಂ : ವಿಮಾನ ನಿಲ್ದಾಣದಲ್ಲಿ ಸಿದ್ದರಾಮಯ್ಯ ಅವರಿಗೆ ಸ್ವಾಗತ

ಬಾಬುರಾವ ಯಡ್ರಾಮಿ

ಕಲಬುರಗಿ : ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿರುವ ಗೃಹ ಜ್ಯೋತಿ ಯೋಜನೆ ಉದ್ಘಾಟನೆಗೆ ಕಲಬುರಗಿಗೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ಇಂಧನ ಸಚಿವ ಕೆ.ಜೆ.ಜಾರ್ಜ್ , ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಬರ ಮಾಡಿಕೊಂಡರು. ಕಲಬುರಗಿ ವಿಮಾನ ನಿಲ್ದಾಣದಲ್ಲಿ ಸಿಎಂ ಅವರಿಗೆ ಡಿಸಿ ಅವರು ಪುಸ್ತಕ ನೀಡಿ ಸ್ವಾಗತಿಸಿದರು.