ಗದಗ: ಸಾರ್ವಜನಿಕರು ಪದೇ ಪದೆ ಮಾರ್ಕೆಟ್ಗೆ ಬರಬೇಡಿ. ತಮ್ಮ ಮನೆಬಾಗಿಲಿಗೆ ತರಕಾರಿ ಇತರೆ ದಿನಸಿ ವಸ್ತುಗಳು ತಲುಪುವಂತೆ ಜಿಲ್ಲಾಡಳಿತ ಕ್ರಮಕೈಗೊಂಡಿದೆ ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಜಿ.ಎಸ್. ಸಂಗ್ರೇಶಿ ಹೇಳಿದರು.
ಬೆಟಗೇರಿಯ ಹರಣಶಿಕಾರಿ ಕಾಲನಿಯಲ್ಲಿ ಶುಕ್ರವಾರ ಪಡಿತರವನ್ನು ವಿತರಿಸುವ ಸಂದರ್ಭದಲ್ಲಿ ಜನರಿಗೆ ಸೂಚನೆ ನೀಡಿದರು.
ಲಾಕ್ಡೌನ್ ನಿಯಮ ಪಾಲಿಸಿ ಸರ್ಕಾರದ ಜತೆಗೆ ಕೈಜೋಡಿಸಿ ಕರೊನಾ ವೈರಸ್ ನಿಮೂಲನೆ ಮಾಡಲು ಸಂಕಲ್ಪ ಮಾಡಬೇಕು ಎಂದರು.
ವ್ಯಾಪಾರಸ್ಥರು ತಮ್ಮ ಅಂಗಡಿಗೆ ಬರುವ ಸಾರ್ವಜನಿಕರಿಗೆ ಅಂತರ ಕಾಯ್ದುಕೊಳ್ಳುವಂತೆ ಸೂಚನೆ ನೀಡಬೇಕು. ಎಲ್ಲರೂ ಮಾಸ್ಕ್ ಬಳಕೆ ಮಾಡಬೇಕು. ಎಲ್ಲಿಯೂ ಗುಂಪು ಕೂಡಬಾರದು, ಕೆಲಸ ಮುಗಿದ ತಕ್ಷಣ ಸಾರ್ವಜನಿಕರು ಮನೆ ಸೇರಬೇಕು ಅನಗತ್ಯವಾಗಿ ಹೊರಗಡೆ ತಿರುಗಾಡಬೇಡಿ ಎಂದು ಸಲಹೆ ನೀಡಿದರು.
ಮಾರ್ಕೆಟ್ಗೆ ಭೇಟಿ ನೀಡಿ ಕಿರಾಣಿ ಅಂಗಡಿಯವರಿಗೆ ಕರೊನಾ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಅಂತರ ಕಾಯ್ದುಕೊಳ್ಳಬೇಕು ಎಂದು ಹೇಳಿದರು.
ಡಾ.ಎಸ್.ಎಸ್. ನೀಲಗುಂದ ನೇತೃತ್ವದ ತಜ್ಞ ವೈದ್ಯರು ಗರ್ಭಿಣಿ ಸೇರಿ ಇತರ ಮಹಿಳೆಯರ ತಪಾಸಣೆ ಕೈಗೊಂಡರು. ಗರ್ಭಿಣಿಗೆ ಬೇಕಾದ ಪೌಷ್ಟಿಕ ಆಹಾರ ಸರಬರಾಜು ಮಾಡಬೇಕೆಂು ಸಿಡಿಪಿಒ ದಿನೇಶ ಅವರಿಗೆ ನ್ಯಾಯಾಧೀಶರು ಸೂಚನೆ ನೀಡಿದರು.
