ಜಿಲ್ಲೆ

ಕರೊನಾ ಮಾಹಿತಿ, ಜಾಗೃತಿ ಶಿಬಿರ

ಕುಮಟಾ: ಭಾರತೀಯ ಕುಟುಂಬ ಯೋಜನಾ ಸಂಘ ಹಾಗೂ ಮಿರ್ಜಾನದ ದಯಾನಿಲಯ ಟ್ರಸ್ಟ್ ವತಿಯಿಂದ ದೀವಗಿಯಲ್ಲಿ ಮಹಿಳೆಯರಿಗೆ ಉಚಿತ ಆರೋಗ್ಯ ತಪಾಸಣೆ, ರಕ್ತ ಹೀನತೆ ತಪಾಸಣೆ ಹಾಗೂ ಕರೊನಾ ಕುರಿತ ಮಾಹಿತಿ-ಜಾಗೃತಿ ಶಿಬಿರ ಶನಿವಾರ ಜರುಗಿತು.

ಭಾಕುಯೋ ಸಂಘದ ವೈದ್ಯಾಧಿಕಾರಿ ಡಾ. ಸನ್ಮತಿ ಹೆಗಡೆ ಅವರು ಮಹಿಳೆಯರಿಗೆ ಉಚಿತ ಆರೋಗ್ಯ ತಪಾಸಣೆ ಮಾಡಿದರು. ಲ್ಯಾಬ್ ತಂತ್ರಜ್ಞೆ ಮಧುಶ್ರೀ ನಾಯ್ಕ ರಕ್ತ ಹೀನತೆಯ ತಪಾಸಣೆ ಮಾಡಿದರು.

ಅಧ್ಯಕ್ಷತೆ ವಹಿಸಿದ್ದ ಭಾಕುಯೋ ಸಂಘದ ವ್ಯವಸ್ಥಾಪಕಿ ಸಂತಾನ್ ಲೂಯಿಸ್, ಕರೊನಾ ಸೋಂಕು ಮುಂಜಾಗ್ರತೆ ಹಾಗೂ ಚಿಕಿತ್ಸೆ, ಶಾಶ್ವತ ಮತ್ತು ತಾತ್ಕಾಲಿಕ ಕುಟುಂಬ ಯೋಜನಾ ನಿಯಂತ್ರಣ ವಿಧಾನಗಳನ್ನು ವಿವರಿಸಿದರು.

ದಯಾನಿಲಯ ಟ್ರಸ್ಟ್​ನ ವ್ಯವಸ್ಥಾಪಕಿ ಅರ್ಸಲಾ, ಶುಶ್ರೂಷಕಿ ಮೇರಿ, ಭಾಕುಯೋ ಸಂಘದ ಕಾರ್ಯಕ್ರಮಾಧಿಕಾರಿ ಮಂಜುಳಾ ಗೌಡ, ಶುಶ್ರೂಷಕಿ ಕಮಲಾ ಪಟಗಾರ, ಭಾರತಿ ನಾಯಕ ಇದ್ದರು.