ಜಿಲ್ಲೆ

ಕರ್ನಾಟಕಕ್ಕೆ 362ರನ್ ಗಳ ಇನ್ನಿಂಗ್ಸ್ ಮುನ್ನಡೆ

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ
ಇಲ್ಲಿಯ ರಾಜನಗರ ಕೆಎಸ್ ಸಿಎ ಮೈದಾನದಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ‌ ಕ್ರಿಕೆಟ್ ಟೂರ್ನಮೆಂಟ್ ನ‌ ಸಿ ಗುಂಪಿನ ಮೊದಲ ಲೀಗ್ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಆತಿಥೇಯ ಕರ್ನಾಟಕ 362 ರನ್ ಗಳ ಬೃಹತ್ ಮುನ್ನಡೆಯೊಂದಿಗೆ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದೆ.
ಪಂದ್ಯದ ಮೂರನೇ ದಿನವಾದ ಭಾನುವಾರ 8 ವಿಕೆಟ್ ಗೆ 514 ರನ್ ಗಳಿಸಿದಾಗ ಕರ್ನಾಟಕ ಪ್ರಥಮ ಇನ್ನಿಂಗ್ಸ್ ಡಿಕ್ಲೇರ್ ಘೋಷಿಸಿತು. ಆಗ ಹುಬ್ಬಳ್ಳಿ ಹುಡುಗ ರೋಹಿತ್ ಕುಮಾರ ಎ.ಸಿ. 22 ಹಾಗೂ ವಿದ್ವತ್ ಕಾವೇರಪ್ಪ 4 ರನ್‌ಗಳಿಸಿದ್ದರು.
ಶನಿವಾರ ಪಂದ್ಯದ 2ನೇ ದಿನದ ಅಂತ್ಯಕ್ಕೆ ಕರ್ನಾಟಕ 6 ವಿಕೆಟ್ ಗೆ 461 ರನ್ ಗಳಿಸಿತ್ತು. ಇಂದು ಮೊದಲಿಗೆ ವೈಶಾಖ ವಿಜಯಕುಮಾರ್ 19 ರನ್ ಹಾಗೂ ವಿಕೇಟ್ ಕೀಪರ್ ಎಸ್. ಶರತ್ 76 ರನ್ ಗಳಿಸಿ ಔಟಾದರು.
ಪಂಜಾಬ್ ಪ್ರಥಮ ಇನ್ನಿಂಗ್ಸ್ ನಲ್ಲಿ‌ 152 ರನ್ ಗೆ ಆಲೌಟ್ ಆಗಿತ್ತು.