ಜಿಲ್ಲಾ ವಿಕಲಚೇತನ ಅಧಿಕಾರಿ ಆಶು ನದಾಫ್ ಅವರು ವಿಕಲಚೇತನರಿಗೆ ಸೌಲಭ್ಯ ಒದಗಿಸಿಕೊಡಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್, ಗದಗ-ಬೆಟಗೇರಿ ನಗರಸಭೆ ಪೌರಾಯುಕ್ತ ಮನ್ಸೂರ ಅಲಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್.ಜಿ. ಸಲಗರೆ, ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ, ತಹಸೀಲ್ದಾರ ವೆಂಕಟೇಶಮೂರ್ತಿ ಕುಲಕರ್ಣಿ ಮತ್ತಿತರರು ಇದ್ದರು.
ಮಾಂಸದ ಮಾರುಕಟ್ಟೆ ಫುಲ್ ರಷ್
ಗದಗ ನಗರದಲ್ಲಿ ಶುಕ್ರವಾರದಿಂದ ನಾನ್ ವೆಜ್ ಮಾರ್ಕೆಟ್ ಓಪನ್ ಮಾಡಲು ಜಿಲ್ಲಾಡಳಿತ ಆದೇಶ ನೀಡಿದ್ದು, ದಿನಕ್ಕೆ 3 ಗಂಟೆ ಮಾತ್ರ ನಾನ್ವೆಜ್ ಅಂಗಡಿಗಳು ತೆರೆದಿರಬೇಕು ಎಂದು ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನಗರದ ಜವುಳಗಲ್ಲಿಯಲ್ಲಿರುವ ಮಾಂಸದ ಮಾರುಕಟ್ಟೆಗೆ ಎಸ್ಪಿ ಯತೀಶ.ಎನ್., ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಾಂಸ ಮಾರಾಟಗಾರರಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸೂಚನೆ ನೀಡಿದರು. ನಿಯಮ ಉಲ್ಲಂಘನೆ ಮಾಡಿದರೆ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಮಾಂಸ ಖರೀದಿಸಲು ಜನರು ತಂಡೋಪತಂಡವಾಗಿ ಆಗಮಿಸಿದ್ದರಿಂದ ಮಾರುಕಟ್ಟೆ ಫುಲ್ ರಷ್ ಆಗಿತ್ತು. ಈ ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಯ್ದಕೊಳ್ಳದೆ ತಮ್ಮಿಷ್ಟದಂತೆ ಜನರು ವರ್ತಿಸುತ್ತಿದ್ದರು.
ಭಿಕ್ಷುಕರು ಸ್ವಾಧಾರ ಕೇಂದ್ರಕ್ಕೆ
ಸಿಟಿ ರೌಂಡ್ಸ್ ವೇಳೆ ನಗರದಲ್ಲಿ ಊಟವಿಲ್ಲದೇ ಪರದಾಡುತ್ತಿದ್ದ ಇಬ್ಬರು ವೃದ್ಧ ಭಿಕ್ಷುಕರ ಪರಿಸ್ಥಿತಿ ನೋಡಿ ಮರುಗಿದ ನ್ಯಾಯಾಧೀಶರು ಅವರನ್ನು ಸ್ವಾಧಾರ ಕೇಂದ್ರಕ್ಕೆ ಕಳಿಸುವ ವ್ಯವಸ್ಥೆ ಮಾಡಿದರು. ತೋಂಟದಾರ್ಯಮಠದ ಬಳಿ ಕಾರ್ವಿುಕರಿಗೆ ಕಿಟ್ ವಿತರಿಸಿದರು. ನಂತರ ಸಬ್ ಜೈಲ್ಗೆ ತೆರಳಿ ಜೈಲು ಸಿಬ್ಬಂದಿ ಮತ್ತು ಕೈದಿಗಳಿಗೆ ಮಾಸ್ಕ್, ಸ್ಯಾನಿಟೈಜರ್, ಸೋಪ್ ಹೊಂದಿರುವ ಕಿಟ್ಗಳನ್ನು ವಿತರಿಸಿದರು.
EndFragment