ಆಳಂದನಲ್ಲಿ ಹಮ್ಮಿಕೊಂಡಿದ್ದ ಅಭಿನಂದನೆ ಸಮಾರಂಭ ಹಾಗೂ ವಿದ್ಯುತ್ ಸುರಕ್ಷತಾ ಕಾರ್ಯಾಗಾರವನ್ನು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘದ ಉಪಾಧ್ಯಕ್ಷ ಬಾಬು ಕೋರೆ ಉದ್ಘಾಟಿಸಿದರು. ಮಾಣಿಕರಾವ ಕುಲಕರ್ಣಿ, ರಾಘವೇಂದ್ರ ಪಾಟೀಲ್, ಬಾಬುಗೌಡ ಪಾಟೀಲ್, ಗಣಪತಿ ಮರಪಳ್ಳಿ ಇತರರಿದ್ದರು. 
ಜಿಲ್ಲೆ

ಕರ್ತವ್ಯದ ವೇಳೆ ಸುರಕ್ಷತಾ ಸಾಮಗ್ರಿ ಜತೆಗಿರಲಿ

ಆಳಂದ: ವಿದ್ಯುತ್ ನೌಕರರು ಹಾಗೂ ಸಿಬ್ಬಂದಿ ಎಚ್ಚರಿಕೆಯಿಂದ ಕೆಲಸ ಮಾಡಬೇಕು. ನಿಮ್ಮ ಸುರಕ್ಷತೆಯ ದೃಷ್ಟಿಯಿಂದ ಇಲಾಖೆ ನೀಡುವ ಪರಿಕರಗಳನ್ನು ಬಳಸಿಕೊಂಡು ಕಾರ್ಯನಿರ್ವಹಿಸಬೇಕು ಎಂದು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘದ ಉಪಾಧ್ಯಕ್ಷ ಬಾಬು ಕೋರೆ ಸಲಹೆ ನೀಡಿದರು.

ಲಿಂಗಾಯತ ಭವನದಲ್ಲಿ ಜೆಸ್ಕಾಂ ಆಳಂದ, ಕಡಗಂಚಿ ಉಪ ವಿಭಾಗದಿಂದ ಮಂಗಳವಾರ ಹಮ್ಮಿಕೊಂಡಿದ್ದ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘದ ಪದಾಧಿಕಾರಿಗಳಿಗೆ ಅಭಿನಂದನೆ ಹಾಗೂ ವಿದ್ಯುತ್ ಸುರಕ್ಷತಾ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿ, ಸಾರ್ವಜನಿಕರ ಜತೆಗೆ ಇಲಾಖೆಯ ಸಿಬ್ಬಂದಿಯ ಸುರಕ್ಷತೆಯೂ ನಮ್ಮ ಜವಾಬ್ದಾರಿಯಾಗಿದೆ. ಇಡೀ ವಿಶ್ವಕ್ಕೆ ಬೆಳಕು ನೀಡುವ ನಾವು, ಒಂದಿಷ್ಟು ನಿರ್ಲಕ್ಷÈದಿಂದಾಗಿ ನಮ್ಮ ಕುಟುಂಬವನ್ನು ಕತ್ತಲೆಗೆ ದೂಡುತ್ತಿz್ದೆÃವೆ. ಹೀಗಾಗಿ ಕರ್ತವ್ಯದ ವೇಳೆ ಸುರಕ್ಷತೆ ಬಗೆಗಿನ ನಿರ್ಲಕ್ಷÈವನ್ನು ದೂರ ಸರಿಸಿ, ಎಚ್ಚರಿಕೆಯಿಂದ ಕೆಲಸ ಮಾಡಿ ಎಂದರು.
ಕೇAದ್ರ ಸಮಿತಿ ಕಾರ್ಯಕಾರಣಿ ಸದಸ್ಯ ಗಣಪತಿ ಮರಪಳ್ಳಿ, ವಿದ್ಯುತ್ ಪರಿವೀಕ್ಷಕಿ ಶಿಲ್ಪಾರಾಣಿ ಮಾತನಾಡಿದರು. ಸಹಾಯಕ ಕಾರ್ಯನಿವಾಹಕ ಅಭಿಯಂತರ ಮಾಣಿಕರಾವ ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು.

ಕಡಗಂಚಿ ಎಇಇ ರಾಘವೇಂದ್ರ ಪಾಟೀಲ್, ಪ್ರಮುಖರಾದ ಬಾಬಾಗೌಡ ಪಾಟೀಲ್, ಸುರೇಂದ್ರನಾಥ ಪಾಟೀಲ್, ದೇವಿದಾಸ ರೆಡ್ಡಿ, ಶ್ರೀನಾಥ ಚನ್ನೂರ, ಸಂಗಮನಾಥ, ಸೂರ್ಯಕಾಂತ ಪಾಟೀಲ್, ನಾಗರಾಜ ಚಿಚಕೋಟಿ, ನಂದಕುಮಾರ ಕುಲಕರ್ಣಿ, ರಾಜಕುಮಾರ ಕೋಟನೂರ, ಸಲೀಂ ಆಳಂದ, ಜ್ಞಾನೇಶ್ವರ ಖಜೂರಿ, ಸುನೀಲ ರುದ್ರವಾಡಿ, ಕೆ.ಭಕರೆ, ಅನೀಲ ನಿಂಬಾಳ, ಶ್ವೇತಾ ಕಡಗಂಚಿ, ಅವಿನಾಶ ಕಡಗಂಚಿ, ಶ್ರೀಶೈಲ ತಡಕಲ್, ವಿಶ್ವಾರಾಧ್ಯ ಮಾದನಹಿಪ್ಪರಗಾ, ಶಶಿಕಾಂತ ಸರಸಂಬಿ, ರವಿ ಅವಟೆ, ಶಂಭುಲಿAಗ ಅಷ್ಠಗಿ, ನಾಗನಾಥ ನಿರಗುಡಿ ಇತರರಿದ್ದರು,

ಶ್ರೀಶೈಲ ನಾಯ್ಕೋಡಿ ನಿರೂಪಣೆ ಮಾಡಿದರು. ಯಲ್ಲಾಲಿಂಗ ಶಿರೂರ ಸ್ವಾಗತಿಸಿದರು. ಪರಮೇಶ್ವರ ಬಡಿಗೇರ ಪ್ರಾಸ್ತಾವಿಕ ಮಾತನಾಡಿದರು. ಮಹಾದೇವಿ ಮತ್ತು ಲಕ್ಷ್ಮೀ ಸಂಗಡಿಗರು ಪ್ರಾರ್ಥಿಸಿದರು. ರಾಜು ಷಣ್ಮುಖ ವಂದಿಸಿದರು.