ಚಿತ್ರದುರ್ಗ: ಮಾಧ್ಯಮ ಕ್ಷೇತ್ರಕ್ಕೆ ಸಂಬಂಧಿಸಿದಂತೆ ದೇಶದಲ್ಲಿ ಯಾವುದಾದರೂ ಬೃಹತ್ತಾಗಿರುವ ಸಂಘಟನೆ ಇದೆ ಎಂದಾದರೆ ಅದು ಕರ್ನಾಟಕ ಕಾರ‌್ಯನಿರತ ಪತ್ರಕರ್ತ ಸಂಘವೆಂದು,ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಹೇಳಿದರು. ನಗರದ ಪತ್ರಿಕಾಭವನದಲ್ಲಿ ಭಾನುವಾರ ಜಿಲ್ಲಾ ಕಾರ‌್ಯನಿರತ ಪತ್ರಕ ರ್ತರ ಸಂಘ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಹಾಗೂ ಹಿರಿಯ ಪತ್ರಕರ್ತರಿಗೆ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, 1932ರಲ್ಲಿ ಸ್ಥಾಪನೆಯಾಗಿದ್ದ ಸಂಘದಲ್ಲಿ ಈಗ 8 ಸಾವಿರಕ್ಕೂ ಹೆಚ್ಚು ಸದಸ್ಯರಿದ್ದಾರೆ. ಸಂಘಟನೆಯಿಂದ ದೂರವಿದ್ದ ಶೇ.90 ಕಾರ‌್ಯ ನಿರತರ ಪತ್ರ ಕರ್ತರು ಸದಸ್ಯತ್ವ ಪಡೆದಿದ್ದಾರೆ.
ಸಂಘಟನೆ ಈಗ ಮತ್ತೊಂದು ಮಗ್ಗುಲಿಗೆ ಹೊರಳಿದೆ. ಇದಕ್ಕೆ ನಾನೊಬ್ಬನೇ ಕಾರಣವಲ್ಲ,ಕೋರ್ಟು,ಕಟ್ಟಳೆಗಳ ಗೋಜಲುಗಳಿಂದ ಹೊರ ಬಂ ದಿರುವ ಸಂಘವನ್ನು ನಾಡಿನ ಉದ್ದಗಲಕ್ಕೂ ಬಲಿಷ್ಠಗೊಳಿಸಲಾಗುತ್ತಿದೆ. ಸಂಘಟಕರಿಗೆ ತಾಯಿ ಹೃದಯವಿರಬೇಕು,ನ್ಯಾಯಾ ಧೀಶನ ಮನಸ್ಥಿತಿ ಇರಬೇಕು. ಎಲ್ಲರೂ ಪತ್ರಕರ್ತರಾಗಲು ಸಾಧ್ಯವಿಲ್ಲ.ಅದಕ್ಕೊಂದು ಸಣ್ಣ ಹುಚ್ಚುತನ,ಗೀಳು,ಸಮಾಜದೆಡೆ ಪ್ರೀತಿ ಬೇಕಾಗುತ್ತದೆ ಎಂದರು.
ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಸದಾಶಿವ ಶೆಣೈ ಮಾತನಾಡಿ,ಸದಸ್ಯ ಲಕ್ಷ್ಮೀನಾರಾಯಣ,ರಾಜ್ಯಸಂಘದ ಪ್ರಧಾನ ಕಾರ್ಯ ದರ್ಶಿ ಜಿ.ಸಿ.ಲೋಕೇಶ್,ಪತ್ರಕರ್ತರಾದ ಉಜ್ಜಿನಪ್ಪ,ರವಿಶಂಕರ್, ಮಾತನಾಡಿದರು. ಸಂಘದ ಜಿಲ್ಲಾಧ್ಯಕ್ಷ ದಿನೇಶ್‌ಗೌಡಗೆರೆ, ರಾಜ್ಯಸಮಿತಿ ಸದಸ್ಯ ಎಂ.ಯೋಗೇಶ್,ಅಭಿಮನ್ಯು ರಮೇಶ್ ಮತ್ತಿತರರು ಇದ್ದರು. ಹಿರಿಯ ಪತ್ರಕರ್ತರನ್ನು ಗೌರವಿಸಲಾಯಿತು.
-----