ರಾಜ್ಯಾಧ್ಯಕ್ಷ ರಾಜ್ ಪ್ರಶಾಂತ್ 
ಜಿಲ್ಲೆ

ಕರ್ನಾಟಕ ರಾಜ್ಯ ರಕ್ಷಣಾ ವೇದಿಕೆ ಅಸ್ತಿತ್ವಕ್ಕೆ

ಚಿಕ್ಕಮಗಳೂರು: ಸಮಾಜಸೇವೆ ಮತ್ತು ಕನ್ನಡ ನಾಡು-ನುಡಿ, ನೆಲ-ಜಲ ರಕ್ಷಣೆ ಮಾಡುವ ಉz್ದೆÃಶದಿಂದ ಕರ್ನಾಟಕ ರಾಜ್ಯ ರಕ್ಷಣಾ ವೇದಿಕೆಯನ್ನು ಹೊಸದಾಗಿ ಅಸ್ತಿತ್ವಕ್ಕೆ ತರಲಾಗಿದೆ ಎಂದು ವೇದಿಕೆಯ ರಾಜ್ಯಾಧ್ಯಕ್ಷ ರಾಜ್ ಪ್ರಶಾಂತ್ ತಿಳಿಸಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವೇದಿಕೆಯ ಜಿಲ್ಲಾ ಘಟಕವನ್ನು ಚಿಕ್ಕಮಗಳೂರಿನಲ್ಲಿ ಮೇ ೨೩ರಂದು ಸ್ಥಾಪಿಸಲಾಗಿದೆ. ರಾಜ್ಯದ ೩೧ ಜಿಲ್ಲೆಗಳಲ್ಲಿ ಮತ್ತು ೨೪೪ ತಾಲೂಕುಗಳಲ್ಲಿ ಘಟಕಗಳನ್ನು ಆರಂಭಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದರು.

ಜಿಲ್ಲಾ ಘಟಕವನ್ನು ಪದಾಧಿಕಾರಿಗಳ ಆಯ್ಕೆಯ ನಂತರ ಶೀಘ್ರದಲ್ಲೇ ಉದ್ಘಾಟಿಸಲು ನಿರ್ಧರಿಸಿz್ದÉÃವೆ. ಈಗಾಗಲೇ ಹಾಸನ, ಬೇಲೂರು, ಶಿವಮೊಗ್ಗ ಮುಂತಾದೆಡೆ ರಕ್ಷಣಾ ವೇದಿಕೆಯನ್ನು ಸ್ಥಾಪಿಸಿz್ದÉÃವೆ ಎಂದರು.

ರಾಜ್ಯದ ಅಭಿವೃದ್ಧಿಗೆ ಶ್ರಮಿಸುವುದು, ರಾಜ್ಯ ಹಾಗೂ ಭಾಷೆಗೆ ಧಕ್ಷೆ ಉಂಟಾದಲ್ಲಿ ಹೋರಾಟ ಮಾಡುವುದು, ಬಡವರು ಮತ್ತು ಶೋಷಿತರ ಮೇಲೆ ನಡೆಯುವ ದೌರ್ಜನ್ಯ ತಡೆಯುವ ಜೊತೆಗೆ ಅವರ ಏಳಿಗೆಗೆ ಶ್ರಮಿಸುವುದು, ಪರಿಸರ ಸಂರಕ್ಷಣೆ, ಜನತೆಯ ಹಕ್ಕು ಮತ್ತು ಸ್ವಾತಂತ್ರö್ಯ ರಕ್ಷಣೆ, ರೈತರ ಹಾಗೂ ಕಾರ್ಮಿಕರ ಅಭಿವೃದ್ಧಿಗೆ ಶ್ರಮಿಸಲು ಉz್ದÉÃಶಿಸಲಾಗಿದೆ ಎಂದು ಹೇಳಿದರು.

ಗ್ರಾಮೀಣ ಜನತೆಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಕ್ರಮವಹಿಸಲಾಗುವುದು. ಪ್ರಮುಖ ರಾಷ್ಟಿçÃಯ ಹಬ್ಬಗಳ ಆಚರಣೆ ಹಮ್ಮಿಕೊಳ್ಳಲಾಗುವುದು. ಗ್ರಾಮೀಣ ಕ್ರೀಡೆಗಳಿಗೆ ಉತ್ತೇಜನ ನೀಡುವ ಸಲುವಾಗಿ ಕ್ರೀಡಾಕೂಟಗಳನ್ನು ಏರ್ಪಡಿಸಿ ಜಿಲ್ಲಾ ಮಟ್ಟ ಹಾಗೂ ರಾಜ್ಯಮಟ್ಟದ ಕ್ರೀಡೆಗಳನ್ನು ಆಯೋಜಿಸಲು ನಿರ್ಧರಿಸಲಾಗಿದೆ ಎಂದರು.

ಅತೀ ಶೀಘ್ರದಲ್ಲಿ ವೇದಿಕೆಯನ್ನು ಜಿಲ್ಲಾ ಮಟ್ಟದಲ್ಲಿ, ತಾಲೂಕು ಮಟ್ಟದಲ್ಲಿ, ನಗರ ಮಟ್ಟದಲ್ಲಿ ಘಟಕಗಳನ್ನು ಸ್ಥಾಪಿಸಿ ಅವುಗಳಿಗೆ ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿ, ಕಾರ್ಯಕರ್ತರು, ಸದಸ್ಯರನ್ನು ನೇಮಿಸುವ ಉz್ದÉÃಶವನ್ನು ಹೊಂದಿz್ದÉÃವೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ವೇದಿಕೆ ಉಪಾಧ್ಯಕ್ಷ ಲಕ್ಷö್ಮಣ್, ನಿರ್ದೇಶಕರಾದ ಬಿ.ಬಿ. ಹಾಲಪ್ಪ, ಚಂದ್ರು, ಕುಮಾರ್ ಉಪಸ್ಥಿತರಿದ್ದರು.