ಕಲಬುರಗಿ: ಆಹಾರ ಸುರಕ್ಷತೆ ಗುಣಮಟ್ಟ ಪ್ರಾಧಿಕಾರ ಮತ್ತು ಆಹಾರ ಸುರಕ್ಷತಾ ತರಬೇತಿ ಮತ್ತು ಪ್ರಮಾಣ ಪತ್ರ ಸಂಸ್ಥೆಯಿಂದ 200 ಜನ ಆಹಾರ ಉದ್ದಿಮೆದಾರರಿಗೆ ನಗರದ ಅನನ್ಯ ಪದವಿಮಹಾವಿದ್ಯಾಲಯದಲ್ಲಿ ಆಹಾರ ಸುರಕ್ಷತೆ ತರಬೇತಿ ನೀಡಲಾಯಿತು.
ಕಲಬುರಗಿ ಮಹಾನಗರ ಪಾಲಿಕೆ ಮೆಯರ್ ವಿಶಾಲ ದರ್ಗಿ ಉದ್ಘಾಟಿಸಿ, ಪ್ರತಿಯೊಬ್ಬರು ಕಡ್ಡಾಯವಾಗಿ ತರಬೇತಿ ಪಡೆಯುವಂತೆ ತಿಳಿಸಿದರು.
ಜಿಲ್ಲಾ ಅಧಿಕಾರಿಗಳಾದ ಅರ್ಚನಾ ಕಮಲಾಪೂರಕರ್ ಮಾತನಾಡಿ, ಕಡ್ಡಾಯವಾಗಿ ಲೈಸೆನ್ಸ್ ಮತ್ತು ತರಬೇತಿ ಪಡೆಯಬೇಕು. ಗುಣಮಟ್ಟದ ಆಹಾರಕ್ಕೆ ಆದ್ಯತೆ ನೀಡಬೇಕು.
ಆಹಾರ ಸುರಕ್ಷತೆ ಮತ್ತು ತರಬೇತಿ ಕೇಂದ್ರದ ರಾಜ್ಯ ಮುಖ್ಯಸ್ಥರಾದ ರಾಘವೇಂದ್ರ ಶೆಟ್ಟಿ, ಆಹಾರ ಸುರಕ್ಷತಾಧಿಕಾರಿಗಳಾದ ಪರಮೇಶ್ವರ ಮಠಪತಿ, ಮಹಾನಗರ ಪಾಲಿಕೆಯ ಪರಿಸರ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಮುನಾಫ್ ಪಟೇಲ್, ಆರೋಗ್ಯಾಧಿಕಾರಿಗಳಾದ ವಿವೇಕಾನಂದ ಚಿಂಗೆ, ಅನನ್ಯ ಡಿಗ್ರಿ ಕಾಲೇಜು ಪ್ರಾಂಶುಪಾಲರಾದ ಶರಣು ಬಿ ಹೊನ್ನಗೆಜ್ಜಿ, ಭಾರತ ಸರ್ಕಾರದ ಆಹಾರ ಸುರಕ್ಷತೆ ಪ್ರಾಧಿಕಾರ ತರಬೇತಿದಾರರಾದ ನರಸಿಂಗಶೆಟ್ಟಿ ಭಾಗವಹಿಸಿದರು. ಆಹಾರ ಸುರಕ್ಷತಾ ತರಬೇತಿ ಕೇಂದ್ರ ಕಲಬುರಗಿ ಮುಖ್ಯಸ್ಥರಾದ ಗುರುರಾಜ ಪಾಟೀಲ ನೇತೃತ್ವದಲ್ಲಿ ಕಾರ್ಯಕ್ರಮ ಜರುಗಿತು.