ಮೈಸೂರು: ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯಿಂದ ಹುಣಸೂರು ತಾಲೂಕು ನೆಲ್ಲೂರು ಪಾಲ ಆಶ್ರಮ ಶಾಲೆಯ ವಿದ್ಯಾರ್ಥಿಗಳಿಗೆ ಆರೋಗ್ಯ ತಪಾಸಣೆ ನಡೆಸಲಾಯಿತು.
ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ. ಎಲ್. ಶ್ರೀನಿವಾಸ್ ಮಾತನಾಡಿ, ನಮ್ಮ ಸಂಸ್ಥೆಯಿಂದ ಇದು ಮೊದಲ ಆರೋಗ್ಯ ತಪಾಸಣಾ ಶಿಬಿರವಾಗಿದ್ದು, ರಾಜ್ಯದಲ್ಲಿರುವ ಎಲ್ಲ್ಲ ಆಶ್ರಮ ಶಾಲೆಗಳ ಮಕ್ಕಳಿಗೆ ಹಾಗೂ ಹಾಡಿ ಜನರಿಗೆ ಸರ್ಕಾರದಿಂದ ದೊರೆಯುವ ಸೌಲಭ್ಯಗಳು, ಅರಣ್ಯಕಾಯ್ದೆ, ಶಿಕ್ಷಣ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
ಅಲ್ಲದೇ ತಾಲೂಕು, ಹೋಬಳಿ, ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಪರಿಶಿಷ್ಠ ಪಂಗಡ, ಬುಡಕಟ್ಟು ಸಮುದಾಯಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು. ಈ ಶಿಬಿರ ಅತ್ಯಂತ ಯಶಸ್ವಿಯಾಗಿದ್ದು, ಎಲ್ಲಾ ವೈದ್ಯರು ಹಾಗೂ ಅಧಿಕಾರಿಗಳು ಶಿಕ್ಷಕರುಗಳಿಗೆ ಧನ್ಯವಾದ ತಿಳಿಸಿದರು.
ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯ ಉಪನಿರ್ದೇಶಕಿ, ಬಿ.ಎಸ್. ಪ್ರಭಾ ಅರಸ್, ತಾಲೂಕು ಕಲ್ಯಾಣಾಧಿಕಾರಿ ಎಚ್.ಸಿ. ಬಸವರಾಜು, ಎಂ. ನಾರಾಯಣಸ್ವಾಮಿ, ಮುಖ್ಯಶಿಕ್ಷಕ ಚೇತನ್‌ಕುಮಾರ್, ಸಮುದಾಯ ಆರೋಗ್ಯಾಧಿಕಾರಿ ಡಾ.ರವೀಶ್, ಬಿ. ಗಣಿ, ಜೆ.ಎಸ್.ಎಸ್. ಆಸ್ಪತ್ರೆಯ ಮಕ್ಕಳ ದಂತ ವೈದ್ಯೆ ಡಾ.ಇಂದಿರಾ, ಡಾ. ಸುಷ್ಮಾ ಮಕ್ಕಳ ತಜ್ಞರಾದ ಡಾ.ಪ್ರಶಾಂತ್, ಡಾ.ಚೇತಕ್, ಡಾ.ಸುನಿತಾಸಿಂಗ್, ವಾಕ್‌ಶ್ರಾವಣ ಸಂಸ್ಥೆಯ ಡಾ. ಅರುಣ್‌ರಾಜ್, ಡಾ. ಮಹಾದೇವಪ್ಪ, ನಾಗರಾಜ್ ಇದ್ದರು.
ಕೇಂದ್ರ ಬುಡಕಟ್ಟು ವ್ಯವಹಾರಗಳ, ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ, ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ ಹಾಗೂ ವಾಕ್‌ಶ್ರವಣ ಸಂಸ್ಥೆಯಿಂದ ಆಯೋಜಿಸಿದ್ದ ಶಿಬಿರದಲ್ಲಿ ಅಸಾಧಾರಣ ಶಾಲಾಮಕ್ಕಳ ತಪಾಸಣೆ, ದಂತಚಿಕಿತ್ಸೆ ಕಿವಿ, ಮೂಗು, ಗಂಟಲು, ವಾಕ್ ಮತ್ತು ಶ್ರವಣ ಪರೀಕ್ಷೆ, ನೇತ್ರ ತಪಾಸಣೆ, ರಕ್ತಪರೀಕ್ಷೆ, ಮಕ್ಕಳಲ್ಲಿರುವ ಪೌಷ್ಠಿಕಾಂಶದ ಕೊರತೆ ಇರುವ ಜೇನುಕುರುಬ, ಡೊಂಗ್ರಿ, ಗೆರೇಷಿಯಾ, ಹಕ್ಕಿಪಿಕ್ಕಿ, ಸೋಲಿಗ ಜನಾಂಗದ ತಪಾಸಣೆ ನಡೆಸಿ ಉಚಿತವಾಗಿ ಔಷಧ ವಿತರಿಸಲಾಯಿತು.