ಜಿಲ್ಲೆ

ಕಲಬುರಗಿ; ಋಗ್ವೇದಿ ಶ್ರಾವಣಿ ಕಾರ್ಯಕ್ರಮ ನಾಳೆ

ಕಲಬುರಗಿ: ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮತೀರ್ಥರ ಆಜ್ಞಾನುಸಾರ ವಿಶ್ವಮಧ್ವ ಮಹಾ ಪರಿಷತ್‌ನಿಂದ ನಗರದ ವಿವಿಧೆಡೆ 29ರಂದು ಬೆಳಗ್ಗೆ 7.30ಕ್ಕೆ ಋಗ್ವೇದಿಗಳಿಗಾಗಿ ಶ್ರಾವಣಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಪರಿಷತ್ ತಿಳಿಸಿದೆ.

ಬ್ರಹ್ಮಪುರ ಉತ್ತರಾದಿ ಮಠ, ಕರುಣೇಶ್ವರ ವೀರ ಹನುಮಾನ ದೇಗುಲ, ಜೇವರ್ಗಿ ಕಾಲನಿಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, ನ್ಯೂ ರಾಘವೇಂದ್ರ ಕಾಲನಿ ಶ್ರೀ ವೆಂಕಟೇಶ್ವರ ದೇವಸ್ಥಾನ, ಜಯತೀರ್ಥ ನಗರ ಶ್ರೀ ಲಕ್ಷ್ಮೀ ನಾರಾಯಣ ದೇವಸ್ಥಾನ, ಜಗತ್ ಬಡಾವಣೆ ರಾಯರ ಮಠ, ದೇಶಮುಖ ವಾಡಾ ರುಕ್ಮಿಣಿ- ಪಾಂಡುರಂಗ ದೇವಸ್ಥಾನ, ಮಾಕಾ ಲೇಔಟ್ ಧ್ಯಾನಾಂಜನೇಯ ದೇವಸ್ಥಾನ, ಪ್ರಶಾಂತ ನಗರ ಹನುಮಾನ ಮಂದಿರ, ಬಸವೇಶ್ವರ ಕಾಲನಿ ಶ್ರೀ ರಾಘವೇಂದ್ರ ಸ್ವಾಮಿ ಮಠ, ಗಣೇಶ ನಗರ ಶ್ರೀ ವೆಂಕಟೇಶ್ವರ ದೇಗುಲ, ಎಂಎಸ್‌ಕೆ ಮಿಲ್ ಶ್ರೀ ಸಿದ್ಧಿಮಾರುತಿ ದೇಗುಲ, ಶಕ್ತಿ ನಗರ ಶ್ರೀ ಬಲಮುರಿ ಶಕ್ತಿ ಗಣಪತಿ ದೇವಸ್ಥಾನದಲ್ಲಿ ಕಾರ್ಯಕ್ರಮ ನಡೆಯಲಿದೆ.

ಯಜುರ್ವೇದಿಗಳಿಗಾಗಿ ಆ.30ರಂದು ಬೆಳಗ್ಗೆ 7ಕ್ಕೆ ಬ್ರಹ್ಮಪುರ ಉತ್ತರಾದಿ ಮಠ, ಜೇವರ್ಗಿ ಕಾಲನಿ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಶ್ರಾವಣಿ ಕಾರ್ಯಕ್ರಮ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ ಡಿ.ಕೆ. ಕುಲಕರ್ಣಿ ಮೊ. 95599 45049 ಅವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.