ಜಿಲ್ಲೆ

ಕಲಬುರಗಿ ಕಾರಾಗೃಹದಲ್ಲಿ ಉಚಿತ ನೇತ್ರ ತಪಾಸಣೆ

ಕಲಬುರಗಿ: ಜಿಲ್ಲಾ ಆರೋಗ್ಯ ಇಲಾಖೆಯು ಕೇಂದ್ರ ಕಾರಾಗೃಹದಲ್ಲಿ ಕೈದಿಗಳು ಮತ್ತು ಜೈಲು ಅಧಿಕಾರಿ/ಸಿಬ್ಬಂದಿ ನೇತ್ರ ತಪಾಸಣಾ ಉಚಿತ ಶಿಬಿರ ಬುಧವಾರ ಏರ್ಪಡಿಸಿತ್ತು. ಜೈಲಿನ ೩೫೦ ಬಂದಿ ಮತ್ತು ೪೦ ಅಧಿಕಾರಿ/ಸಿಬ್ಬಂದಿ ಸೇರಿ ೩೯೦ ಜನರ ನೇತ್ರ ತಪಾಸಣೆ ಮಾಡಿ ೧೨೭ ಬಂದಿಗಳಿಗೆ ಉಚಿತ ಕನ್ನಡಕ ವಿತರಿಸಲಾಯಿತು. ೮ ಬಂದಿಗಳ್ನು ಶಸ್ತçಚಿಕಿತ್ಸೆಗೆ ಶಿಫಾರಸು ಮಾಡಲಾಯಿತು. ಜಿಲ್ಲಾ ಆರೋಗ್ಯ ಇಲಾಖೆಯ ಡಾ.ಅಬ್ದುಲ್ ಅಜೀಜ್, ಡಾ.ಮುಸ್ತಫಾ ಮತ್ತು ತಂಡ ತಪಾಸಣೆ ನಡೆಸಿತು. ಕಾರಾಗೃಹ ಪ್ರಭಾರಿ ಮುಖ್ಯ ಅಧೀಕ್ಷಕ ಬಿ.ಸುರೇಶ, ಸಹಾಯಕ ಅಧೀಕ್ಷಕ ಹುಸೇನಿ ಪೀರ್, ಡಾ.ಅರ್ಚನಾ, ಡಾ.ಆನಂದ ಅಡಕಿ, ಶಿಕ್ಷಕ ನಾಗರಾಜ ಮುಲಗೆ, ಜೈಲರ್‌ಗಳಾದ ಸುನಂದಾ ವಿ., ಸೈನಾಜ್ ನಿಗೇವಾನ್, ಸಾಗರ್ ಪಾಟೀಲ್ ಇತರರಿದ್ದರು.