ಶೃಂಗೇರಿ ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ನನ್ನ ವೃತ್ತಿ ನನ್ನ ಆಯ್ಕೆ ಪುಸ್ತಕ ವಿತರಿಸಲಾಯಿತು. ವಿನೋದಕುಮಾರ್, ರಾಜೇಶ್, ಆನಂದಸ್ವಾಮಿ ಇತರರಿದ್ದರು. 
ಜಿಲ್ಲೆ

ಕರ್ತವ್ಯ ನಿಷ್ಠೆಯಿಂದ ಯಶಸ್ಸು

ಶೃಂಗೇರಿ: ಯಾವುದೇ ವೃತ್ತಿಯನ್ನು ಆಯ್ಕೆ ಮಾಡಿಕೊಂಡರೂ ಪ್ರಾಮಾಣಿಕತೆ, ನಿಷ್ಠೆಯಿಂದ ಕರ್ತವ್ಯ ನಿರ್ವಹಿಸಿದರೆ ಯಶಸ್ಸು ದೊರಕುತ್ತದೆ ಎಂದು ಸರ್ಕಾರಿ ಪ್ರೌಢಶಾಲೆ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಡಾ. ನಿರಂಜನಕುಮಾರ್ ಹೇಳಿದರು.

ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ರಾಷ್ಟ್ರೀಯ ಕೌಶಲಾಭಿವೃದ್ಧಿ ಯೋಜನೆಯಡಿ ಬುಧವಾರ ನನ್ನ ವೃತ್ತಿ ನನ್ನ ಆಯ್ಕೆ ಪುಸ್ತಕ ವಿತರಿಸಿ ಮಾತನಾಡಿದರು. ಕೌಶಲವಿದ್ದರೆ ಮಾತ್ರ ಅಂಥವರಿಗೆ ಬೇಡಿಕೆ ಇರುತ್ತದೆ. ಎಲ್ಲರೂ ಸರ್ಕಾರಿ ಉದ್ಯೋಗ ನಿರೀಕ್ಷಿಸಲಾಗದು. ಸ್ವಂತ ಉದ್ಯೋಗದ ಮೂಲಕ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬಹುದಾಗಿದೆ ಎಂದರು. ಶಾಲಾ ಉಪಪ್ರಾಚಾರ್ಯ ಶಶಿಧರ್ ಮಾತನಾಡಿ, ನಮ್ಮ ಉದ್ಯೋಗವನ್ನು ಪಡೆಯುವ ಮೊದಲು ಉತ್ತಮ ಶಿಕ್ಷಣ ಪಡೆಯಬೇಕು. ಶಿಕ್ಷಣದ ಜತೆ ಹೆಚ್ಚಿನ ತರಬೇತಿ ಪಡೆದಾಗ ಕೌಶಲ ವೃದ್ಧಿಯಾಗುತ್ತದೆ ಎಂದು ಹೇಳಿದರು. ಶಾಲಾ ವಿದ್ಯಾರ್ಥಿಗಳಿಗೆ ಉದ್ಯೋಗ ಮಾಹಿತಿ ನೀಡುವ ಪುಸ್ತಕ ವಿತರಿಸಲಾಯಿತು. ಎಸ್‌ಡಿಎಂಸಿ ಅಧ್ಯಕ್ಷ ಆನಂದಸ್ವಾಮಿ, ಶಿಕ್ಷಕ ವಿನೋದಕುಮಾರ್, ಸಮಿತಿಯ ರಾಜೇಶ್, ಉಷಾ ಇತರರಿದ್ದರು.