ಜಿಲ್ಲೆ

ಕಲಬುರಗಿ; ಚಂಪಾ ಕ್ರೀಡಾಂಗಣದಲ್ಲಿ ಕ್ರೀಡಾ ದಿನಾಚರಣೆ

ಕಲಬುರಗಿ: ನಗರದ ಚಂದ್ರಶೇಖರ ಪಾಟೀಲ್ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ರಾಷ್ಟ್ರೀಯ ಕ್ರೀಡಾ ದಿನ ಆಚರಿಸಲಾಯಿತು.

ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್, ಸಿಇಒ ಭನ್ವರ್​ ಸಿಂಗ್ ಮೀನಾ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಣೆ ಮಾಡಿ, ಪ್ರೋತ್ಸಾಹಿಸಿದರು. ಇದೇ ವೇಳೆ ದೈಹಿಕ ಶಿಕ್ಷಣ ಶಿಕ್ಷಕರಾದ ಕೃಷ್ಣಾ ಗೌಳಿ, ದಯಾನಂದ ಮುಳಿಗೆ, ದತ್ತು ಜೇವರ್ಗಿ ಹಾಗೂ ಅಂಗವಿಕಲ ಕ್ರೀಡಾಪಟು ರಮೇಶ ನಾರಾಯಣ ಜಾಧವರನ್ನು ಸನ್ಮಾನಿಸಲಾಯಿತು.

ವಿಶೇಷಚೇತನ ಅಧಿಕಾರಿ ಸಾದಿಕ್ ಸುಹೇನ್ ಖಾನ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಜಿ.ಗಾಯತ್ರಿ, ಬ್ಯಾಡ್ಮಿಂಟನ್ ಅಸೋಸಿಯೇಶನ ಕಾರ್ಯದರ್ಶಿ ಯೋಗೇಶ ಪಾಟೀಲ್ ಇದ್ದರು. ಇಲಾಖೆ ತರಬೇತುದಾರರಾದ ಸಂಜಯ ಬಾಣದ, ಪ್ರವೀಣ ಪೂಣೆ, ರಾಜು ಚೌಹಾಣ ಇದ್ದರು. ಶಿವಶರಣಪ್ಪ ನಿರೂಪಿಸಿದರು.