ಬೆಳಗಾವಿ: ಕರ್ನಾಟಕ ಅಲ್ಪಸಂಖ್ಯಾತರ ಅಬಿವೃಧ್ಧಿ ನಿಗಮದಿಂದ ಸರ್ಕಾರದ ಪ್ರಾಯೋಜಿತ ವಿವಿಧ ಯೋಜನೆಗಳಡಿಯಲ್ಲಿ 2023-24 ನೇ ಸಾಲಿನ ಅಲ್ಪಸಂಖ್ಯಾತರಾದ ಮುಸ್ಲಿಂ, ಜೈನ, ಕ್ರಿಶ್ಚಿಯನ್, ಬೌಧ್ದ, ಸಿಖ್ಖರು, ಪಾರ್ಸಿ ಜನಾಂಗದವರ ಸಾಮಾಜಿಕ, ಶೈಕ್ಷಣಿಕ, ಆರ್ಥಿಕಾಭಿವೃಧ್ಧಿಯಾಗಲು ಸಾಲ ಹಾಗೂ ಸಹಾಯಧನ ಸೌಲಭ್ಯ ಪಡೆಯಲು ಆನ್‌ಲೈನ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ವಿವಿಧ ಯೋಜನೆಗಳು: ಅರಿವು ಸಾಲ (ವಿಧ್ಯಾಭ್ಯಾಸ ಸಾಲ) ಯೋಜನೆ, ಗಂಗಾ ಕಲ್ಯಾಣ ಯೋಜನೆ, ಶ್ರಮಶಕ್ತಿ (ವಿಶೇಷ ಮಹಿಳಾ) ಯೋಜನೆ, ಸಮುದಾಯ ಆಧಾರಿತ ತರಬೇತಿ ಯೋಜನೆ, ವಿದೇಶ ವ್ಯಾಸಂಗಕ್ಕೆ ಸಾಲ ಯೋಜನೆ, ವೃತ್ತಿ ಪ್ರೋತ್ಸಾಹ ಯೋಜನೆ, ಶ್ರಮಶಕ್ತಿ ಯೋಜನೆ, ಸ್ವಾವಲಂಬಿ ಸಾರಥಿ ಯೋಜನೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಸೆ.25, 2023ರ ಒಳಗಾಗಿ ವೆಬ್‌ಸೈಟ್ ಅರ್ಜಿ ಸಲ್ಲಿಸಬಹದು. https://kmdconline.karnataka.gov.in/ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವ್ಯವಸ್ಥಾಪಕರ ಕಚೇರಿ ಮೌಲಾನಾ ಆಝಾದ ಅಲ್ಪಸಂಖ್ಯಾತರ ಭವನ, ಕೆ.ಎಸ್.ಸಿ.ಎ. ಕ್ರಿಕೇಟ್ ಕ್ರೀಡಾಂಗ ಎದುರುಗಡೆ, ರಾಮತೀರ್ಥ ನಗರ, ಬೆಳಗಾವಿ - 590016 ಹಾಗೂ ಕಛೇರಿ ದೂರವಾಣಿ ಸಂಖ್ಯೆ 0831-2950794 ಗೆ ಸಂಪರ್ಕಿಸಬಹುದಾಗಿದೆ ಎಂದು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃಧಿ ನಿಗಮದ (ನಿ) ಬೆಳಗಾವಿ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.