ಕಲಘಟಗಿ: ಸ್ಥಳೀಯ ಪಟ್ಟಣ ಪಂಚಾಯಿತಿಯ 17 ವಾರ್ಡ್ಗಳಿಗೆ ಚುನಾವಣೆ ನಡೆದು 10 ತಿಂಗಳು ಗತಿಸಿದ ಮೇಲೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳ ಚುನಾವಣೆಗೆ ಮೀಸಲಾತಿ ಈಗ ಪ್ರಕಟವಾಗಿದೆ. ಈ ಹಿನ್ನೆಲೆಯಲ್ಲಿ ಅಧಿಕಾರದ ಗದ್ದುಗೆ ಏರಲು ಭಾರಿ ಕಸರತ್ತು ನಡೆದಿದೆ.
ಕಲಘಟಗಿ ಪಪಂ ವ್ಯಾಪ್ತಿಯ 17 ವಾರ್ಡಗಳಲ್ಲಿ ಬಿಜೆಪಿ 9, ಕಾಂಗ್ರೆಸ್ 3, ಜೆಡಿಎಸ್ 2, ಮೂವರು ಪಕ್ಷೇತರರು ಆ್ಕಯೆಾಗಿದ್ದಾರೆ. ಆದರೆ, ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ನಡೆದಿರಲಿಲ್ಲ. ಈಗ ಹೊರಬಿದ್ದ ಆದೇಶದಲ್ಲಿ ಅಧ್ಯಕ್ಷ ಸ್ಥಾನ-ಸಾಮಾನ್ಯ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿವೆ. ಪಪಂನಲ್ಲಿ ಅತಿ ಹೆಚ್ಚು ಸದಸ್ಯ ಬಲವುಳ್ಳ ಬಿಜೆಪಿ ಅಧಿಕಾರದ ಗದ್ದುಗೆ ಏರಲು ರಣತಂತ್ರ ಹೂಡá-ತ್ತಿದೆ. ಈಗಾಗಲೇ ಪಕ್ಷೇತರ ಸದಸ್ಯರು ಬಿಜೆಪಿ ಜತೆಗೆ ಕೈೋಡಿಸಿದ್ದರಿಂದ ಆನೆ ಬಲ ಬಂದಂತಾಗಿದೆ. ಒಂದು ವೇಳೆ 7ನೇ ವಾರ್ಡ್ನ ಜೆಡಿಎಸ್ ಸದಸ್ಯೆ ಶಕುಂತಲಾ ಬೋಳಾರ ಕಾಂಗ್ರೆಸ್ ಮತ್ತು ಪಕ್ಷೇತರ ಸದಸ್ಯರೊಂದಿಗೆ ಕುದುರೆ ವ್ಯಾಪಾರ ಕೈಗೊಂಡರೆ ಅವರೇ ಅಧಿಕಾರದ ಗದ್ದುಗೆ ಏರುವಲ್ಲಿ ಯಾವುದೇ ಅನುಮಾನವಿಲ್ಲ ಎಂಬ ಮಾತá-ಗಳು ಕೇಳಿ ಬರá-ತ್ತಿವೆ. ಇದರಿಂದಾಗಿ ಅಧ್ಯಕ್ಷ-ಉಪಾಧ್ಯಕ್ಷರು ಯಾರಾಗá-ತ್ತಾರೆಂಬ ಕುತೂಹಲ ಸದಸ್ಯರಲ್ಲಿ ಹೆಚ್ಚಾಗಿದೆ.
ಆಕಾಂಕ್ಷಿಗಳು: ಕಲಘಟಗಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ 17ನೇ ವಾರ್ಡ್ನ ಬಿಜೆಪಿ ಸದಸ್ಯೆ ಅನಸೂಯಾ ಹೆಬ್ಬಳ್ಳಿಮಠ, 7ನೇ ವಾರ್ಡ್ನ ಜೆಡಿಎಸ್ ಸದಸ್ಯೆ ಶಕುಂತಲಾ ಬೋಳಾರ, 14ನೇ ವಾರ್ಡ್ನ ಪಕ್ಷೇತರ ಸದಸ್ಯೆ ಲಕ್ಷ್ಮೀ ಪಾಲ್ಕರ ಆಕಾಂಕ್ಷಿಗಳಾಗಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ 9ನೇ ವಾರ್ಡ್ನ ಬಿಜೆಪಿ ಸದಸ್ಯ ಗಂಗಾಧರ ಗೌಳಿ, 10ನೇ ವಾರ್ಡ್ನ ಬಿಜೆಪಿ ಸದಸ್ಯ ಕೃಷ್ಣಾಜಿ ತಹಸೀಲ್ದಾರ, 5ನೇ ವಾರ್ಡ್ನ ಪಕ್ಷೇತರ ಸದಸ್ಯ ಬಸವರಾಜ ಕಡ್ಲಾಸ್ಕರ, 8ನೇ ವಾರ್ಡ್ನ ಬಿಜೆಪಿ ಸದಸ್ಯ ಕಲ್ಮೇಶ ಬೆಣ್ಣಿ ಆಕಾಂಕ್ಷಿಗಳಾಗಿದ್ದಾರೆ.