ಚಿತ್ರದುರ್ಗ: ಕರ್ನಾಟಕ ಸರ್ಕಾರ,ಕಾಂಗ್ರೆಸ್ ಹೈಕಮಾಂಡ್‌ನ ಎಟಿಎಂ ಎಂದು ಗೋವಾ ಮುಖ್ಯಮಂತ್ರಿ ಡಾ.ಪ್ರಮೋದ್‌ಸಾವಂತ್ ಹೇಳಿದರು. ಬಿ ಜೆಪಿ, ನಗರದ ಕಮ್ಮಾರೆಡ್ಡಿ ಸಮುದಾಯಭವದಲ್ಲಿ ಗುರುವಾರ ಏರ್ಪಡಿಸಿದ್ದ ಲೋಕಸಭಾ ಕ್ಷೇತ್ರದ ಬೂತ್ ಪ್ರಮುಖರ ಸಭೆ ಉದ್ಘಾಟಿಸಿ ಮಾತನಾಡಿದ ಅವರು,ಕಾಂಗ್ರೆಸ್‌ಗೆ ಕರ್ನಾಟಕದಿಂದಲೇ ಅತೀ ಹೆಚ್ಚು ಫಂಡಿಂಗ್ ಆಗುತ್ತಿದೆ ಎಂದು ಆರೋಪಿಸಿದರು.
ಮಹಿಳಾಶಕ್ತಿ,ಯುವ ಶಕ್ತಿ,ರೈತ ಶಕ್ತಿ ಹಾಗೂ ಬಡವರ ಕಲ್ಯಾಣಕ್ಕಾಗಿ ನರೇಂದ್ರಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಿಸಾನ್ ಸಮ್ಮಾನ್,ಫಸಲ್‌ಬೀಮಾ,ಪ್ರಧಾನ ಮಂತ್ರಿಆರೋಗ್ಯಕಾರ್ಡ್,ಕೌಶಲಾಧಿರಿತ ಉದ್ಯೋಗ,ಮುದ್ರಾಲೋನ್,ಉಜ್ವಲ,ಐದು ಕೆಜಿ ಉಚಿತ ಅಕ್ಕಿ, ಪಿ ಎಂ ವಿಶ್ವಕರ್ಮ,ವಿದ್ಯುತ್,ಜೆಜೆಎಂ,ವಸತಿ,ಶೌಚಗೃಹ ಮೊದಲಾದ ನೂರಾರು ಯೋಜನೆಗಳನ್ನು ಜಾರಿಗೊಳಿಸಿದೆ. ಮಹಿಳಾ ಸಬಲೀಕರಣ ಕ್ಕಾಗಿ ಹಲವು ಯೋಜನೆಗಳನ್ನು ಜಾರಿಗೊಳಿಸಲಾಗಿದೆ.
ಧರ್ಮ,ಜಾತಿಗಳ ಭೇದವಿಲ್ಲದೆ ದೇಶದೆಲ್ಲ ಮನೆಗಳಿಗೂ ಕೇಂದ್ರದ ಒಂದಲ್ಲ,ಒಂದು ಯೋಜನೆ ಸವಲತ್ತುಗಳು ತಲುಪಿವೆ. ರಾಜ್ಯ ದ ಲ್ಲಿ ಕಳೆದ 10 ತಿಂಗಳಲ್ಲಿ 500 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಿಸಾನ್ ಸಮ್ಮಾನ್‌ನಲ್ಲಿ ಕೇಂದ್ರ ತನ್ನ ಪಾಲನ್ನು ಕೊಡುತ್ತಿದೆ. 10 ಕೆಜಿ ಅಕ್ಕಿ ಕೊಡುವುದಾಗಿ ಹೇಳಿದ್ದ ಕಾಂಗ್ರೆಸ್ ಐದು ಕೆಜಿ ಅಕ್ಕಿ ಕೊಡುತ್ತಿದೆ.
