ಜಿಲ್ಲೆ

ಕಲಬುರಗಿ; ಜಗದೋದ್ಧಾರನ ಸನ್ನಿಧಾನದಲ್ಲಿ ಪಾರಾಯಣ

ಕಲಬುರಗಿ: ನಗರದ ವಿದ್ಯಾನಗರದ ಶ್ರೀ ಕೃಷ್ಣ ಮಂದಿರದಲ್ಲಿ ಸಂಭ್ರಮದಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ನಡೆಯಿತು. ಎಲ್ಲ ಪಾರಾಯಣ ಸಂಘಗಳಿಂದ ಬೆಳಗ್ಗೆ 8ಕ್ಕೆ ವೆಂಕಟೇಶ ಸ್ತೋತ್ರ, ವಿಷ್ಣುಸಹಸ್ರನಾಮ, ಲಕ್ಷ್ಮೀ ಸ್ತೋತ್ರ, ಸುಂದರ ಕಾಂಡ ಪಾರಾಯಣ ಮಾಡಲಾಯಿತು.

ಬಳಿಕ ಶ್ರೀ ಕೃಷ್ಣನಿಗೆ ಸುಪ್ರಭಾತ, ಅಲಂಕಾರ, ಅಭಿಷೇಕ, ಮಹಾಮಂಗಳಾರತಿ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆದವು. ಸಂಜೆ ಅಪಾರ ಭಕ್ತರ ಮಧ್ಯೆ ಅದ್ದೂರಿಯಾಗಿ ರಥೋತ್ಸವ ಜರುಗಿತು.

ಪಾರಾಯಣ ಸಂಘಗಳ ಸಂಚಾಲಕ ರವಿ ಲಾತೂರಕರ್, ಪ್ರಮುಖರಾದ ಭೀಮಸೇನರಾವ, ರಾಘವೇಂದ್ರ ಆಶ್ರಿತ, ಜಗನ್ನಾಥ ಮೊಗರೆ, ಜಗನ್ನಾಥ ಸಗರ, ಡಾ.ರವೀಂದ್ರ ಕುಲಕರ್ಣಿ, ಡಾ.ಶ್ರೀನಿವಾಸ ಜಾಗಿರದಾರ, ಎ.ಜೋಶಿ, ರಾಮಾಚಾರ್ಯ ನಗನೂರ, ಶೇಷಮೂರ್ತಿ ಅವಧಾನಿ, ಸಂಜೀವ ಮಹಿಪತಿ, ಪ್ರಾಣೇಶ ದೇಶಮುಖ, ಕಿಶೋರ ದೇಶಪಾಂಡೆ, ವಿನೂತ ಜೋಶಿ, ಅನೀಲ ಕುಲಕರ್ಣಿ, ನರಸಿಂಗ್‌ರಾವ ಕುಲಕರ್ಣಿ, ಸುರೇಶ ಕುಲಕರ್ಣಿ ಇತರರಿದ್ದರು.