ಜಿಲ್ಲೆ

ಕರ್ಫ್ಯೂ ಮಾರ್ಗಸೂಚಿ ಕಟ್ಟುನಿಟ್ಟಿನ ಪಾಲನೆ ; ಅನುಮತಿ ಇರುವ ಚಟುವಟಿಕೆಗಷ್ಟೇ ಅವಕಾಶ ; ಉಲ್ಲಂಘನೆಯಾದರೆ ಮುಲಾಜಿಲ್ಲದೆ ಕ್ರಮ

ತುಮಕೂರು: ಕರೊನಾ ನಿಯಂತ್ರಣಕ್ಕೆ ಮಂಗಳವಾರ ರಾತ್ರಿ 9ರಿಂದ ಮೇ 12ರ ಬೆಳಗ್ಗೆ 6ರವರೆಗೆ ಕರ್ಪ್ಯೂ ಮಾರ್ಗಸೂಚಿ ಜಿಲ್ಲೆಯಲ್ಲಿ ಕಟ್ಟುನಿಟ್ಟಾಗಿ ಪಾಲನೆಯಾಗಬೇಕಿದ್ದು, ಸಾರ್ವಜನಿಕರು ಸಹಕರಿಸುವಂತೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಎಲ್ಲ ತಾಲೂಕು ತಹಸೀಲ್ದಾರ್‌ಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಮಂಗಳವಾರ ವಿಡಿಯೋ ಕಾನ್ಪರೆನ್ಸ್ ಮೂಲಕ ಸಭೆ ನಡೆಸಿದ ಅವರು, ಕರ್ಫ್ಯೂ ಅವಧಿಯಲ್ಲಿ ವಾರ್ಗಸೂಚಿಗಳು ಉಲ್ಲಂನೆಯಾಗದಂತೆ ಯಾವ್ಯಾವ ಚಟುವಟಿಕೆಗಳಿಗೆ ಅನುಮತಿ ನೀಡಲಾಗಿದೆಯೋ ಅವುಗಳಿಗೆ ಅವಕಾಶ ವಾಡಿಕೊಡುವಂತೆ ನಿರ್ದೇಶಿಸಿದರು.

ಯಾವುದೇ ಕಾರಣಕ್ಕೂ ಯಾವುದಕ್ಕೂ ಯಾರಿಗೂ ಪಾಸ್ ವಿತರಿಸುವುದಿಲ್ಲ ಹಾಗಾಗಿ, ಅನುಮತಿ ನೀಡಲಾಗಿರುವ ಚಟುವಟಿಕೆಗಳಿಗೆ ತೆರಳುವವರ ಐಡಿ ಕಾರ್ಡ್ ನೋಡಿ ಅವಕಾಶ ವಾಡಿಕೊಡಬೇಕು. ಮದುವೆಗೆ ತೆರಳುವವರಿಗೂ ಆಮಂತ್ರಣ ಪತ್ರ ಆಧಾರದ ಮೇಲೆ ಅವಕಾಶ ಕಲ್ಪಿಸಬೇಕೆಂದರು.

ಸರ್ಕಾರಿ ಮತ್ತು ಖಾಸಗಿ ಬಸ್‌ಗಳ ಸಂಚಾರ ಸಂಪೂರ್ಣ ಬಂದ್ ಆಗಲಿದೆ, ತುರ್ತು ಸೇವೆಗೆ ವಾಹನಗಳ ಸಂಚಾರಕ್ಕೆ ಅನುಮತಿಯಿದ್ದು, ಪರಿಶೀಲಿಸಿ ಅವಕಾಶ ನೀಡಬೇಕು. ಯಾವುದೇ ಕಾರಣಕ್ಕೂ ದೂರುಗಳು ಕೇಳಿಬರದಂತೆ ವಾರ್ಗಸೂಚನೆ ಜಾರಿಗೊಳಿಸಬೇಕು ಎಂದು ಹೇಳಿದರು.

ಗಾರ್ಮೆಂಟ್ಸ್ ಹೊರತುಪಡಿಸಿ ಉಳಿದೆಲ್ಲ ಕಾರ್ಖಾನೆಗಳು ಕಾರ್ಯನಿರ್ವಹಿಸಲು ಅನುಮತಿ ಕಲ್ಪಿಸಲಾಗಿದೆ ಹಾಗಾಗಿ, ಇವುಗಳಿಗೆ ತೆರಳುವ ಉದ್ಯೋಗಸ್ಥರು ಗುರುತಿನ ಚೀಟಿ ತೋರಿಸಿ ತೆರಳಬೇಕು. ಉಳಿದಂತೆ ಅಗತ್ಯ ಸೇವೆಗೆ ಬೆಳಗ್ಗೆ 6ರಿಂದ 10 ಗಂಟೆಯವರೆಗೂ ಅನುಮತಿಯಿದ್ದು, ಇದರ ಜೊತೆಗೆ ಮದ್ಯ ವಾರಾಟಕ್ಕೂ ಅನುಮತಿ ಕಲ್ಪಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ. ವಂಶಿಕೃಷ್ಣ ತಿಳಿಸಿದರು.