ಕಾಂಗ್ರೆಸ್ ಬರೀ ಹಸ್ತ ತೋರಿಸುತ್ತಿದೆ ಹೊರತು,ದುಡಿಯುವ ಕೈಗಳಿಗೆ ಉದ್ಯೋಗ ಕೊಡುತ್ತಿಲ್ಲ. ಯುಪಿಎ ಆಡಳಿತಾವಧಿ ಹಲವು ಹ ಗರಣಗಳಾಗಿದ್ದರೂ,ಮೋದಿ ಆಡಳಿತದಲ್ಲಿ ಒಂದೂ ಹಗರಣವಾಗಿಲ್ಲ. ಪ್ರತಿಪಕ್ಷದ ಅನೇಕ ನಾಯಕರು ಜೈಲಿಗೆ ಹೋಗಿ ಬಂದಿದ್ದಾರೆ, ಇ ನ್ನು ಕೆಲವರು ಜೈಲಿನ ಹಾದಿಯಲ್ಲಿದ್ದಾರೆ.
ಕ್ಲೀನ್-ಸ್ಕಿಲ್ ಭಾರತ ರೂಪಗೊಳುತ್ತಿದೆ. ದೇಶದ 140 ಕೋಟಿ ಜನರು ಮೋದಿ ಪರಿವಾದವರು. ನವ,ಆತ್ಮ ನಿರ್ಭರ ಹಾಗೂ ವಿಕಸಿತ ಭಾರತಕ್ಕಾಗಿ ಹಾಗೂ ಅಂತ್ಯೋದಯ,ಸರ್ವೋದಯ ಮತ್ತು ಗ್ರಾಮೋದಯಕ್ಕಾಗಿ ಮೋದಿ ಪ್ರಧಾನಿ ಆಗಬೇಕು,ಈ ನಿಟ್ಟಿನಲ್ಲಿ ಕಾರ‌್ಯ ಕರ್ತರು ಶ್ರಮಿಸ ಬೇಕೆಂದರು.
ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಮಾತನಾಡಿ,ಈ ಬಾರಿ ಲೋಕಸಭಾ ಚುನಾವಣೆಯಲ್ಲಿ 380ಕ್ಕೂ ಹೆಚ್ಚು ಸೀಟುಗಳನ್ನು ಗೆಲ್ಲು ವ ಗುರಿ ಇದೆ. ಬಿಜೆಪಿ ಈ ಬಾರಿ 400 ಸೀಟುಗಳನ್ನು ಪಡೆಯಲಿದೆ ಎಂದು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅ ವ ರೇ ಹೇಳಿದ್ದಾರೆ.
ಕೇಂದ್ರದ ಸಾಧನೆಗಳೊಂದಿಗೆ ಅಭ್ಯರ್ಥಿ ಯಾರೇ ಆಗಲಿರಲಿ ಕಮಲಕ್ಕೆ,ಪಕ್ಷದ ಸಿದ್ಧಾಂತಕ್ಕೆ ಮತ ಹಾಕುವಂತೆ ಮತದಾರರಿಗೆ ಮನ ವ ರಿಕೆ ಮಾಡಿಕೊಡಬೇಕು. ತುಷ್ಠೀಕರಣಕ್ಕಾಗಿ ಕಾಂಗ್ರೆಸ್ಸಿನ ರೆಡ್‌ಕಾರ್ಪೆಟ್ ಹಾಸಿರುವುದು ಬೆಂಗಳೂರಿನ ಬಾಂಬ್‌ಸ್ಫೋಟಕ್ಕೆ ಕಾರಣ ವೆಂದರು.
