ಜಿಲ್ಲೆ

ಕರೊನಾ ಸೇನಾನಿಗಳಿಗೆ ಕಿಟ್ ವಿತರಣೆ, ಆಶಾಗಳಿಗೆ ಸೀರೆ ಹಂಚಿಕೆ, ಸೋಂಕುತಡೆಗೆ ಹಿರೇಮಸಳಿ ಗ್ರಾಪಂ ಪಣ

ವಿಜಯಪುರ: ಗ್ರಾಮೀಣ ಭಾಗದಲ್ಲಿ ಹೆಚ್ಚುತ್ತಿರುವ ಕರೊನಾ ಸೋಂಕು ನಿರ್ವಹಣೆಯಲ್ಲಿ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಪಾತ್ರ‌ ಅನನ್ಯವಾಗಿದ್ದು, ಬರುವ ದಿನಗಳಲ್ಲಿ ಜನರ ಮನವೊಲಿಸಿ ಲಸಿಕೆ ಹಾಕಿಸುವ ಮೂಲಕ ಮತ್ತಷ್ಟು ಪರಿಣಾಮಕಾರಿಯಾಗಿ ಸೇವೆ ಸಲ್ಲಿಸಬೇಕೆಂದು ಪಿಡಿಒ‌ ಸಿದ್ರಾಮ ಸಿನಿಖೇಡ ತಿಳಿಸಿದರು.

ಸೋಮವಾರ ಇಂಡಿ ತಾಲೂಕಿನ ಹಿರೇಮಸಳಿ ಪಂಚಾಯಿತಿ ಸಭಾಂಗಣದಲ್ಲಿ‌ ನಡೆದ ಸಮಾರಂಭದಲ್ಲಿ ಆಶಾ ಹಾಗೂ ಕಾರ್ಯಕರ್ತೆಯರಿಗೆ ಆಹಾರ ಕಿಟ್ ಮತ್ತು ಸೀರೆ ಉಡುಗೊರೆ ನೀಡಿ ಅವರು ಮಾತನಾಡಿದರು.

ಗ್ರಾಮೀಣ ಭಾಗದಲ್ಲಿ ಕರೊನಾ ಸೋಂಕು ಹೆಚ್ಚುತ್ತಿದೆ. ಜನರು ಆರೋಗ್ಯ ತಪಾಸಣೆಗೆ ಮತ್ತು ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಅವರ ಮನವೊಲಿಸಿ‌ ಲಸಿಕೆ ಹಾಕಿಸಬೇಕು. ರೋಗ ಲಕ್ಷಣಗಳು ಕಂಡು ಬಂದರೆ ಕಾಳಜಿ ಕೇಂದ್ರಕ್ಕೆ ಕರೆದೊಯ್ದು ಚಿಕಿತ್ಸೆ ಕೊಡಿಸಬೇಕೆಂದರು.

ಈಗಾಗಲೇ ಗ್ರಾಮದಲ್ಲಿ ಸಾಕಷ್ಟು ಜಾಗೃತಿ ಮೂಡಿಸಲಾಗಿದೆ. ಪ್ರಮುಖ ಬಡಾವಣೆಗಳಲ್ಲಿ ಸ್ಯಾನಿಟೈಸ್ ಮಾಡಿಸಲಾಗಿದೆ. ಬರುವ ದಿನಗಳಲ್ಲಿ ಮತ್ತಷ್ಟು ಜಾಗೃತಿ ವಹಿಸಬೇಕೆಂದರು.

ಇದೇ ವೇಳೆ ಸೇವೆಯಿಂದ ನಿವೃತ್ತಿಯಾದ ನೀರ್ಗಂಟಿ ಮಹ್ಮದಲಿ ನಾಟಿಕಾರ ಇವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು.

ಅಧ್ಯಕ್ಷೆ ರಮ್ ಜಾನ್ ಬಿ ಮಹ್ಮದ್ ಅಲಿ ಗೂಗಿಹಾಳ, ಉಪಾಧ್ಯಕ್ಷ ಮೈಬೂಬ ಬಗಲಿ, ಸದಸ್ಯರಾದ ಅಶೋಕ ಮರಡಿ, ಶ್ರೀಕೃಷ್ಣ ಸುಣಗಾರ, ಸುಶಿಲಾಬಾಯಿ ಚಾಂದಕವಟೆ, ನಜೀರ ಗುಬ್ಬೆವಾಡ, ಲಕ್ಕವ್ವ ದೊಡ್ಡಮನಿ, ಬಿಸ್ಮಿಲ್ಲಾ ಸೌದಾಗರ, ಹುಸೇನಮಾ ಉ.ಪ್ಯಾಟಿ, ಚಂದ್ರಭಾಗ್ಯ ಸಿಂದಗಿ, ಸವಿತಾ ಭಾಸಗಿ, ಕಸ್ತೂರಿಬಾಯಿ ದೊಡ್ಡಮನಿ, ರಿಯಾಜ್ ಗೌರ, ಶಿವಲೀಲಾ‌ ಮಾಶ್ಯಾಳ, ಶಿವನಗೌಡ ಪಾಟೀಲ,

ಗ್ರಂಥಾಲಯ ಮೇಲ್ವಿಚಾರಕ ಪೀರು ಮನಮಿ, ಸಿಬ್ಬಂದಿ ಬಾಬು ಎಲಿಗಾರ, ಗಂಗು ಮರಡಿ, ಸೋಮು ಶಿರಗೊಂಡ ಮತ್ತಿತರರಿದ್ದರು.