ಗ್ರಾಪಂ ಪಿಡಿಒಗಳು ನರೇಗಾ ಕಾಮಗಾರಿಗಳ ಅನುಷ್ಟಾನಕ್ಕೆ ಹೆಚ್ಚು ಆದ್ಯತೆ ಕೊಡಬೇಕು. ಯಾರಿಂದಲೂ ಕಾಮಗಾರಿಗೆ ಅನುಮತಿ ಕೊಟ್ಟಿಲ್ಲ ಎಂಬ ದೂರು ಕೇಳಿಬರಬಾರದು ಎಂದು ಜಿಪಂ ಸಿಇಒ ಕೆ.ವಿದ್ಯಾಕುವಾರಿ ಎಚ್ಚರಿಸಿದರು.

ಉಪವಿಭಾಗಾಧಿಕಾರಿ ಅಜಯ್, ಡಿಎಚ್‌ಒ ಡಾ.ಎಂ.ಬಿ.ನಾಗೇಂದ್ರಪ್ಪ, ಜಿಲ್ಲಾ ಔಷಧ ನಿಯಂತ್ರಕಿ ಮಮತಾ ಮತ್ತಿತರರು ಇದ್ದರು.

ರಕ್ತದಾನಕ್ಕೆ ಅವಕಾಶ: ಮುಂದಿನ ದಿನಗಳಲ್ಲಿ ರಕ್ತ ಕೊರತೆಯಾಗಬಾರದು, ಆದ್ದರಿಂದ ವಾರ್ಗಸೂಚಿಯನ್ವಯ ರಕ್ತದಾನಿಗಳಿಗೆ ರಕ್ತದಾನ ವಾಡಲು ಅವಕಾಶ ಮಾಡಿಕೊಡಬೇಕು, ಆದರೆ, ಯಾವುದೇ ಕಾರಣಕ್ಕೂ ಕಾರ್ಯಕ್ರಮ ನಡೆಸಲು ಅವಕಾಶ ನೀಡದಂತೆ ಸೂಚಿಸಿದ ಡಿಸಿ ಪಾಟೀಲ, ಮದುವೆಗಳಲ್ಲಿ ನಿಯಮ ಉಲ್ಲಂನೆಯಾಗದಂತೆ ನಿಗಾವಹಿಸಿ. ಜಾತ್ರೆ, ಸಭೆ, ಸವಾರಂಭ ಹಾಗೂ ಗುಂಪು ಸೇರುವುದಕ್ಕೆ ಅವಕಾಶ ನೀಡದಂತೆ ತಾಕೀತು ಮಾಡಿದರು.

ಆಮ್ಲಜನಕ ಕೊರತೆಯಾಗದಂತೆ ಎಚ್ಚರ ವಹಿಸಿ: ಜಿಲ್ಲೆಯಲ್ಲಿ ಹಾಸಿಗೆ ಮತ್ತು ಆಮ್ಲಜನಕ, ರೆಮ್‌ಡಿಸಿವಿರ್ ಕೊರತೆ ಉಂಟಾಗದಂತೆ ಜಾಗರೂಕರಾಗಿರುವ ಜತೆಗೆ ಆಮ್ಲಜನಕ ಶೇ.25ರಷ್ಟು ಖಾಲಿಯಾಯಿತು ಎನ್ನುವಷ್ಟರಲ್ಲೇ ಅದನ್ನು ತುಂಬಿಸಿಕೊಳ್ಳುವ ಕಾರ್ಯ ವಾಡಬೇಕು. ಆಮ್ಲಜನಕ ಸಿಗದೆ ಸೋಂಕಿತ ಸಾವನ್ನಪ್ಪಿದ ಎಂಬ ದೂರುಗಳು ಕೇಳಿಬರಬಾರದು ಎಂಬ ಕಟ್ಟುನಿಟ್ಟಿನ ತಾಕೀತು ಮಾಡಿದರು.

ಸಂಚಾರಕ್ಕೆ ಅನುಮತಿಯಿಲ್ಲ: ಕಟ್ಟಡ ನಿರ್ವಾಣ ಕಾಮಗಾರಿಗೆ ತೆರಳುವವರಿಗೆ ಮತ್ತು ಕಟ್ಟಡಕ್ಕೆ ಸಂಬಂಧಿಸಿದ ಅಂಗಡಿ ತೆರೆಯುವುದಕ್ಕೂ ಅನುಮತಿಯಿದೆ, ಸೋಮವಾರದಿಂದ ಶುಕ್ರವಾರದವರೆಗೆ ವಾತ್ರ ಕಾಮಗಾರಿ ತೆರಳುವವರ ಸಂಚಾರಕ್ಕೆ ಅನುಮತಿಯಿದ್ದು, ವಾರಾಂತ್ಯದ ಕರ್ಫ್ಯೂನಲ್ಲಿ ಸಂಚಾರಕ್ಕೆ ಅನುಮತಿಯಿಲ್ಲ ಆದರೆ, ಕಾಮಗಾರಿ ನಡೆಯುವ ಸ್ಥಳದಲ್ಲೇ ಇದ್ದು ಕೆಲಸ ವಾಡಲು ಅನುಮತಿಯಿದೆ ಎಂದು ಎಸ್ಪಿ ಡಾ.ಕೆ. ವಂಶಿಕೃಷ್ಣ ತಿಳಿಸಿದರು.