ಜಿಲ್ಲೆ

ಕರೊನಾ ಸೇನಾನಿಗಳ ಕರ್ತವ್ಯ ಶ್ಲಾಘನೀಯ, ಜಿಪಂ ಸಾಮಾಜಿಕ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಕೆ.ಸಿ.ಮಂಜುನಾಥ್ ಮೆಚ್ಚುಗೆ, ಆಲೂರು ದುದ್ದನಹಳ್ಳಿಯಲ್ಲಿ ಆಹಾರ ಕಿಟ್ ವಿತರಣೆ

Bengaluru Rural

ಕುಂದಾಣ: ಕರೊನಾದಂಥ ರಾಷ್ಟ್ರೀಯ ವಿಪತ್ತಿನ ಸಮಯದಲ್ಲಿ ಜೀವನದ ಹಂಗು ತೊರೆದು ಕರೊನಾ ನಿರ್ವಹಣೆಯಲ್ಲಿ ತೊಡಗಿರುವ ಕರೊನಾ ವಾರಿಯರ್ಸ್‌ಗಳ ಸೇವೆ ಶ್ಲಾಘನೀಯ ಎಂದು ಜಿಪಂ ಸಾಮಾಜಿಕ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಕೆ.ಸಿ.ಮಂಜುನಾಥ್ ಹೇಳಿದರು.

ದೇವನಹಳ್ಳಿ ತಾಲೂಕು ಆಲೂರು ದುದ್ದನಹಳ್ಳಿ ಗ್ರಾಪಂ ಆವರಣದಲ್ಲಿ ಗುರುವಾರ ಕಾಂಗ್ರೆಸ್‌ನಿಂದ ಹಮ್ಮಿಕೊಂಡಿದ್ದ ಆಹಾರ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಕರೊನಾ ಮಾರಿ ವಿಶ್ವವನ್ನೇ ಬಾಧಿಸುತ್ತಿದೆ. ಜೀವ ಹಾಗೂ ಜೀವನದ ನಡುವೆ ಹೋರಾಟ ನಡೆಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇಂಥ ಸಮಯದಲ್ಲಿ ಯಾರೂ ಆತ್ಮಸ್ಥೈರ್ಯ ಕಳೆದುಕೊಳ್ಳಬಾರದು ಎಲ್ಲರೂ ಕರೊನಾ ವಿರುದ್ಧ ಹೋರಾಟ ನಡೆಸಬೇಕು ಎಂದು ಹೇಳಿದರು.

ಕರೊನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಕರೊನಾ ಸೇನಾನಿಗಳು ಹಾಗೂ ಅಂಗವಿಕಲರಿಗೆ ಆಹಾರ ಕಿಟ್ ವಿತರಿಸಲಾಗುತ್ತಿದೆ ಎಂದು ತಿಳಿಸಿದರು.

ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಪ್ರಸನ್ನಕುಮಾರ್, ಪಂಚಾಯಿತಿ ಅಧ್ಯಕ್ಷೆ ಗೌರಮ್ಮ, ಉಪಾಧ್ಯಕ್ಷೆ ಕಾಂತಮ್ಮ ಕನ್ನಮಂಗಲ ಗ್ರಾಪಂ ಅಧ್ಯಕ್ಷ ಕೆ.ನಾಗೇಶ್, ಪಿಡಿಒ ಸುಶೀಲಮ್ಮ, ಮುಖಂಡರಾದ ಡಿ.ಆರ್. ಮುನೇಗೌಡ, ಆಂಜಿನಪ್ಪ ರಮೇಶ್, ಚಂದ್ರಪ್ಪ ಮತ್ತಿತರರಿದ್ದರು.