ಜಿಲ್ಲೆ

ಕರೊನಾ ಮೊದಲ ಸೋಂಕಿತನಿಗೆ ಚಿಕಿತ್ಸೆ ನೀಡಿದ ಸೇನಾನಿಗಳಿಗೆ ಸನ್ಮಾನ

ಹುಬ್ಬಳ್ಳಿ: ಕರೊನಾ ಸಂದರ್ಭದಲ್ಲಿ ಪುಕ್ಕಟೆ ಪ್ರಚಾರ ಪಡೆಯುವವರ ಸಂಖ್ಯೆ ಈಗೀಗ ಹೆಚ್ಚುತ್ತಿದೆ. ಇಂಥ ಸಂದರ್ಭದಲ್ಲಿ ನಿಜವಾಗಿ ಶ್ರಮ ಪಡುತ್ತಿರುವವರು ವೈದ್ಯರು, ಶುಶ್ರೂಷಕರು, ಡಿ ದರ್ಜೆ ಸಿಬ್ಬಂದಿ. ಹಾಗಾಗಿಯೇ ಕರೊನಾ ಸೋಂಕಿತ ಮೊದಲ ವ್ಯಕ್ತಿಗೆ ಚಿಕಿತ್ಸೆ ಹಾಗೂ ಶುಶ್ರೂಷೆ ಮಾಡಿದ ಕಿಮ್ಸ್​ನ ಪ್ರಥಮ ಸೇನಾನಿಗಳಿಗೆ ಬಸವ ಜಯಂತಿ ಸಂದರ್ಭದಲ್ಲಿ ಅದ್ದೂರಿ ಸನ್ಮಾನ ಮಾಡಲಾಯಿತು.

ದಿ. ವಿ.ಬಿ. ಡಂಗನವರ ಪ್ರತಿಷ್ಠಾನ ವತಿಯಿಂದ ನಗರದ ಕಿಮ್್ಸ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಕರೊನಾ ಸೋಂಕಿತರಿಗಾಗಿಯೇ ತಮ್ಮ ಜೀವನ ಸವೆಸುತ್ತಿರುವ ಆಡಳಿತ ಮಂಡಳಿ, ವೈದ್ಯರು, ಶುಶ್ರೂಷಕರು ಹಾಗೂ ಡಿ ಗ್ರುಪ್ ನೌಕರರನ್ನು ಗೌರವಿಸಲಾಯಿತು.

ಪ್ರತಿಷ್ಠಾನದ ಅಧ್ಯಕ್ಷ ಸದಾನಂದ ಡಂಗನವರ ಮಾತನಾಡಿ, ಕರೊನಾ ಅಂದರೆ ಈಗೀಗ ಹೆದರುವ ಪರಿಸ್ಥಿತಿ ಬಂದಿದೆ. ಇಂಥದರಲ್ಲಿ ಧಾರವಾಡ ಹೊಸ ಯಲ್ಲಾಪೂರದ ಮೊದಲ ಸೋಂಕಿತ ಬಳಿ ತೆರಳಿ ಚಿಕಿತ್ಸೆ ನೀಡಿದ ವೈದ್ಯರು, ಶುಶ್ರೂಷೆ ಮಾಡಿದ ಸಿಸ್ಟರ್​ಗಳು, ಡಿ ಗ್ರುಪ್ ಸಿಬ್ಬಂದಿಯ ಶ್ರಮ ಸಾರ್ಥಕ. ಇಬ್ಬರು ಸೋಂಕಿತರು ಈಗಾಗಲೇ ಗುಣಮುಖವಾಗಿ ಮನೆಗೆ ಹೋಗಿದ್ದು, ಇದರಿಂದ ನಮ್ಮ ಕಿಮ್ಸ್​ನ ಕೀರ್ತಿ ಎತ್ತರಕ್ಕೆ ಏರಿದೆ ಎಂದು ಹೇಳಿದರು.

ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ, ಪ್ರಭಾರ ವೈದ್ಯಕೀಯ ಅಧೀಕ್ಷಕ ಡಾ. ಅರುಣಕುಮಾರ ಸಿ., ಉಪ ವೈದ್ಯಕೀಯ ಅಧೀಕ್ಷಕರಾದ ಡಾ. ಎಸ್.ವೈ. ಮುಲ್ಕಿಪಾಟೀಲ, ಡಾ. ರಾಜಶೇಖರ ದ್ಯಾಬೇರಿ, ಆರ್​ಎಂಒ ಡಾ. ಸಿದ್ದೇಶ್ವರ ಕಟಕೋಳ, ಮುಖ್ಯ ಆಡಳಿತಾಧಿಕಾರಿ ರಾಜಶ್ರೀ ಜೈನಾಪೂರ, ಸೋಂಕಿತನ ಬಳಿ ತೆರಳಿ ಚಿಕಿತ್ಸೆ ನೀಡಿದ ಡಾ. ಈಶ್ವರ ಹಸಬಿ, ಡಾ. ಸಚಿನ್ ಹೊಸಕಟ್ಟಿ, ಡಾ. ಚೇತನ, ಡಾ. ಕಿರಣ, ಮೊದಲ ಶುಶ್ರೂಷೆ ಮಾಡಿದ ಶುಶ್ರೂಷಕರಾದ ಹನ್ನಪಾಲ, ಕಮಲಾ ಬಿ., ಸಿಬ್ಬಂದಿ ಹೇಮೇಂದ್ರ, ಪರಶುರಾಮ ಮಲ್ಯಾಳ, ನಾಗರಾಜ ಜಗತಾಪ, ಮೈನುದ್ದೀನ್, ಪ್ರವೀಣ ವಡ್ಡರ ಅವರನ್ನು ಪೇಟ ತೊಡಿಸಿ, ಗಂಧದ ಮಾಲೆ ಹಾಕಿ ಗೌರವಿಸಲಾಯಿತು.

ಪ್ರತಿಷ್ಠಾನದ ಪದಾಧಿಕಾರಿಗಳಾದ ರಾಜಣ್ಣ ಪವಾರ, ಸುಪ್ರೀತ್ ಶೆಟ್ಟಿ, ಮಲ್ಲಿಕ್ ಸಿಖಂದರ್, ವೀರೇಶ ಡಂಗನವರ ಉಪಸ್ಥಿತರಿದ್ದರು.