ಜಿಲ್ಲೆ

ಕರೊನಾ ಸಂರಕ್ಷಣೆ ಸಾಮಗ್ರಿ ವಿತರಿಸಿ

ಮುಂಡರಗಿ: ಅಂಗನವಾಡಿ ಕೇಂದ್ರಗಳಿಗೆ ಹಾಗೂ ಕಾರ್ಯಕರ್ತೆಯರಿಗೆ ಕರೊನಾದಿಂದ ಸಂರಕ್ಷಣೆ ಸಾಮಗ್ರಿ ಪೂರೈಕೆ ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ತಾಲೂಕು ಅಂಗನವಾಡಿ ನೌಕರರ ಸಂಘದಿಂದ ತಹಸೀಲ್ದಾರ್ ಜೆ.ಬಿ. ಜಕ್ಕನಗೌಡ್ರ ಮೂಲಕ ಮುಖ್ಯಮಂತ್ರಿಗೆ ಸೋಮವಾರ ಮನವಿ ಸಲ್ಲಿಸಲಾಯಿತು.

ತಹಸೀಲ್ದಾರ್ ಪರವಾಗಿ ಶಿರಸ್ತೇದಾರ್ ಆರ್.ಆರ್. ಡೊಂಬರ ಮನವಿ ಸ್ವೀಕರಿಸಿದರು. ಅಂಗನವಾಡಿ ನೌಕರರ ಸಂಘದ ತಾಲೂಕಾಧ್ಯಕ್ಷೆ ಸಿ.ಬಿ. ಶೇಳಕೆ, ಕಾರ್ಯದರ್ಶಿ ಕೆ.ಜಿ. ಬೀಳಗಿ, ಖಜಾಂಚಿ ಎಸ್.ಡಿ. ಚಲವಾದಿ, ಡಿ.ಜಿ. ಕುಕನೂರ, ಆರ್.ಎಂ. ಮುಲ್ಲಾ, ಪಾರವ್ವ ಹೆಗ್ಗಣ್ಣವರ, ಲಿಂಗಮ್ಮ ಲಿಂಗಶೆಟ್ಟರ್, ಎ.ಪಿ. ಜೋಳದ, ಶಾರದಾ ಪಾಟೀಲ, ಎಸ್.ಎಸ್. ಜೋಳದ, ಸಾವಿತ್ರಿ ರಡ್ಡೇರ, ಎಂ.ಎಂ. ಲಿಂಗಶೆಟ್ಟರ್, ಎನ್.ಎಸ್. ಹಿರಿತಿಮ್ಮನವರ, ಅನಕ್ಕ ಮಡಿವಾಳರ, ಗಿರಿಜವ್ವ ವಾಲಿಕಾರ, ಸಿದ್ದಮ್ಮ ರಣಸಿದ್ದಪ್ಪನವರ ಇತರರಿದ್ದರು.