ಕೋಲಾರ: ಜಿಲ್ಲೆಯಲ್ಲಿ ಗುರುವಾರ ಕರೊನಾಗೆ ಇಬ್ಬರು ಮೃತಪಟ್ಟು ಕೇವಲ ೨೮ ಪ್ರಕರಣಗಳಷ್ಟೇ ವರದಿಯಾಗಿದೆ. ಕಳೆದ ನಾಲ್ಕು ದಿನಗಳಿಂದ ಹೊಸದಾಗಿ ಸಾವಿನ ಸಂಖ್ಯೆಯಲ್ಲಿ ಹಾಗೂ ಹೊಸದಾಗಿ ದೃಢಪಡುತ್ತಿರುವ ಕರೊನಾ ಸೋಂಕಿತರ ಸಂಖ್ಯೆಯಲ್ಲಿ ಇಳಿಮುಖ ಕಂಡಿದೆ. ನಿತ್ಯವೂ ೧೨೦೦-೧೪೦೦೦ ಮೇಲ್ಪಟ್ಟು ಮಾದರಿಗಳನ್ನು ಪರೀಕ್ಷೆಗೆ ಸಂಗ್ರಹಿಸಲಾಗುತ್ತಿದೆ. ಆದರೆ ಕಳೆದ ಎರಡು ವಾರಗಳ ಹಿಂದೆ ದೃಢಪಡುತ್ತಿರುವಷ್ಟು ಹೊಸ ಪ್ರಕರಣಗಳು ವರದಿಯಾಗುತ್ತಿಲ್ಲ. ಗುಣಮುಖರಾಗುತ್ತಿರುವವರ ಸಂಖ್ಯೆಯೂ ಹೆಚ್ಚಿಗಿದ್ದು, ಸಕ್ರೀಯ ಪ್ರಕರಣಗಳ ಸಂಖ್ಯೆ ೧೦೦೦ದ ಒಳಗಿರುವುದು ಸ್ವಲ್ಪ ಮಟ್ಟಿಗೆ ಸಮಾಧಾನ ಪಟ್ಟುಕೊಳ್ಳಬಹುದಾಗಿದೆ.
ಈ ದಿನ ಕೆಜಿಎಫ್‌ನಲ್ಲಿ ಇಬ್ಬರು ಕರೊನಾಗೆ ಬಲಿಯಾಗಿದ್ದಾರೆ. ಇದರೊಂದಿಗೆ ಸೋಂಕಿಗೆ ಪ್ರಾಣ ತೆತ್ತವರ ಸಂಖ್ಯೆ ೧೪೩ಕ್ಕೆ ಏರಿಕೆಯಾಗಿದೆ. ಕೋಲಾರದಲ್ಲಿ ೧೮ ಮಂದಿಗೆ ಹೊಸದಾಗಿ ಸೋಂಕು ಕಾಣಿಸಿಕೊಂಡರೆ ಮಾಲೂರಿನಲ್ಲಿ ೬ ಮತ್ತು ಮುಳಬಾಗಿಲಿನಲ್ಲಿ ೪ ಪ್ರಕರಣ ಸೇರಿ ಒಟ್ಟು ೨೮ ಮಂದಿಗೆ ಕರೊನಾ ದೃಢಪಟ್ಟಿದೆ. ಶ್ರೀನಿವಾಸಪುರ, ಕೆಜಿಎಫ್ ಮತ್ತು ಬಂಗಾರಪೇಟೆಯಲ್ಲಿ ಯಾವುದೇ ಪ್ರಕರಣ ದೃಢಪಟ್ಟಿಲ್ಲ ಎಂಬುದು ಈ ದಿನದ ವಿಶೇಷ.
ಸೋಂಕಿತರ ಪ್ರಥಮ ಸಂಪರ್ಕದಲ್ಲಿದ್ದ ೧೬೮ ಹಾಗೂ ದ್ವಿತೀಯ ಸಂಪರ್ಕದಲ್ಲಿದ್ದ ೮೪ ಮಂದಿಯ ಮೇಲೆ ನಿಗಾ ಇಡಲಾಗಿದೆ. ಈ ದಿನ ೧೪೨೩ ಮಾದರಿಗಳನ್ನು ಪರೀಕ್ಷೆಗೆ ಪಡೆಯಲಾಗಿದೆ. ೮೧೨ ಮಾದರಿಗಳ ಫಲಿತಾಂಶ ನೆಗೆಟಿವ್ ಬಂದಿದೆ. ೬೧೧ ಮಾದರಿಗಳ ಫಲಿತಾಂಶ ನಿರೀಕ್ಷೆಯಲ್ಲಿದೆ.
೧೪೮ ಮಂದಿ ಗುಣ: ಕೋಲಾರದಲ್ಲಿ ೫೮, ಮಾಲೂರಿನಲ್ಲಿ ೨೯, ಬಂಗಾರಪೇಟೆ ೮, ಕೆಜಿಎಫ್ ೨೫, ಮುಳಬಾಗಿಲು ೧೩, ಶ್ರೀನಿವಾಸಪುರದಲ್ಲಿ ೧೫ ಸೇರಿ ಒಟ್ಟು ೧೪೮ ಮಂದಿ ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ ೮೦೩೨ಕ್ಕೆ ಏರಿಕೆಯಾಗಿದ್ದು, ಇವರಲ್ಲಿ ೭೦೦೫ ಮಂದಿ ಗುಣಹೊಂದಿದ್ದಾರೆ. ಒಟ್ಟು ೮೮೪ ಸಕ್ರೀಯ ಪ್ರಕರಣಗಳಿವೆ. ೩೬ ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.