ಚಿತ್ರದುರ್ಗ:ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಕಾರ‌್ಯ ನಿರ್ವಹಿಸುತ್ತಿದ್ದ ತಾಂತ್ರಿಕ ಸಹಾಯಕ ಆರ್.ಸಂಜಯ್‌ರನ್ನು ಕರ್ತ ವ್ಯದಿಂದ ಬಿಡುಗಡೆಗೊಳಿಸಲಾಗಿದೆ ಎಂದು ಜಿಪಂ ಸಿಇಒ ಎಸ್.ಜೆ.ಸೋಮಶೇಖರ್ ತಿಳಿಸಿದ್ದಾರೆ. ಮೊಳಕಾಲ್ಮೂರು ತಾಲೂಕು ತುಮ ಕೂರ್ಲಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿದ್ದ, ಪ್ರಸ್ತುತ ಚಳ್ಳಕೆರೆ ತಾಲೂಕು ತಾಂತ್ರಿಕ ಸಹಾಯಕ ಆರ್.ಸಂಜಯ್,ತುಮಕೂರ್ಲಹಳ್ಳಿ ಗ್ರಾಪಂ ವ್ಯಾ ಪ್ತಿಯ ಚಿಕ್ಕೋಬನಹಳ್ಳಿ ಜಮೀನೊಂದರಲ್ಲಿ ನಿಯಮಬಾಹಿರವಾಗಿ ವೈಯಕ್ತಿಕ ಕಾಮಗಾರಿ ಅನುಷ್ಠಾನಗೊಳಿಸಿರುವುದರಿಂದ ಜಿಪಂ ಓಂ ಬುಡ್ಸ್ ಪರ್ಸನ್ ತನಿಖೆಯಲ್ಲಿ ಪತ್ತೆಯಾಗಿದ್ದು,ಮಾರ್ಗಸೂಚಿ ಉಲ್ಲಂಘಿಸಿ ಕರ್ತವ್ಯ ಲೋಪವೆಸಗಿದ್ದರಿಂದ ಅವರನ್ನು ಸೇವೆಯಿಂದ ಬಿಡು ಗಡೆ ಮಾಡಲಾಗಿದೆ ಎಂದು ಸಿಇಒ ತಿಳಿಸಿದ್ದಾರೆ.
-----