ಜಿಲ್ಲೆ

ಕರೊನಾ ವೈರಸ್ ಎತ್ತರ ಜಿಗಿತ

Dharwad

ಧಾರವಾಡ: ಜಿಲ್ಲೆಯಲ್ಲಿ ಬುಧವಾರ 327 ಕರೊನಾ ಪ್ರಕರಣ ಪತ್ತೆಯಾಗಿದೆ. ಇದು ಒಂದು ದಿನದ ಅತಿಹೆಚ್ಚಿನ ಪ್ರಕರಣವಾಗಿದೆ. ಪ್ರಕರಣಗಳ ಒಟ್ಟು ಸಂಖ್ಯೆ 11836ಕ್ಕೆ ಏರಿದೆ. ಇದುವರೆಗೆ 9034 ಜನ ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 2465 ಪ್ರಕರಣಗಳು ಸಕ್ರಿಯವಾಗಿವೆ. 74 ಜನರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದುವರೆಗೆ 337 ಜನ ಮೃತಪಟ್ಟಿದ್ದಾರೆ.

ಬುಧವಾರದ ಪ್ರಯೋಗಾಲಯ ವರದಿಯಲ್ಲಿ ಧಾರವಾಡ ನಗರ ಹಾಗೂ ಗ್ರಾಮೀಣ ಪ್ರದೇಶ ಸೇರಿ 70 ಪ್ರದೇಶದಲ್ಲಿ ಚೀನಿ ವೈರಸ್ ದೃಢಪಟ್ಟಿದೆ. ಹುಬ್ಬಳ್ಳಿ ಗ್ರಾಮೀಣ ಹಾಗೂ ನಗರ ತಾಲೂಕು ಸೇರಿ 79 ಕಡೆಗಳಲ್ಲಿ ಪತ್ತೆಯಾಗಿದೆ.

ಉಳಿದಂತೆ ಕಲಘಟಗಿ ತಾಲೂಕಿನ ಬಮ್ಮಿಗಟ್ಟಿ, ಕುರವಿನಕೊಪ್ಪ, ಹನ್ನೆರಡುಮಠ, ಕುರವಿನಕೊಪ್ಪ ಗ್ರಾಮ, ನವಲಗುಂದ ತಾಲೂಕಿನ ಅಳಗವಾಡಿ, ಇಬ್ರಾಹಿಂಪುರ, ಶಲವಡಿಯ ದೇಸಾಯಿಪೇಟೆ ಓಣಿ, ಚಿಲಕವಾಡ, ಹಾಲಕುಸಗಲ್, ಅಮರಗೋಳ, ಬೆನ್ನೂರು, ಕುಂದಗೋಳ ತಾಲೂಕಿನ ಬಸವೇಶ್ವರ ಓಣಿ, ರಾಮಾಪುರ, ಯಲಿವಾಳ, ಕಳಸ ಗ್ರಾಮದ ಪಂಚಾಯಿತಿ ಹತ್ತಿರ, ಉಪ್ಪಾರ ಓಣಿ, ಸರ್ಕಾರಿ ಶಾಲೆ ಹತ್ತಿರ, ಕಾಳಿದಾಸ ನಗರ, ಶಿರಗುಪ್ಪಿ ಗೌಡರ ಓಣಿ, ತರ್ಲಘಟ್ಟ, ಗುಡಗೇರಿ ಗ್ರಾಮದ ಅಂಚೆ ಕಚೇರಿ ಬಳಿ, ಕೊಂಕಣ ಕುರಹಟ್ಟಿ, ಅಂಬೇಡ್ಕರ್ ನಗರ, ತಾಲೂಕು ಆಸ್ಪತ್ರೆ, ಬೆಟದೂರ ರಾಣಿ ಚನ್ನಮ್ಮ ಶಾಲೆ ಹತ್ತಿರ, ಬೂಕೊಪ್ಪ ಮೈಲಾರಲಿಂಗೇಶ್ವರ ಓಣಿ, ಮತ್ತಿಗಟ್ಟಿ, ಸಂಕ್ಲಿಪುರ, ಇಂಗಳಗಿ. ಅಣ್ಣಿಗೇರಿ ತಾಲೂಕಿನ ಭದ್ರಾಪುರ, ಇಂದಿರಾನಗರ, ಜನತಾ ಪ್ಲಾಟ್, ಬಸವೇಶ್ವರ ನಗರ, ನಾಗರಹಳ್ಳಿ, ಸ್ಟೇಷನ್ ರಸ್ತೆ, ಅಂಬಿಗೇರಿ ಕ್ರಾಸ್​ನಲ್ಲಿ ಕರೋನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ.