ಜಿಲ್ಲೆ

ಕರೊನಾ ಭಯಾನಕ ದಾಖಲೆ!

ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿ ದೈನಿಕ ಸೋಂಕಿನ ಸಂಖ್ಯೆ ಇದೇ ಮೊದಲ ಬಾರಿಗೆ ಬುಧವಾರ 600ನ್ನು ಮೀರುವ ಮೂಲಕ ಕರೊನಾ ಭಯಾನಕ ದಾಖಲೆ ಬರೆದಿದೆ. ಇದರೊಂದಿಗೆ, ಜನತಾ ಕರ್ಫ್ಯೂ ಹಾಗೂ ಚೀನಿ ವೈರಸ್ ರೋಗ ಹರಡುವಿಕೆ ತಡೆಯುವ ಮಾರ್ಗಸೂಚಿಗಳನ್ನು ಸಾರ್ವಜನಿಕರು ಅತ್ಯಂತ ಶ್ರದ್ಧೆಯಿಂದ ಪಾಲಿಸಬೇಕು ಎನ್ನುವುದನ್ನು ಸಾರಿ ಹೇಳಿದೆ.

ಬುಧವಾರದ ಪ್ರಯೋಗಾಲಯ ವರದಿಯಲ್ಲಿ 654 ಜನರಿಗೆ ಕರೊನಾ ಸೋಂಕು ತಗುಲಿದೆ. ಇದರಿಂದ ಸಕ್ರಿಯ ಪ್ರಕರಣಗಳ ಸಂಖ್ಯೆ 3488ಕ್ಕೆ ಜಿಗಿದಿದೆ. 182 ಜನರು ಚೇತರಿಸಿಕೊಂಡು ವಿವಿಧ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ.

ಕರೊನಾದಿಂದಾಗಿ ಮತ್ತೆ ನಾಲ್ವರು ಮೃತಪಟ್ಟಿದ್ದಾರೆ. ಹೀಗಾಗಿ, ಈ ರೋಗದಿಂದ ಇದುವರೆಗೆ ಮೃತಪಟ್ಟವರ ಸಂಖ್ಯೆ 691ಕ್ಕೆ ಏರಿದೆ.

ಏ. 27ರಂದು 423, 26ರಂದು 433, 25ರಂದು 546 ಜನರಿಗೆ ಸೋಂಕು ದೃಢಪಟ್ಟಿತ್ತು. ಅಂದರೆ, ಕಳೆದ ನಾಲ್ಕು

ದಿನಗಳಲ್ಲಿ 2056 ಹೊಸ ಪ್ರಕರಣಗಳು ಪತ್ತೆಯಾಗಿವೆ! ಇನ್ನೂ ಕೆಲವು ದಿನ ಹೀಗೆಯೇ 500-600 ಪ್ರಕರಣ ಪತ್ತೆಯಾದಲ್ಲಿ ಮತ್ತು ಬೇರೆ ಜಿಲ್ಲೆಯ ಗಂಭೀರ ಪ್ರಕರಣಗಳು ಇಲ್ಲಿಗೆ ಸ್ಥಳಾಂತರಗೊಂಡರೆ ವೈದ್ಯರು ಮತ್ತು ಸಿಬ್ಬಂದಿ ಮೇಲೆ

ಭಾರಿ ಹೊರೆ ಬೀಳಲಿದೆ. ಕ್ರಮೇಣ, ಸದ್ಯ ಬೆಂಗಳೂರಿನಲ್ಲಿರುವ ಪರಿಸ್ಥಿತಿ ತಲೆದೋರುವ ಆತಂಕ ಮೂಡಿದೆ.