ಜಿಲ್ಲೆ

ಕಲಬುರಗಿ ಚಲೋ ಜೂ.3ರಂದು

ಕಲಬುರಗಿ: ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ಆರಂಭಿಕ ಬಾಲ್ಯದ ಆರೈಕೆ ಶಿಕ್ಷಣ (ಇಸಿಸಿಇ) ಆರಂಭಕ್ಕೆ ಶಾಲಾ ಶಿP್ಷÀಣ ಇಲಾಖೆ ಹೊರಡಿಸಿದ ಸುತ್ತೋಲೆ ವಾಪಸ್ ಪಡೆಯಲು ಒತ್ತಾಯಿಸಿ ಜೂ.೩ರಂದು ಕಲ್ಯಾಣ ಕರ್ನಾಟಕ ಭಾಗದ ಎಲ್ಲ ಜಿ¯್ಲÉಗಳ ಅಂಗನವಾಡಿ ನೌಕರರು ಅಂಗನವಾಡಿ ಬಂದ್ ಮಾಡಿ ಕಲಬುರಗಿ ಚಲೋ ನಡೆಸಲಾಗುವುದು ಎಂದು ರಾಜ್ಯ ಅಂಗನವಾಡಿ ನೌಕರರ ಸಂಘದ ಕಾರ್ಯಾಧ್ಯಕ್ಷೆ ಶಾಂತಾ ಘಂಟಿ ಹೇಳಿದರು. ಜೂ.೩ರಂದು ಶಿಕ್ಷಣ ಇಲಾಖೆ ಕಚೇರಿ ಎದುರು ಕಲ್ಯಾಣ ಕರ್ನಾಟಕದ ಎಲ್ಲ ಜಿ¯್ಲÉಗಳ ಅಂಗನವಾಡಿ ನೌಕರರು ಹೋರಾಟಕ್ಕೆ ಪಾಲ್ಗೊಳ್ಳಲಿz್ದÁರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ರಾಷ್ಟಿçÃಯ ಮಕ್ಕಳ ಶಿಕ್ಷಣ ನೀತಿಯ ಭಾಗವಾಗಿ ಭಾರತದಲ್ಲಿ ಐಸಿಡಿಎಸ್ ಯೋಜನೆ ಆರಂಭಿಸಲಾಗಿದೆ. ಅಪೌಷ್ಟಿಕತೆ ನಿವಾರಣೆ, ಮರಣ ಪ್ರಮಾಣ ಕಡಿಮೆ, ಗರ್ಭಿಣಿ ಸ್ತಿçÃಯರ ಆರೈಕೆಯಾಗಿ ಅಂಗನವಾಡಿಗಳಲ್ಲಿ ಮಕ್ಕಳಿಗೆ ಪೂರ್ವ ಪ್ರಾಥಮಿಕ ಶಿP್ಷÀಣ ನೀಡಬೇಕು ಎಂಬ ಸ್ಪಷ್ಟತೆಯು ದೊರೆಯಿತು. ಆದರೆ, ಇದೀಗ ಕಲಬುರಗಿ ಆಯುಕ್ತರು ಕಲ್ಯಾಣ ಕರ್ನಾಟಕದ ಭಾಗದ ೮ ಜಿ¯್ಲÉಗಳಲ್ಲಿ ಇಸಿಸಿಇ ಆರಂಭಿಸಲು ಏಕಾಏಕಿ ಆದೇಶ ನೀಡಿದ್ದು, ಇದರಿಂದ ಈ ಜಿ¯್ಲÉಗಳ ೩೯ ತಾಲೂಕುಗಳಲ್ಲಿ ೧,೧೭೦ ಅಂಗನವಾಡಿ ಕೇಂದ್ರಗಳು ಮುಚ್ಚಲಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ರತ್ನಾ ಗುಲ್ಬರ್ಗ, ಮಹಾದೇವಿ ಕೆ, ಪುಷ್ಪಾ ಆಳಂದ, ರಾಜಮತಿ ಪಾಟೀಲï ಇತರರಿದ್ದರು.