ಜಿಲ್ಲೆ

ಕರ್ಕಿನಾಯಿಕ ಕಾರ್ಯ ಶ್ಲಾಘನೀಯ

ಸಂಕೇಶ್ವರ: ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆಯ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿ ವ್ಯವಸ್ಥಾಪಕ ನಿರ್ದೇಶಕರಾಗಿ ನಿವೃತ್ತಿ ಹೊಂದುತ್ತಿರುವ ಸಾತಪ್ಪ ಕರ್ಕಿನಾಯಿಕ ಅವರ ಕಾರ್ಯ ಶ್ಲಾಘನೀಯ ಎಂದು ಕಾರ್ಖಾನೆ ಉಪಾಧ್ಯಕ್ಷ ಅಶೋಕ ಪಟ್ಟಣಶೆಟ್ಟಿ ಹೇಳಿದರು.

ಇಲ್ಲಿನ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕ ಸಾತಪ್ಪ ಕರ್ಕಿನಾಯಿಕ ಸೇವಾ ನಿವೃತ್ತರಾದ ಹಿನ್ನೆಲೆಯಲ್ಲಿ ಆಡಳಿತ ಮಂಡಳಿ ವತಿಯಿಂದ ಈಚೆಗೆ ಸನ್ಮಾನಿಸಿ ಮಾತನಾಡಿ, ಎಸ್.ಆರ್.ಕರ್ಕಿನಾಯಿಕ ಕಾರ್ಖಾನೆಯಲ್ಲಿ ವ್ಯವಸ್ಥಾಪಕ ನಿರ್ದೇಶಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವುದು ಹೆಮ್ಮೆಯ ಸಂಗತಿ ಎಂದರು.

ನಿರ್ದೇಶಕ ಶಿವನಾಯಿಕ ನಾಯಿಕ ಮಾತನಾಡಿ, ಕಾರ್ಖಾನೆ ಪ್ರಗತಿಯಲ್ಲಿ ಎಸ್.ಆರ್.ಕರ್ಕಿನಾಯಿಕ ಶ್ರಮ ಅಪಾರ ಎಂದರು.

ಸಾತಪ್ಪ ಕರ್ಕಿನಾಯಿಕ ಮಾತನಾಡಿ, ಹಿರಣ್ಯಕೇಶಿ ಕಾರ್ಖಾನೆಯಲ್ಲಿ ೨೮ ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದ ನನಗೆ ವ್ಯವಸ್ಥಾಪಕ ನಿರ್ದೇಶಕ ಹುದ್ದೆಯಲ್ಲಿ ಕಾರ್ಯನಿರ್ವಹಿಸುವ ಅವಕಾಶ ದೊರೆತಿರುವುದು ನನ್ನ ಸೌಭಾಗ್ಯ ಎಂದರು. ನಿರ್ದೇಶಕ ಬಾಬಾಸಾಹೇಬ ಅರಬೋಳೆ ಮಾತನಾಡಿದರು. ವಿವಿಧ ವಿಭಾಗಗಳಲ್ಲಿ ಸೇವಾ ನಿವೃತ್ತಿ ಹೊಂದಿದ ೧೧ ಜನರನ್ನು ಸನ್ಮಾನಿಸಲಾಯಿತು.

ಕಾರ್ಖಾನೆ ಅಧ್ಯಕ್ಷ ಬಸವರಾಜ ಕಲ್ಲಟ್ಟಿ, ನಿರ್ದೇಶಕರಾದ ಬಸವರಾಜ ಮರಡಿ, ಪ್ರಭುದೇವ ಪಾಟೀಲ, ಸುರೇಂದ್ರ ದೊಡಲಿಂಗನವರ, ಜನರಲ್ ಮ್ಯಾನೇಜರ್ ವೀರನಗೌಡ ದೇಸಾಯಿ, ಕಾರ್ಮಿಕ ಸಂಘಟನೆ ಅಧ್ಯಕ್ಷ ಮೋಹನ ಕೋಠಿವಾಲೆ, ರವೀಂದ್ರ ಚೌಗಲಾ, ಎಂ.ಪಿ.ದೇಸಾಯಿ, ಲಕ್ಷ್ಮಣ ಹಂಚಿನಮನಿ, ಸುಭಾಷ ನಾಶಿಪುಡಿ ಇತರರಿದ್ದರು.