ಶಿವಮೊಗ್ಗ ಶಾಸಕ ಚನ್ನಬಸಪ್ಪ ಮಾತನಾಡಿ,ಮೋದಿ ಪ್ರಧಾನಿ ಆಗಲಿ ಎಂದು ವಿಶ್ವದ ಬೇರೆ ಬೇರೆ ದೇಶಗಳ ಪ್ರಧಾನಿಗಳು,ರಾಷ್ಟ್ರಾಧ್ಯಕ್ಷ ರು ಬಯಸುತ್ತಿದ್ದಾರೆ. ಇವತ್ತು ಇಡೀ ಜಗತ್ತು ಬಿಜೆಪಿಯನ್ನು ಅಧ್ಯಯನ ಮಾಡುತ್ತಿದೆ. ಕೇಂದ್ರದ 109 ಯೋಜನೆಗಳನ್ನು ಜಾರಿ ಗೊಳಿಸಿ ದ್ದು,ಐದು ಗ್ಯಾರಂಟಿಗಳೊಂದಿಗೆ ದುರಂಹಕಾರ ಪ್ರದರ್ಶಿಸುತ್ತಿರುವ ಕಾಂಗ್ರೆಸ್‌ನ್ನು ಸೋಲಿಸಬೇಕಿದೆ. ಪಾಕ್‌ಪರ ಘೋಷಣೆ ಕೂಗಿಲ್ಲ ಎಂದಿರುವ ಮಂತ್ರಿಯೊಬ್ಬರಿಗೆ ಸಂಪುಟದಲ್ಲಿ ಮುಂದುವರಿಯುವ ಹಕ್ಕಿಲ್ಲವೆಂದರು.
ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಅವರು ಮಾತನಾಡಿ, ಕಳೆದ ಲೋಕಸಭಾ ಚುನಾವಣೆ ಅವಧಿ ಚಲಾವಣೆ ಆದ ಮತಗಳಲ್ಲಿ ಬಿಜೆಪಿ ಶೇ.50ನ್ನು ಪಡೆದಿದ್ದು,ಈ ಪ್ರಮಾಣ ಶೇ.60ಕ್ಕೆ ಏರಬೇಕಿದೆ. ಜೆಡಿಎಸ್ ಮೈತ್ರಿಯಿಂದಾಗಿ ಪಕ್ಷಕ್ಕೆ ಆನೆಬಲಬಂದತಾಗಿದೆ ಎಂದರು.
ಮಾಜಿ ಶಾಸಕ ನೇರ‌್ಲಗುಂಟೆ ತಿಪ್ಪೇಸ್ವಾಮಿ ಬಳ್ಳಾರಿಯಿಂದ ದುರ್ಗಕ್ಕೆ ಬಂದಿದ್ದವರು ಈ ಜಿಲ್ಲೆ ಹಾಳು ಮಾಡಿದ್ದಾರೆಂದು ಸ್ವಪಕ್ಷದ ಮಾ ಜಿ ಸಚಿವರೊಬ್ಬರ ವಿರುದ್ಧ ವಾಗ್ದಾಳಿ ನಡೆದಿದರು. ಕಾಂಗ್ರೆಸ್ ಎಸ್‌ಸಿ,ಎಸ್‌ಟಿ ಅಭಿವೃದ್ಧಿ ಹಣವನ್ನು ಗ್ಯಾರಂಟಿಗಳಿಗೆ ಉಪಯೋಗಿಸಿದೆ. ಡಾ.ಬಿ.ಆರ್.ಅಂಬೇಡ್ಕರ್ ಅವರ ಅಂತ್ಯಕ್ರಿಯೆಗೆ ಹೊಸದಿಲ್ಲಿ ರಾಜ್‌ಘಾಟ್‌ನಲ್ಲಿ ಅವಕಾಶ ಮಾಡಿಕೊಡಲಿಲ್ಲವೆಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.
ಮಾಜಿ ಸಂಸದ ಜನಾರ್ದನ ಸ್ವಾಮಿ,ಎಂಎಲ್‌ಸಿಗಳಾದ ಕೆ.ಎಸ್.ನವೀನ್,ಚಿದಾನಂದಗೌಡ,ಮಾಜಿ ಸಚಿವ ಬೈರತಿ ಬಸವರಾಜ,ಜಿಲ್ಲಾಧ್ಯಕ್ಷ ಎ.ಮುರಳಿ,ಮಧುಗಿರಿ ಜಿಲ್ಲಾಧ್ಯಕ್ಷ ಹನುಮಂತೇಗೌಡ,ಅನಿಲ್‌ಕುಮಾರ್ ಇದ್ದರು. ಕುಡಾ ಅಧ್ಯಕ್ಷ ಸುರೇಶ್‌ಸಿದ್ದಾಪುರ ನಿರೂಪಿಸಿ ದರು. ಡಿ.ಒ.ಮೂರಾರ್ಜಿ ಪ್ರಾರ್ಥಿಸಿದರು.