ಜಿಲ್ಲೆ

ಕಲಬುರಗಿ ಜಿಲ್ಲೆಯಲ್ಲಿ ಶೇ.67.72 ರಷ್ಟು ಮತದಾನ


ಕಲಬುರಗಿ ವಿಧಾನ ಪರಿಷತ್ತಿಗೆ ಈಶಾನ್ಯ ಕನರ್ಾಟಕ ಶಿಕ್ಷಕರ ಮತಕ್ಷೇತ್ರದಿಂದ ಬುಧವಾರ ನಡೆದ ಚುನಾವಣೆಯು ಕಲಬುರಗಿ ಜಿಲ್ಲೆಯಲ್ಲಿ ಶಾಂತಿಯುತವಾಗಿ ನಡೆದಿದ್ದು, ಒಟ್ಟು ಶೇ. 67.72 ರಷ್ಟು ಮತದಾನವಾಗಿದೆ ಎಂದು ಕನರ್ಾಟಕ ಈಶಾನ್ಯ ಶಿಕ್ಷಕರ ಮತಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ ಅವರು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಮತ ಚಲಾಯಿಸಲು ಹಕ್ಕು ಹೊಂದಿದ ಒಟ್ಟು 9529 ಮತದಾರ ಪೈಕಿ 6453 ಮತದಾರರು ಮತ ಚಲಾಯಿಸಿದ್ದಾರೆ. ಇದರಲ್ಲಿ 4245 ಪುರುಷರು ಹಾಗೂ 2208 ಮಹಿಳಾ ಮತದಾರರು ಇದ್ದಾರೆ. ಲಿಂಗವಾರು ಮತದಾನದ ಪ್ರಮಾಣ ನೋಡಿದಾಗ ಪುರುಷರ ಪ್ರಮಾಣ ಶೇ. 76.13 ಇದ್ದರೆ ಮಹಿಳೆಯರ ಪ್ರಮಾಣ ಶೇ. 55.87 ರಷ್ಟಿದೆ ಎಂದರು.

ಕಲಬುರಗಿ ನಗರದ 8 ಸೇರಿದಂತೆ ಜಿಲ್ಲೆಯ ಒಟ್ಟು 41 ಮತಗಟ್ಟೆಗಳಲ್ಲಿ ಮತದಾನ ನಡೆದಿದ್ದು, ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ ಅವರು ನಗರದ ಮತಗಟ್ಟೆ ಸಂಖ್ಯೆ 66 ಹಾಗೂ 67 ಸೇರಿದಂತೆ ಮುಂತಾದ ಮತಗಟ್ಟೆಗಳಿಗೆ ಭೇಟಿ ನೀಡಿ ಮತದಾನದ ಪ್ರಕ್ರಿಯೇ ವೀಕ್ಷಿಸಿದರು. ಕೋವಿಡ್-19 ಹಿನ್ನೆಲೆಯಲ್ಲಿ ಮತದಾನಕ್ಕೆ ಎಲ್ಲ ರೀತಿಯ ಮುಂಜಾಗ್ರತಾ ಕ್ರಮವನ್ನು ಜಿಲ್ಲಾಡಳಿತದಿಂದ ಕೈಗೊಳ್ಳಲಾಗಿತ್ತು.