ಕಲಬುರಗಿ: ಕರೊನಾ ಸೋಂಕಿತರ ಪಟ್ಟಿಗೆ ಶುಕ್ರವಾರ ಮತ್ತೆರಡು ಪ್ರಕರಣಗಳು ಸೇರ್ಪಡೆಯಾಗಿವೆ. ಹೀಗಾಗಿ ಕಲಬುರಗಿ ಜಿಲ್ಲೆಯಲ್ಲಿ ಪ್ರಕರಣಗಳ ಸಂಖ್ಯೆ 55ಕ್ಕೇರಿದಂತಾಗಿದೆ. ಶುಕ್ರವಾರ ಒಬ್ಬ ಮಹಿಳೆ ಮತ್ತು ಒಬ್ಬ ಪುರುಷನಿಗೆ ಕರೋನಾ ಸೋಂಕು ಇರುವುದು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ತಿಳಿಸಿದ್ದಾರೆ.
56 ವರ್ಷದ ಪುರುಷನಿಗೆ (ಪಿ.587) ತೀವ್ರ ಉಸಿರಾಟದ ತೊಂದರೆ ಇರುವುದು ಪರೀಕ್ಷೆಯಿಂದ ಗೊತ್ತಾಗಿದೆ. ಈತನಿಗೆ ಸ್ಪಷ್ಟವಾದ ಟ್ರಾವೆಲ್ಸ್ ಹಿಸ್ಟರಿ ಗೊತ್ತಾಗಿಲ್ಲವಾದರೂ. ಲಭ್ಯವಾದ ಮಾಹಿತಿ ಪ್ರಕಾರ ನಗರದ ಪುಟಾಣಿ ಗಲ್ಲಿಯ ಸರಾಫ್ ಬಜಾರ ನಿವಾಸಿ ಎಂದು ಹೇಳಲಾಗುತ್ತಿದೆ. ಈತನಿಗೆ ಸೋಂಕು ಹೇಗೆ ತಗುಲಿತು ಎನ್ನುವುದನ್ನು ಆರೋಗ್ಯ ಇಲಾಖೆಯವರು ಪತ್ತೆ ಮಾಡಬೇಕಾಗಿದೆ.
ಅದರಂತೆ 20 ವರ್ಷದ ಯುವತಿಗೆ (ಪಿ. 588) ಮೋಮಿನಪುರದ 26 ವರ್ಷದ ಮಹಿಳೆ (ಪಿ. 425) ಜತೆ ನೇರ ಸಂಪರ್ಕ ಹೊಂದಿದ್ದರೆನ್ನಲಾಗಿದೆ. ಇವರನ್ನು ಇಲ್ಲಿಯ ಇಎಸ್ಐ ಐಸೋಲೇಟೆಡ್ ವಾರ್ಡಗೆ ಸೇರಿಸಲಾಗಿದೆ. ಅಲ್ಲದೇ ಇವರ ಜತೆ ಸಂಪರ್ಕಕ್ಕೆ ಬಂದಿರುವ ಪ್ರೈಮರಿ ಕಾಂಟ್ಯಾಕ್ಟ್ಗಳನ್ನು ಪತ್ತೆ ಹಚ್ಚಿ ಅವರನ್ನು ಸಹ ಕ್ವಾರಂಟೈನ್ ಕೇಂದ್ರಗಳಿಗೆ ಸೇರಿಸಲಾಗಿದೆ ಎನ್ನಲಾಗಿದೆ.
ಈ ಮಧ್ಯೆ ಇಂದು ಮತ್ತಿಬ್ಬರು ಕರೊನಾ ಸೋಂಕಿತರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ನಗರದ ಮೋಮಿನಪುರದ 51 ವರ್ಷದ ಪುರುಷ (ಪಿ.255) ಮತ್ತು ಸಂತ್ರಸವಾಡಿಯ 35 ವರ್ಷದ ಯುವತಿ (256) ಇವರಿಬ್ಬರು ಆಸ್ಪತ್ರೆಯಿಂದ ಮನೆಗಳಿಗೆ ತೆರಳಿದ್ದಾರೆ.
ಸೋಂಕಿಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಈವರೆಗೆ 4259 ಜನ ಶಂಕಿತರ ರಕ್ತ, ಗಂಟಲು ದೃವ ಟೆಸ್ಟ್ಗೆ ಕಳುಹಿಸಲಾಗಿತ್ತು. ಇವರಲ್ಲಿ 3821 ಜನರ ನೆಗೆಟಿವ್ ರಿಪೋಟರ್್ ಬಂದಿದೆ ಇನ್ನೂ 383 ಜನರ ಪರೀಕ್ಷಾ ವರದಿಗೆ ಕಾಯಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.
21 ಕಂಟೈನ್ಮೆಂಟ್ ಜೋನ್ಗಳಲ್ಲಿ 46247 ಮನೆಗಳ ಸಮೀಕ್ಷೆ ಕೈಗೊಳ್ಳಲಾಗಿದೆ. ಪ್ರೈಮರಿ ಕಾಂಟ್ಯಾಕ್ಟ್ಸ್ 748, ಸೆಕೆಂಡರಿ ಕಾಂಟ್ಯಾಕ್ಟ್ಸ್ 2565, ವಿದೇಶದಿಂದ ಬಂದ 488 ಜನರನ್ನು ಗುರುತಿಸಲಾಗಿದೆ. ಹೋಂ ಕ್ವಾರಂಟೈನ್ನಲ್ಲಿ 1325 ಜನರನ್ನು ಇರಿಸಲಾಗಿದೆ. ಈವರೆಗೆ 28 ದಿನ ಹೋಂ ಕ್ವಾರಂಟೈನ್ನಲ್ಲಿದ್ದ 1134, 14 ದಿನದ ಅವಧಿ ಮುಗಿಸಿದ 1219 ಜನರನ್ನು ಮುಕ್ತಗೊಳಿಸಲಾಗಿದೆ. 81 ಜನರನ್ನು ಇಎಸ್ಐಸಿ ಐಸೋಲೇಷನ್ ವಾಡರ್್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 14 ಜನ ಗುಣಮುಖರಾಗಿ ಮನೆಗಳಿಗೆ ತೆರಳಿದ್ದಾರೆ.